image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮರಾಠ ಮೀಸಲಾತಿಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮನೋಜ್ ಜರಾಂಗೆ ಪಾಟೀಲ್ ಬೇಡಿಕೆಗೆ ಸರ್ಕಾರ ಒಪ್ಪಿಗೆ

ಮರಾಠ ಮೀಸಲಾತಿಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮನೋಜ್ ಜರಾಂಗೆ ಪಾಟೀಲ್ ಬೇಡಿಕೆಗೆ ಸರ್ಕಾರ ಒಪ್ಪಿಗೆ

ಮುಂಬೈ: ಮರಾಠ ಮೀಸಲಾತಿಗೆ ಒತ್ತಾಯಿಸಿ ಮುಂಬೈನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮನೋಜ್ ಜರಾಂಗೆ ಪಾಟೀಲ್ ಬೇಡಿಕೆಗೆ ಸರ್ಕಾರ ಒಪ್ಪಿಕೊಂಡ ಹಿನ್ನೆಲೆ ಅವರು ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟಿದ್ದು, ಚಿಕಿತ್ಸೆಗಾಗಿ ಛತ್ರಪತಿ ಸಂಭಾಜಿನಗರದ ಗ್ಯಾಲಕ್ಸಿ ಆಸ್ಪತ್ರೆಗೆ ಅವರನ್ನು ದಾಖಲಾಗಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ ನಂತರ ವೈದ್ಯರು  ಪರೀಕ್ಷೆ ನಡೆಸಿದ್ದು, ದೀರ್ಘಕಾಲದ ಉಪವಾಸ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಮುಂದಿನ ಕೆಲವು ದಿನಗಳವರೆಗೆ ಅವರಿಗೆ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯವಾಗಿದೆ ಎಂದು ಡಾ. ವಿನೋದ್ ಚವಾರೆ ತಿಳಿಸಿದ್ದಾರೆ. ಪ್ರಸ್ತುತ ಚಿಕಿತ್ಸೆ ಪ್ರಗತಿಯಲ್ಲಿದ್ದು, ವೈದ್ಯರು ಅವರಿಗೆ ಕನಿಷ್ಠ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಅವರನ್ನು ಎಲ್ಲಾ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಮಜೋಜ್ ಜರಾಂಗೆ ಪಾಟೀಲ್​​ ಅವರ ಬೇಡಿಕೆಗಳನ್ನು ಒಪ್ಪಿಕೊಂಡಿದ್ದರಿಂದ ಸಂತಸಗೊಂಡಿದ್ದು,. ನಗರದಲ್ಲಿ ಸಂಭ್ರಮವಿದೆ. ಸರ್ಕಾರದ ಈ ನಿರ್ಧಾರವನ್ನು ರಾಜ್ಯಾದ್ಯಂತ ಸ್ವಾಗತಿಸಲಾಗುತ್ತಿದೆ. ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲೂ ಮರಾಠಾ ಸಮುದಾಯದ ವಿವಿಧ ವರ್ಗಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಗಿದೆ. ಹಲವೆಡೆ ಸಿಹಿತಿಂಡಿಗಳನ್ನು ವಿತರಿಸುವ ಮೂಲಕ ಸಂತೋಷ ವ್ಯಕ್ತಪಡಿಸಲಾಗಿದೆ. ಈ ನಿರ್ಧಾರವು ಮರಾಠಾ ಸಮುದಾಯದ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಸಮಾಧಾನ ತಂದಿದೆ. ರಾಜ್ಯ ಸರ್ಕಾರ ಮತ್ತು ಮನೋಜ್ ಜರಾಂಗೆ ಪಾಟೀಲ್​​ ಅವರನ್ನು ಸಮುದಾಯವು ವಿಶೇಷವಾಗಿ ಪ್ರಶಂಸಿಸುತ್ತಿದೆ. ಮರಾಠಾ ಸಮುದಾಯದ ಹೋರಾಟದ ಈ ಗೆಲುವು ಐತಿಹಾಸಿಕವಾಗಿದೆ ಎಂಬ ಎಂದು ಸಮುದಾಯ ತಿಳಿಸಿದೆ. 

ಮರಾಠಾ ಚಳವಳಿಗಾರ ಮನೋಜ್ ಜರಾಂಗೇ ಪಾಟೀಲ್ ಚಿಕಿತ್ಸೆಗಾಗಿ ನಗರಕ್ಕೆ ಬರುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಕೂಡಲೇ, ಮರಾಠಾ ಸಹೋದರರು ಮಧ್ಯರಾತ್ರಿ ಆಸ್ಪತ್ರೆಯ ಹೊರಗೆ ಜಮಾಯಿಸಿದ್ದರು. ಜರಾಂಗೆ ಪಾಟೀಲ್ ಅವರು ಆಂಬ್ಯುಲೆನ್ಸ್​ ಮೂಲಕ ತಡರಾತ್ರಿ 1 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಾದರು. ಈ ವೇಳೆ ಆಸ್ಪತ್ರೆ ಸುತ್ತ ಜಮಾಯಿಸಿದ್ದ ಜನರು ಪಟಾಕಿ ಸಿಡಿಸಿ, ಹೂವುಗಳನ್ನು ಸುರಿಸುವುದರ ಮೂಲಕ ಅವರನ್ನು ಸ್ವಾಗತಿಸಿದರು. ಈ ವೇಳೆ, ನಗರ ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದರು. ಮುಂದಿನ 15 ದಿನಗಳವರೆಗೆ ಚಿಕಿತ್ಸೆಗಾಗಿ ಅವರು ಆಸ್ಪತ್ರೆಯಲ್ಲೇ ಇರುವುದರಿಂದ ಜನರ ದಟ್ಟಣೆ ಹೆಚ್ಚುವ ನಿರೀಕ್ಷೆ ಇದ್ದು, ಜನರು ಸಹಕಾರ ನೀಡುವಂತೆ ಸಹಾಯಕ ಪೊಲೀಸ್ ಆಯುಕ್ತ ಮನೀಶ್ ಕಲ್ಯಾಣ್ಕರ್ ಜನಸಾಮಾನ್ಯರಲ್ಲಿ ಮನವಿ ಮಾಡಿದ್ದಾರೆ.

Category
ಕರಾವಳಿ ತರಂಗಿಣಿ