image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಕಾಶ್ಮೀರ ನಮ್ಮದಾಗುತ್ತದೆ, ನಮಗೆ ಆಕ್ರಮಣ ಮಾಡುವ ಅಗತ್ಯವಿಲ್ಲ!- ರಕ್ಷಣಾ ಸಚಿವ ರಾಜನಾಥ್ ಸಿಂಗ್

ಕಾಶ್ಮೀರ ನಮ್ಮದಾಗುತ್ತದೆ, ನಮಗೆ ಆಕ್ರಮಣ ಮಾಡುವ ಅಗತ್ಯವಿಲ್ಲ!- ರಕ್ಷಣಾ ಸಚಿವ ರಾಜನಾಥ್ ಸಿಂಗ್

ಮೊರಾಕೊ - ಪಾಕಿಸ್ತಾನ ಆಕ್ರಮಿತ ಕಾಶ್ಮೀರ ತಾನಾಗಿಯೇ ನಮ್ಮದಾಗುತ್ತದೆ. ಅಲ್ಲಿ ಬೇಡಿಕೆಗಳು ಹೆಚ್ಚಾಗುತ್ತಿವೆ; ನೀವು ಘೋಷಣೆಗಳನ್ನು ಕೇಳಿರಬಹುದು. ಐದು ವರ್ಷಗಳ ಹಿಂದೆ ನಾನು ಕಾಶ್ಮೀರ ಕಣಿವೆಯ ಒಂದು ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ನಮಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಹೇಳಿದ್ದೆ. ಅದು ನಮ್ಮದು. ಪಾಕಿಸ್ತಾನ ಆಕ್ರಮಿತ ಕಾಶ್ಮೀರವೇ 'ನಾನೂ ಸಹ ಭಾರತ'ಎಂದು ಹೇಳುತ್ತದೆ. ಆ ದಿನ ಖಂಡಿತಾ ಬರುತ್ತದೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಇಲ್ಲಿ ಹೇಳಿದ್ದಾರೆ. ಅವರು ಆಫ್ರಿಕಾ ಖಂಡದ ಮೊರಾಕೊ ದೇಶಕ್ಕೆ ಎರಡು ದಿನಗಳ ಪ್ರವಾಸದಲ್ಲಿದ್ದಾಗ ಈ ಹೇಳಿಕೆ ನೀಡಿದ್ದಾರೆ. ಅವರ ಭೇಟಿಯ ಮುಖ್ಯ ಉದ್ದೇಶ 'ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್'ನ ಹೊಸ ಉತ್ಪಾದನಾ ಘಟಕವನ್ನು ಉದ್ಘಾಟಿಸುವುದಾಗಿತ್ತು, ಇದು ಆಫ್ರಿಕಾದಲ್ಲಿ ಭಾರತದ ಮೊದಲ ರಕ್ಷಣಾ ಉತ್ಪಾದನಾ ಘಟಕವಾಗಿದೆ.

Category
ಕರಾವಳಿ ತರಂಗಿಣಿ