ಹೊಸದಿಲ್ಲಿ: ದೇಶಿಯವಾಗಿ ನಿರ್ಮಿಸಲಾಗುವ 114 ರಫೇಲ್ ಯುದ್ಧ ವಿಮಾನಗಳಿಗಾಗಿ ಭಾರತೀಯ ವಾಯು ಪಡೆಯಿಂದ ಪ್ರಸ್ತಾವನೆಯನ್ನು ರಕ್ಷಣ ಸಚಿವಾಲಯ ಸ್ವೀಕರಿಸಿದೆ. ಜತೆಗೆ ಈ ಬಗ್ಗೆ ಇಲಾಖೆಯಲ್ಲಿ ಚರ್ಚೆಗಳು ಪ್ರಾರಂಭವಾಗಿದೆ ಎಂದು ವರದಿಯಾಗಿದೆ. ಫ್ರಾನ್ಸ್‌ನ ಡಸಾಲ್ಟ್ ಏವಿಯೇ ಷನ್ ಸಂಸ್ಥೆಯು, ಭಾರತದ ವಾಯು ಯಾನ ಸಂಸ್ಥೆಗಳ ಸಹಯೋಗದಲ್ಲಿ ಈ ಯುದ್ಧ ವಿಮಾನಗಳನ್ನು ನಿರ್ಮಿಸಲಿದೆ. ಈ ಪ್ರಸ್ತಾವನೆಯ ಮೊತ್ತ 2 ಲಕ್ಷ ಕೋಟಿ ರೂ. ಮೀರುವ ನಿರೀಕ್ಷೆಯಿದೆ. ಇಲಾಖೆ ಯಲ್ಲಿ ಚರ್ಚೆಯಾದ ಬಳಿಕ ಪ್ರಸ್ತಾವನೆ ಯನ್ನು ರಕ್ಷಣ ಖರೀದಿ ಮಂಡಳಿಗೆ ತಲುಪಿಸಲಾಗುತ್ತದೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ. ಭಾರತದಲ್ಲಿ ಸದ್ಯ 36 ರಫೇಲ್ ವಿಮಾನಗಳಿದ್ದು, ಇನ್ನೂ 26 ವಿಮಾನಗಳು ಆಗಮಿಸಬೇಕಿದೆ.