ತಮಿಳುನಾಡು - ತಮಿಳುನಾಡಿನ ತಿರುನಲ್ವೇಲಿಯಲ್ಲಿ ಮಸೀದಿಯೊಂದು ಗ್ರಾಮದಲ್ಲಿನ 1 ಸಾವಿರ 100 ಎಕರೆ ಭೂಮಿ ವಕ್ಫ್ ಆಸ್ತಿ ಎಂದು ಹೇಳಿಕೊಂಡಿತ್ತು. ಈ ಭೂಮಿಯನ್ನು ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಕಾರ್ಯಗಳಿಗಾಗಿ ಮಾತ್ರ ಬಳಸಬೇಕು ಎಂದು ಹೇಳಲಾಗಿತ್ತು. ಈ ವಿಷಯವು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಬಂದಾಗ, ನ್ಯಾಯಾಲಯವು ಮಸೀದಿಯ ವಾದವನ್ನು ತಳ್ಳಿಹಾಕಿತು. ನ್ಯಾಯಾಲಯವು ವಕ್ಫ್ ಆಸ್ತಿ ಕೇವಲ 2 ಎಕರೆ 34 ಗುಂಟೆ ಮಾತ್ರ ಎಂದು ಸ್ಪಷ್ಟಪಡಿಸಿತು. 1712 ರಲ್ಲಿ ಮಧುರೈ ಸಂಸ್ಥಾನದ ಅಂದಿನ ಆಡಳಿತಗಾರ ಈ ಭೂಮಿಯನ್ನು ದಾನ ಮಾಡಿದ್ದಕ್ಕೆ ತಾಮ್ರಪತ್ರದ ಬಲವಾದ ಪುರಾವೆಗಳಿವೆ; ಆದರೆ ಉಳಿದ ಭೂಮಿ ಮಸೀದಿಗೆ ಸೇರಿದ್ದಲ್ಲ ಎಂದು ತಿಳಿಸಿದೆ.