ನವದೆಹಲಿ: ವಾಣಿಜ್ಯ ಬಳಕೆಗಾಗಿ ಇರುವ 19 ಕೆಜಿ ತೂಕದ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (LPG) ಸಿಲಿಂಡರ್‌ಗಳ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು 51.50 ರೂ.ನಷ್ಟು ಇಳಿಸಿದೆ. ಇಂದು ಇಂದಿನಿಂದ ಅಂದರೆ ಸೆ.1ರಿಂದಲೇ ಜಾರಿಗೆ ಬಂದಿದೆ. ಆದರೆ, 14.2ಕೆಜಿ ತೂಕದ ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರಮುಖ ನಗರಗಳಲ್ಲಿನ ವಾಣಿಜ್ಯ ಸಿಲಿಂಡರ್‌ಗಳ ಹೊಸ ದರಗಳು ಹೀಗಿವೆ: ದೆಹಲಿಯಲ್ಲಿ19 ಕೆಜಿ ತೂಕದ LPG ಸಿಲಿಂಡರ್ನ ಚಿಲ್ಲರೆ ಮಾರಾಟ ಬೆಲೆ ಮೊದಲು 1,631.50 ಇತ್ತು, ಈಗ 1,580 ರೂಗೆ ಇಳಿಕೆಯಾಗಿದೆ. ಹಾಗೇ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಾರ, ಕೋಲ್ಕತ್ತಾದಲ್ಲಿ LPG ಸಿಲಿಂಡರ್ನ ಬೆಲೆ ಸದ್ಯ ಬದಲಾವಣೆ ನಂತರ ₹1,684, ಮುಂಬೈನಲ್ಲಿ ₹1,531.50, ಮತ್ತು ಚೆನ್ನೈನಲ್ಲಿ ₹1,738 ಕ್ಕೆ ಪರಿಷ್ಕರಿಸಲಾಗಿದೆ. ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಬದಲಾವಣೆಯಿಲ್ಲ: ಏಪ್ರಿಲ್ 8ರಿಂದ 14.2ಕೆಜಿ ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆ ಸ್ಥಿರವಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಮಾಹಿತಿ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಸಿಲಿಂಡರ್‌ಗೆ ₹853, ಚೆನ್ನೈನಲ್ಲಿ ₹868.50, ಕೋಲ್ಕತ್ತಾದಲ್ಲಿ ₹879 ಮತ್ತು ಮುಂಬೈನಲ್ಲಿ ₹852.50 ದರ ಮುಂದುವರಿದಿದೆ. ವಾಣಿಜ್ಯ ಬಳಕೆಗಾಗಿ ಇರುವ 19 ಕೆಜಿ ತೂಕದ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (LPG) ಸಿಲಿಂಡರ್‌ಗಳ ಬೆಲೆ ಇಳಿಕೆಯು ದೈನಂದಿನ ಕೆಲಸಕ್ಕಾಗಿ ಈ ಸಿಲಿಂಡರ್‌ಗಳನ್ನು ಅವಲಂಬಿಸಿರುವ ಸಣ್ಣ ಅಂಗಡಿಗಳು, ಹೋಟೆಲ್‌ಗಳು ಮತ್ತು ಆಹಾರ ವ್ಯಾಪಾರಗಳಂತಹ ಸಣ್ಣ ಉದ್ಯಮಗಳಿಗೆ ಬಹಳ ಪ್ರಯೋಜನಕಾರಿಯಾಗಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ದೇಶದಲ್ಲಿ ಎಲ್‌ಪಿಜಿ ಬೆಲೆಗಳನ್ನು ಸ್ಥಿರವಾಗಿಡಲು ಸಾಧ್ಯವಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಆಗಸ್ಟ್‌ನಲ್ಲಿ ತಿಳಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಂಪುಟವು, ಆಗಸ್ಟ್ 8 ರಂದು ಜಾಗತಿಕ ಅನಿಶ್ಚಿತತೆಯ ನಡುವೆಯೂ ಎಲ್‌ಪಿಜಿ ಬೆಲೆಗಳನ್ನು ಸ್ಥಿರವಾಗಿ ಇರಿಸಿದ ತೈಲ ಕಂಪನಿಗಳಿಗೆ ₹30,000 ಕೋಟಿ ಪರಿಹಾರವನ್ನು ಹನ್ನೆರಡು ಭಾಗಗಳಲ್ಲಿ ಪಾವತಿಸಲು ಅನುಮೋದನೆ ನೀಡಿದೆ. ಕಳೆದ ತಿಂಗಳು ಏಪ್ರಿಲ್ನಲ್ಲಿ ಅಡುಗೆ ಅನಿಲ ಅಥವಾ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 50 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಈ ಬಗ್ಗೆ ಕೇಂದ್ರ ತೈಲ ಇಲಾಖೆ ಸಚಿವ ಹರ್ ದೀಪ್ ಸಿಂಗ್ ಪುರಿ ಅಧಿಕೃತವಾಗಿ ತಿಳಿಸಿದ್ದರು. ಸಬ್ಸಿಡಿ ಮತ್ತು ಸಾಮಾನ್ಯ ವರ್ಗದ ಎಲ್ಲಾ ಗ್ರಾಹಕರಿಗೆ ಬೆಲೆಯನ್ನು ಹೆಚ್ಚಿಸಲಾಗಿತ್ತು. 14.2 ಕೆಜಿ ಎಲ್ಪಿಜಿಯ ಬೆಲೆ ಉಜ್ವಲಾ ಅಡಿ 500 ರಿಂದ 550ಕ್ಕೆ ಮತ್ತು ಉಜ್ವಲಾ ಅಲ್ಲದ ಬಳಕೆದಾರರಿಗೆ 803 ರಿಂದ 853 ರೂಪಾಯಿಗೆ ಏರಿಕೆ ಮಾಡಲಾಗಿತ್ತು.