image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪೆಹೆಲ್ಗಾಮ್ ದಾಳಿ ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಕ್ ಅಧಿಕಾರಿಗಳು ಬಾಗಿ : ಭಯೋತ್ಪಾದಕರಿಗೆ ಬಹಿರಂಗ ಬೆಂಬಲ ಸೂಚಿಸಿದ ಪಾಕಿಸ್ತಾನ

ಪೆಹೆಲ್ಗಾಮ್ ದಾಳಿ ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಕ್ ಅಧಿಕಾರಿಗಳು ಬಾಗಿ : ಭಯೋತ್ಪಾದಕರಿಗೆ ಬಹಿರಂಗ ಬೆಂಬಲ ಸೂಚಿಸಿದ ಪಾಕಿಸ್ತಾನ

ನವದೆಹಲಿ: ಪಹಲ್ಗಾಮ್ ಹತ್ಯಾಕಾಂಡದ ಹಿಂದೆ ಪಾಕಿಸ್ತಾನದ ಕೈವಾಡ ಇರುವುದು ಮತ್ತೊಮ್ಮೆ ಬಯಲಾಗಿದೆ. ಪಹಲ್ಗಾಮ್​ ದಾಳಿಕೋರರ ಪೈಕಿ ಒಬ್ಬನಾದ ತಹೀರ್ ಹಬೀಬ್ ಅಲಿಯಾಸ್ ಅಫ್ಘಾನಿಯ ಅಂತ್ಯಕ್ರಿಯೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನಡೆದಿದ್ದು, ಅದರಲ್ಲಿ ಪಾಕ್​​ನ ಸೇನಾಧಿಕಾರಿಗಳು ಮತ್ತು ಲಷ್ಕರ್​ ಎ ತೊಯ್ಬಾದ ಉಗ್ರರು ಭಾಗಿಯಾಗಿದ್ದರು. ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಕ್​​ನ ಸೇನೆ ಭಾಗಿಯಾಗಿದ್ದು ಇದು ಎರಡನೇ ಬಾರಿ. ಆಪರೇಷನ್​ ಸಿಂದೂರ ಕಾರ್ಯಾಚರಣೆಯಲ್ಲಿ ಹತರಾದ ಉಗ್ರರ ಅಂತ್ಯಕ್ರಿಯೆಯಲ್ಲೂ ಅಲ್ಲಿನ ಸೇನಾಧಿಕಾರಿಗಳು ಭಾಗಿಯಾಗಿದ್ದರು. ಭಾರತೀಯ ಸೇನೆ ಇತ್ತೀಚೆಗೆ ನಡೆಸಿದ 'ಆಪರೇಷನ್ ಮಹಾದೇವ್‌' ಕಾರ್ಯಾಚರಣೆಯಲ್ಲಿ ಪಹಲ್ಗಾಮ್​ ದಾಳಿಕೋರರಲ್ಲಿ ಒಬ್ಬನಾದ ಉಗ್ರ ತಹೀರ್ ಹಬೀಬ್ ಅಲಿಯಾಸ್ ಅಫ್ಘಾನಿ ಹತ್ಯೆಗೀಡಾಗಿದ್ದ. ಸಾವು ಖಚಿತವಾದ ಹಿನ್ನೆಲೆ ಆತನ ಕುಟುಂಬಸ್ಥರು ಇಸ್ಲಾಂ ಸಂಪ್ರದಾಯದ ಜನಾಜಾ ಎ ಗೈಬ್ (ಮೃತದೇಹ ರಹಿತ ಅಂತ್ಯಕ್ರಿಯೆ) ಪ್ರಾರ್ಥನೆ ಸಲ್ಲಿಸಿ ಅಂತ್ಯಕ್ರಿಯೆ ಮಾಡಿದ್ದಾರೆ.

ಪಿಒಕೆಯ ರಾವಲ್ ಕೋಟ್ ಖೈಗಲಾ ಗ್ರಾಮದಲ್ಲಿ ಈ ಅಂತ್ಯಕ್ರಿಯೆ ನಡೆದಿದೆ. ಆ ವೇಳೆ ಸ್ಥಳೀಯ ಲಷ್ಕರ್ ಕಮಾಂಡರ್ ರಿಜ್ವಾನ್ ಹನೀಫ್ ಮತ್ತು ಪಾಕ್​ನ ಸೇನೆಯ ಸಿಬ್ಬಂದಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಪ್ರಯತ್ನಿಸಿದ್ದಾರೆ. ಆದರೆ, ಉಗ್ರನ ಕುಟುಂಬಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಘರ್ಷಣೆಯೂ ನಡೆದಿದೆ. ಭಯೋತ್ಪಾದಕರು ಸ್ಥಳೀಯರನ್ನು ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳಿಂದ ಬೆದರಿಸಿದ್ದಾರೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪಹಲ್ಗಾಮ್​ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್​ ಸಿಂದೂರ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದ ಲಷ್ಕರ್​ ಎ ತೊಯ್ಬಾದ ಉಗ್ರರ ಸಾಮೂಹಿಕ ಅಂತ್ಯಕ್ರಿಯೆ ನಡೆದಿತ್ತು. ಅಂದು ಪಾಕಿಸ್ತಾನದ ಸೇನಾ ಕಮಾಂಡರ್​​ಗಳು ಉಗ್ರರಿಗೆ ಅಂತಿಮ ನಮನ ಸಲ್ಲಿಸಿದ್ದರು. ಇದರ ವಿಡಿಯೋಗಳು ಲಭ್ಯವಾಗಿದ್ದವು. ಈ ಕುರಿತು ಭಾರತ ಸರ್ಕಾರವು ಹಲವು ಸಾಕ್ಷಿಗಳನ್ನು ಸಂಗ್ರಹಿಸಿತ್ತು. ಮೂರು ವರ್ಷಗಳ ಹಿಂದೆ ಪಾಕಿಸ್ತಾನದಿಂದ 20 ರಿಂದ 25 ಭಯೋತ್ಪಾದಕರು ಭಾರತಕ್ಕೆ ನುಸುಳಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. 2024 ರಲ್ಲಿ, ಅವರು ಎರಡು ಗುಂಪುಗಳಾಗಿ ವಿಭಜಿಸಲ್ಪಟ್ಟರು. ಅದರಲ್ಲಿನ ಒಂದು ಗುಂಪಿಗೆ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯ ಮಾಸ್ಟರ್​ಮೈಂಡ್​ ಸುಲೇಮಾನ್ ನೇತೃತ್ವ ವಹಿಸಿದ್ದ. ಇನ್ನೊಂದು ಗುಂಪಿಗೆ ಮೂಸಾ ಎಂಬ ಬಂದೂಕುಧಾರಿ ನಾಯಕನಾಗಿದ್ದ. ಈ ಎರಡೂ ಉಗ್ರರ ಗುಂಪುಗಳು ಭದ್ರತಾ ಪಡೆಗಳ ಮೇಲೆ ಹಲವು ಬಾರಿ ದಾಳಿ ಮಾಡಿವೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

Category
ಕರಾವಳಿ ತರಂಗಿಣಿ