image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸಾತ್ವಿಕ್‌-ಚಿರಾಗ್‌ ಹಾಂಕಾಂಗ್‌ ಬ್ಯಾಡ್ಮಿಂಟನ್‌ ಫೈನಲ್‌ಗೆ ಲಗ್ಗೆ

ಸಾತ್ವಿಕ್‌-ಚಿರಾಗ್‌ ಹಾಂಕಾಂಗ್‌ ಬ್ಯಾಡ್ಮಿಂಟನ್‌ ಫೈನಲ್‌ಗೆ ಲಗ್ಗೆ

ಹಾಕಾಂಗ್‌: ಭಾರತದ ಭರವಸೆಯ ಶಟ್ಲರ್‌ಗಳಾದ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಹಾಂಕಾಂಗ್‌ ಓಪನ್‌ ಸೂಪರ್‌-500 ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಇದು ಪ್ರಸಕ್ತ ಸೀಸನ್‌ನಲ್ಲಿ ಇವರು ಕಾಣುತ್ತಿರುವ ಮೊದಲ ಫೈನಲ್‌ ಆಗಿದೆ. ವಿಶ್ವದ ನಂ. 9ನೇ ರ್‍ಯಾಂಕ್‌ನ ಜೋಡಿಯಾಗಿರುವ ಸಾತ್ವಿಕ್‌-ಚಿರಾಗ್‌ ಶನಿವಾರದ ಸೆಮಿಫೈನಲ್‌ನಲ್ಲಿ ತೈವಾನ್‌ನ ಬಿಂಗ್‌ ವೀ ಲಿನ್‌-ಚೆನ್‌ ಚೆಂಗ್‌ ಕೌನ್‌ ವಿರುದ್ಧ 21-17, 21-15 ಅಂತರದ ಜಯ ಸಾಧಿಸಿದರು. ಈ ವರ್ಷದ ಇದಕ್ಕೂ ಹಿಂದಿನ 6 ಸೆಮಿಫೈನಲ್‌ಗ‌ಳಲ್ಲಿ ಭಾರತೀಯ ಜೋಡಿಗೆ ಸೋಲು ಎದುರಾಗಿತ್ತು. ಫೈನಲ್‌ನಲ್ಲಿ ಇವರು ಚೀನದ ಲಿಯಾಂಗ್‌ ವೀ ಕೆಂಗ್‌-ವಾಂಗ್‌ ಚಾಂಗ್‌ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಇವರು ಚೈನೀಸ್‌ ತೈಪೆಯ ಫಾಂಗ್‌ ಚಿಹ್‌ ಲೀ-ಫಾಂಗ್‌ ಜೆನ್‌ ಲೀ ವಿರುದ್ಧ 21-19, 21-8 ಅಂತರದಿಂದ ಗೆದ್ದು ಬಂದರು.

Category
ಕರಾವಳಿ ತರಂಗಿಣಿ