ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕೊನೆಗಾಣಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲನ್ಸ್ಕಿ ನಡುವೆ ಮಾತುಕತೆ ನಡೆಯಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಮಾಸ್ಕೋದ ಕೆಲವು ದೀರ್ಘಕಾಲದ ಬೇಡಿಕೆಗಳಿಗೆ ಉಕ್ರೇನಿಯನ್ನರು ಒಪ್ಪುವವರೆಗೆ ಪುಟಿನ್ ಝೆಲೆನ್ಸ್ಕಿಯನ್ನು ಭೇಟಿಯಾಗುವುದಿಲ್ಲ ಎಂದು ರಷ್ಯಾದ ಉನ್ನತ ರಾಜತಾಂತ್ರಿಕರೊಬ್ಬರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ರಷ್ಯಾದ ಈ ನಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ದೊಡ್ಡ ಹಿನ್ನಡೆಯಾಗಿದ್ದು, ಇವರಿಬ್ಬರ ಭೇಟಿ ನಡೆಸುವುದು ಎಣ್ಣೆ ಮತ್ತು ಸೀಗೆಕಾಯಿಯ ಮಿಶ್ರಣದಂತೆ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಪುಟಿನ್ ಮತ್ತು ಝೆಲೆನ್ಸ್ಕಿ ಒಟ್ಟಿಗೆ ಕೆಲಸ ಮಾಡಲಿದ್ದಾರೆಯೇ ಎಂಬುದನ್ನು ನೋಡಲಿದ್ದೇವೆ. ನಿಮಗೆ ಗೊತ್ತಿದೆ ಅವರು ಸ್ವಲ್ಪ ಎಣ್ಣೆ ಸೀಗೆಕಾಯಿಯಂತೆ. ಕೆಲವು ಕಾರಣಗಳಿಂದ ಅವರು ಚೆನ್ನಾಗಿ ಹೊಂದಿಕೊಳ್ಳುವುದಿಲ್ಲ ಎಂದು ವಾಷಿಂಗ್ಟನ್ನಲ್ಲಿ ತಿಳಿಸಿದ್ದಾರೆ. ಮಾಸ್ಕೋ ಮತ್ತು ಕೀವ್ ನಡುವೆ ಶಾಂತಿ ನಡೆಸುವ ಪ್ರಯತ್ನಗಳನ್ನು ಕಳೆದೊಂದು ವಾರದಿಂದ ಟ್ರಂಪ್ ಆರಂಭಿಸಿದ್ದಾರೆ. ಶೀಘ್ರದಲ್ಲೇ ಪುಟಿನ್ ಮತ್ತು ಝೆಲೆನ್ಸ್ಕಿ ನಡುವೆ ನೇರ ಮಾತುಕತೆಗಳಿಗೆ ವ್ಯವಸ್ಥೆ ಮಾಡಲು ಪ್ರಾರಂಭಿಸುವುದಾಗಿ ತಿಳಿಸಿದ್ದರು. ಆದರೆ, ಇದಾದ ನಾಲ್ಕು ದಿನಗಳಲ್ಲೇ ಟ್ರಂಪ್ ಆಶಾವಾದ ಕಡಿಮೆಯಾಗಿದೆ. ಎರಡು ದೇಶದ ನಾಯಕರ ನಡುವೆ ನೇರ ಮಾತುಕತೆ ಇನ್ನೂ ನಿಗದಿಯಾಗದಿದ್ದರೆ ಎರಡು ವಾರಗಳಲ್ಲಿ ತಮ್ಮ ಮುಂದಿನ ಕ್ರಮಗಳ ಕುರಿತು ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಅವರು ಸಭೆ ನಡೆಸುತ್ತಾರೋ ಇಲ್ಲವೋ ಎಂದು ನಾವು ನೋಡಲಿದ್ದೇವೆ. ಇದು ಆಸಕ್ತಿದಾಯಕವಾಗಿರಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಇದು ರಷ್ಯಾದ ಮೇಲೆ ಹೊಸ ನಿರ್ಬಂಧಗಳು ಅಥವಾ ಸುಂಕಗಳನ್ನು ವಿಧಿಸುವ ಸಾಧ್ಯತೆಯನ್ನು ತಿಳಿಸಿದ್ದು, ಈ ಹಿಂದೆ ಕೂಡ ಈ ರೀತಿಯ ಬೆದರಿಕೆಗೆ ರಷ್ಯಾ ಬಗ್ಗದ ಹಿನ್ನಲೆ ಹಾಗೇ ತೇಲಿಹಾಕಿದ್ದರು. ರಷ್ಯಾದ ದಾಳಿಯನ್ನು ತಡೆಯಲು ಉಕ್ರೇನ್ ಪಾಶ್ಚಿಮಾತ್ಯ ದೇಶಗಳ ಭದ್ರತೆಯನ್ನು ಬೇಡುತ್ತಿದ್ದು, ಇದು ಹೇಗೆ ಕೆಲಸ ಮಾಡಲಿದೆ ಎಂಬ ಕುರಿತ ಪ್ರಸ್ತಾಪ ಮಾಡಲು ಅಮೆರಿಕ ಮತ್ತು ಯುರೋಪ್ಗಳು ಪರದಾಡುತ್ತಿವೆ. ಈ ಕುರಿತು ಮಾತನಾಡಿರುವ ರಷ್ಯಾ ರಾಜತಾಂತ್ರಿಕ ಅಧಿಕಾರಿ, ಮಾಸ್ಕೋದ ಮಧ್ಯಸ್ಥಿಕೆ ಇಲ್ಲದೇ ಉಕ್ರೇನ್ಗೆ ಭದ್ರತಾ ವ್ಯವಸ್ಥೆ ನೀಡುವುದು ಅಸಾಧ್ಯ ಎಂದಿದ್ದಾರೆ. ಸರೊವ್ಗೆ ಪುಟಿನ್ ಭೇಟಿ ನೀಡಿದ್ದು, ಇದು ರಷ್ಯಾದ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮದ ಬೇಸ್ ಇರುವ ಪೂರ್ವ ಮಾಸ್ಕೋದಿಂದ 230 ಮೈಲಿ ದೂರಲಿದ್ದೆ. ಈ ಭೇಟಿಯು ರಷ್ಯಾ ಪರಮಾಣು ಶಕ್ತಿಯಲ್ಲಿ ಜಗತ್ತಿನ ಪ್ರಬಲ ರಾಷ್ಟ್ರದಲ್ಲಿ ಒಂದಾಗಿದೆ ಎಂಬುದನ್ನು ಸೂಚಿಸಿದೆ. ಮಾಸ್ಕೋದ ಷರತ್ತುಗಳು ಯುದ್ದ ಕೊನೆಗಾಣಿಸಿ ರಷ್ಯಾಕ್ಕೆ ಭೂಮಿ ಬಿಟ್ಟುಕೊಡಲು ಪುಟಿನ್ ಹೆಣೆದಿರುವ ಬಲೆಯಾಗಿದೆ ಎಂದು ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥರು ಇದೇ ವೇಳೆ ಆರೋಪಿಸಿದ್ದಾರೆ.