image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಅಕ್ರಮ ಕಂಡುಬಂದರೆ, ಬಿಹಾರದ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ರದ್ದುಗೊಳಿಸಲಾಗುವುದು : ಸುಪ್ರೀಂ ಕೋರ್ಟ್

ಅಕ್ರಮ ಕಂಡುಬಂದರೆ, ಬಿಹಾರದ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ರದ್ದುಗೊಳಿಸಲಾಗುವುದು : ಸುಪ್ರೀಂ ಕೋರ್ಟ್

 ಹೊಸದಿಲ್ಲಿ: ಭಾರತೀಯ ಚುನಾವಣಾ ಆಯೋಗ ಅಳವಡಿಸಿಕೊಂಡ ವಿಧಾನದಲ್ಲಿ ಯಾವುದೇ ಅಕ್ರಮ ಕಂಡುಬಂದರೆ, ಬಿಹಾರದ ಮತದಾರರ ಪಟ್ಟಿಯ ಸಂಪೂರ್ಣ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ರದ್ದುಗೊಳಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಸಮೀಕ್ಷೆಯ ವಿರುದ್ಧದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು, ಸಾಂವಿಧಾನಿಕ ಪ್ರಾಧಿಕಾರವಾಗಿರುವುದರಿಂದ, ಚುನಾವಣಾ ಸಮಿತಿಯು ಎಸ್‌ ಐಆರ್ ಮಾಡುವಲ್ಲಿ ಕಾನೂನು ಮತ್ತು ಕಡ್ಡಾಯ ನಿಯಮಗಳನ್ನು ಪಾಲಿಸಿದೆ ಎಂದು ಭಾವಿಸಲಾಗಿದೆ ಎಂದು ಹೇಳಿದೆ. ಈ ವಿಷಯದ ಬಗ್ಗೆ ಯಾವುದೇ ಮಧ್ಯಂತರ ಅಭಿಪ್ರಾಯವನ್ನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ತನ್ನ ಅಂತಿಮ ತೀರ್ಪು ಎಸ್‌ಐಆರ್ ವಿಚಾರದ ಮೇಲೆ ಇಡೀ ಭಾರತಕ್ಕೆ ಪರಿಣಾಮ ಬೀರುತ್ತದೆ ಎಂದು ಪೀಠ ಸ್ಪಷ್ಟಪಡಿಸಿತು. ಬಿಹಾರದಲ್ಲಿ ಎಸ್‌ ಐಆರ್ ಸಿಂಧುತ್ವದ ಕುರಿತ ಅಂತಿಮ ಅಂತಿಮ ವಾದಗಳನ್ನು ಅ.7ರಂದು ಆಲಿಸಲಾಗುವುದು ಎಂದು ಪೀಠ ಹೇಳಿತು.

Category
ಕರಾವಳಿ ತರಂಗಿಣಿ