image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಜಿಎಸ್​ಟಿ ಇಳಿಕೆ ಪರಿಣಾಮ ಕಾರುಗಳ ಬೆಲೆ ಇಳಿಕೆಯಿಂದ ಬಂಪರ್ ಸೇಲ್

ಜಿಎಸ್​ಟಿ ಇಳಿಕೆ ಪರಿಣಾಮ ಕಾರುಗಳ ಬೆಲೆ ಇಳಿಕೆಯಿಂದ ಬಂಪರ್ ಸೇಲ್

ನವದೆಹಲಿ : ಜಿಎಸ್​ಟಿ (GST) ಇಳಿಕೆಯ ಪರಿಣಾಮ ನಿರೀಕ್ಷೆಯಂತೆ ಆಟೊಮೊಬೈಲ್ ಮಾರುಕಟ್ಟೆ ಗರಿಗೆದರಿದೆ. ತೆರಿಗೆ ಇಳಿಕೆಗೊಂಡ ದಿನವೇ ಕಾರುಗಳ ಭರ್ಜರಿ ಮಾರಾಟ ಕಂಡಿದೆ. ದೇಶಾದ್ಯಂತ ಬಹುತೇಕ ಎಲ್ಲಾ ಕಾರು ಡೀಲರ್​ಗಳು ಎಂದಿಗಿಂತ ಹೆಚ್ಚು ಸೇಲ್ಸ್ ಮಾಡಿದ್ದಾರೆ. ಸೆಪ್ಟೆಂಬರ್ 22ರಂದು ಸರ್ಕಾರ ಹೊಸ ಜಿಎಸ್​ಟಿ ಕ್ರಮ ಜಾರಿಗೆ ತಂದಿತು. ಅದರಲ್ಲಿ ಹೆಚ್ಚಿನ ಸರಕುಗಳ ಬೆಲೆ ಕಡಿಮೆ ಆಗಿದೆ. ಕಾರುಗಳ ಮೇಲಿನ ತೆರಿಗೆ ಶೇ. 28 ಇದ್ದದ್ದು ಶೇ. 18ಕ್ಕೆ ಇಳಿದಿದೆ. ಇದರ ಪರಿಣಾಮವಾಗಿ ಕಾರುಗಳ ಬೆಲೆ ಸಾಕಷ್ಟು ಕಡಿಮೆ ಆಗಿದೆ.

ಭಾರತದ ಅಗ್ರಮಾನ್ಯ ವಾಹನ ತಯಾರಕರಾದ ಮಾರುತಿ ಸುಜುಕಿಯ 30,000 ಕಾರುಗಳು ಸೆಪ್ಟೆಂಬರ್ 22ರಂದು ಮಾರಾಟವಾಗಿರುವ ಅಂದಾಜು ಇದೆ. ಹ್ಯೂಂಡಾಯ್ ಮೋಟಾರ್ ಸಂಸ್ಥೆಯಂತೂ ಕಳೆದ 5 ವರ್ಷದಲ್ಲಿ ಅತಿಹೆಚ್ಚು ಒಂದು ದಿನದ ಸೇಲ್ಸ್ ಕಂಡಿದೆ. ಹ್ಯೂಂಡಾಯ್​ನ 11,000 ಕಾರುಗಳು ಸೆ. 22ರಂದು ಮಾರಾಟವಾಗಿವೆ ಎಂದು ಹೇಳಲಾಗಿದೆ. ಮಾರುತಿ ಸುಜುಕಿಯ ಡೀಲರ್​ಗಳು ನಿನ್ನೆ ಸೋಮವಾರ ಒಂದೇ ದಿನ 80,000 ಗ್ರಾಹಕರು ವಿಚಾರಿಸಿರುವುದು ದಾಖಲಾಗಿದೆ. ಸಣ್ಣ ಕಾರುಗಳಿಗೆ ಹೆಚ್ಚಿನ ಡಿಮ್ಯಾಂಡ್ ಬಂದಿದೆ. ಆಟೊಮೊಬೈಲ್ ಡೀಲರ್​ಗಳ ಒಕ್ಕೂಟವಾದ ಎಫ್​ಎಡಿಎ ಸೋಮವಾರ ದೊಡ್ಡ ಸಂಖ್ಯೆಯಲ್ಲಿ ಜನರು ಶೋರೂಮುಗಳಿಗೆ ಬಂದು ಹೋಗಿದ್ದಾರೆ ಎಂದು ಹೇಳಿದೆ. ಕಾರುಗಳ ಮೇಲೆ ಶೇ. 28ರಷ್ಟು ಇದ್ದ ಜಿಎಸ್​ಟಿ ದರ ಇದೀಗ ಶೇ. 18 ಮತ್ತು ಶೇ. 5ಕ್ಕೆ ಇಳಿದಿದೆ. 1,200 ಸಿಸಿ ಹಾಗೂ ಕಡಿಮೆ ಎಂಜಿನ್ ಸಾಮರ್ಥ್ಯದ ಕಾರುಗಳ ಬೆಲೆ ಸಾಕಷ್ಟು ತಗ್ಗಿದೆ. ಒಟ್ಟಾರೆ 30 ಲಕ್ಷ ರೂವರೆಗೂ ಕಾರುಗಳ ಬೆಲೆ ಕಡಿಮೆ ಆಗಿದೆ. 

Category
ಕರಾವಳಿ ತರಂಗಿಣಿ