image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ನೇಪಾಳ ಪ್ರಧಾನಿ ಸುಶೀಲಾ ಕರ್ಕಿ ಮೊದಲ ಘೋಷಣೆಗೆ ಪೋಷಕರು ಭಾವುಕ

ನೇಪಾಳ ಪ್ರಧಾನಿ ಸುಶೀಲಾ ಕರ್ಕಿ ಮೊದಲ ಘೋಷಣೆಗೆ ಪೋಷಕರು ಭಾವುಕ

ಕಾಠ್ಮಂಡು : ನೇಪಾಳದಲ್ಲಿ ಕೆಪಿ ಶರ್ಮಾ ಒಲಿ ಸರ್ಕಾರ ಪತನಗೊಂಡು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಶೀಲಾ ಕರ್ಕಿ ಹಂಗಾಮಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನೇಪಾಳದಲ್ಲಿ ಝೆನ್ ಜೀ ನಡೆಸಿದ ಪ್ರತಿಭಟೆಯಲ್ಲಿ ಸರ್ಕಾರ ಪತನಗೊಂಡಿತ್ತು, ನೇಪಾಳದ ಹಲವು ನಾಯಕರು ಪ್ರಾಣ ಭಯದಿಂದ ಓಡಿ ಹೋಗಿದ್ದಾರೆ. ಆಕ್ರೋಶಿತರ ಗುಂಪು ನೇಪಾಳವನ್ನು ಸುಟ್ಟು ಬೂದಿ ಮಾಡಿತ್ತು. ಮಧ್ಯಪ್ರವೇಶ ಮಾಡಿದ ನೇಪಾಳ ಸೇನೆ, ಮಧ್ಯಂತರ ಸರ್ಕಾರ ರಚನೆ ಮಾಡಿದೆ. ಸುಶೀಲಾ ಕರ್ಕಿ ಹೆಸರನ್ನೂ ಝೆನ್‌ ಜಿ ಹೋರಾಟಗಾರರು ಸೂಚಿಸಿದ್ದರು. ಇದರಂತೆ ಸುಶೀಲಾ ಇದೀಗ ಅಧಿಕಾರ ವಹಿಸಿಕೊಂಡು ತಮ್ಮ ಮೊದಲ ನಿರ್ಧಾರ ಘೋಷಿಸಿದ್ದಾರೆ. ಸುಶೀಲಾ ಕರ್ಕಿ ಅಧಿಕಾರವಹಿಸಿಕೊಂಡ ಬಳಿಕ ತಮ್ಮ ಮೊದಲ ನಿರ್ಧಾರ ಘೋಷಿಸಿದ್ದಾರೆ. ಇದು ನೇಪಾಳದ ಸರ್ಕಾರವನ್ನು ಬೀಳಿಸುಲ ಝೆನ್ ಝೀ ನಡೆಸಿದ ಹೋರಾಟದ ಕುರಿತಾಗಿದೆ. ಈ ಹೋರಾಟದಲ್ಲಿ ಒಟ್ಟು 51 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಹೋರಾಟಗಾರರೇ ಹೆಚ್ಚು. ಇದೀಗ ಝೆನ್ ಜಿ ಪ್ರತಿಭಟನೆಯಲ್ಲಿ ಮೃತಪಟ್ಟ ಎಲ್ಲಾ ಹೋರಾಟಗಾರರನ್ನು ಹುತಾತ್ಮ ಎಂದು ಪರಿಗಣಿಸಲಾಗುತ್ತದೆ. ಅವರಿಗೆ ಎಲ್ಲಾ ಗೌರವ ಸಿಗಲಿದೆ ಎಂದು ಸುಶೀಲಾ ಕರ್ಕಿ ಹೇಳಿದ್ದಾರೆ.

ನೇಪಾಳ ಪ್ರತಿಭಟನೆಯಲ್ಲಿ ಮೃತಪಟ್ಟ ಪ್ರತಿಭಟನಾಕಾರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇದೇ ವೇಳೆ 1,300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಚಿಕಿತ್ಸೆಗೆ ಎಲ್ಲಾ ನೆರವು ಸರ್ಕಾರ ನೀಡಲಿದೆ ಎಂದು ಸುಶೀಲಾ ಕರ್ಕಿ ಹೇಳಿದ್ದಾರೆ. ಝೆನ್ ಝೀ ಪ್ರತಿಭಟನೆಯಲ್ಲಿ ಹಲವರು ಮೃತಪಟ್ಟಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ತೀವ್ರ ನೋವು ತಂದಿದೆ. ಪ್ರತಿಭಟನೆ ಮಾಡಿದವರ ಮೇಲೆ ಈ ರೀತಿಯ ಕ್ರಮ ಸಲ್ಲದು. ಪ್ರತಿಭಟನೆ ಪ್ರತಿಯೊಬ್ಬರ ಹಕ್ಕು, ನಿಯಂತ್ರಣಕ್ಕೆ ಹಲವ ಮಾರ್ಗಗಳಿವೆ. ಈ ಸಾವು ನೋವು ನೋವು ತಂದಿದೆ ಎಂದು ಸುಶೀಲಾ ಕರ್ಕಿ ಹೇಳಿದ್ದಾರೆ. ನಾನು ಯಾವುದೇ ಅಧಿಕಾರಕ್ಕಾಗಿ ಪ್ರಧಾನಿಯಾಗಿಲ್ಲ. ನಾನು ಪ್ರಧಾನಿಯಾಗಬೇಕು ಎಂದು ಬಯಸಿದ ವ್ಯಕ್ತಿಯೂ ಅಲ್ಲ. ಪರಿಸ್ಥಿತಿ ಪ್ರಧಾನಿಯನ್ನಾಗಿ ಮಾಡಿದೆ. ಮಹತ್ತರ ಜವಾಬ್ದಾರಿ ನೀಡಿದೆ. ಇದೀಗ ನೇಪಾಳದಲ್ಲಿ ಮಡುಗಟ್ಟಿದ ಭ್ರಷ್ಟವ್ಯವಸ್ಥೆಯನ್ನು ಸರಿಪಡಿಸಬೇಕು. ನೇಪಾಳವನ್ನು ಕಟ್ಟಿ ಬೆಳೆಸಬೇಕಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಪರ್ಕ ಆಡಳಿತ ನಡೆಸಬೇಕಿದೆ ಎಂದು ಸುಶೀಲಾ ಕರ್ಕಿ ಹೇಳಿದ್ದಾರೆ. ನಾನು ಹಾಗೂ ನನ್ನ ತಂಡ 6 ತಿಂಗಳಿಗಿಂತ ಹೆಚ್ಚು ಇಲ್ಲಿರುವುದಿಲ್ಲ. ಮುಂದಿನ ಚುನಾಯಿತಿ ಸರ್ಕಾರಕ್ಕೆ ಅಧಿಕಾರ ಹಸ್ತಾಂತರ ಮಾಡುತ್ತೇವೆ. ನಿಮ್ಮೆಲ್ಲರ ಸಹಕಾರ ಅಗತ್ಯ. ಈ ಸಂಕಷ್ಟದ ಸಂದರ್ಭದಲ್ಲಿ ನಾವು ಒಗ್ಗಟ್ಟಿನಿಂದ ಇರಬೇಕು ಎಂದು ಸುಶೀಲಾ ಕರ್ಕಿ ಮನವಿ ಮಾಡಿದ್ದಾರೆ.

Category
ಕರಾವಳಿ ತರಂಗಿಣಿ