image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಭಾರತ ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಟ್ರಂಪ್‌ರ ಡೆಡ್‌ ಎಕಾನಮಿ ಹೇಳಿಕೆಗೆ ಮೋದಿ ತಿರುಗೇಟು

ಭಾರತ ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಟ್ರಂಪ್‌ರ ಡೆಡ್‌ ಎಕಾನಮಿ ಹೇಳಿಕೆಗೆ ಮೋದಿ ತಿರುಗೇಟು

ವಾರಣಾಸಿ : ಭಾರತ ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ 'ಭಾರತ ಸತ್ತ ಆರ್ಥಿಕತೆ' ಎಂಬ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ. ಟ್ರಂಪ್‌ರ 25% ಸುಂಕ ಘೋಷಣೆಗೆ ಇಂದು ವಾರಣಾಸಿಯಲ್ಲಿ ತೀಕ್ಷ್ಯವಾಗಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ವಿಶ್ವ ಆರ್ಥಿಕತೆಯು ಅನೇಕ ಆತಂಕಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಭಾರತ ತನ್ನ ರೈತರು, ಸಣ್ಣ ಕೈಗಾರಿಕೆಗಳು ಮತ್ತು ಯುವಕರ ಉದ್ಯೋಗಕ್ಕೆ ಆದ್ಯತೆ ನೀಡುತ್ತಿದೆ. ನಮ್ಮ ಸರ್ಕಾರ ದೇಶದ ಹಿತಾಸಕ್ತಿಗಾಗಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿ ಎಲ್ಲ ಭಾರತೀಯರಿಗೆ 'ಸ್ವದೇಶಿ' ಉತ್ಪನ್ನಗಳಿಗೆ ಪ್ರತಿಜ್ಞೆ ಮಾಡುವಂತೆ ಮನವಿ ಮಾಡಿದ್ದಾರೆ. 'ಜಗತ್ತು ಅಸ್ಥಿರತೆಯ ವಾತಾವರಣವನ್ನು ಎದುರಿಸುತ್ತಿರುವಾಗ, ಸ್ವದೇಶಿ ವಸ್ತುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ನಿರ್ಣಯವು ದೇಶಕ್ಕೆ ನಿಜವಾದ ಸೇವೆಯಾಗಲಿದೆ. ಇದು ಮಹಾತ್ಮ ಗಾಂಧಿಯವರಿಗೆ ಒಂದು ಗೌರವವಾಗಿರುತ್ತದೆ' ಎಂದರು.

ಜುಲೈ 31 ರಂದು ಟ್ರಂಪ್ ಭಾರತದ ಆಮದುಗಳ ಮೇಲೆ 25% ಸುಂಕ ವಿಧಿಸುವುದಾಗಿ ಘೋಷಿಸಿದ್ದರು. ಒಂದು ದಿನದ ನಂತರ, ಭಾರತ-ರಷ್ಯಾ ಸಂಬಂಧಗಳನ್ನು ಟೀಕಿಸಿ, ಎರಡೂ ದೇಶಗಳನ್ನು 'ಸತ್ತ ಆರ್ಥಿಕತೆಗಳು' ಎಂದು ಟೂತ್‌ ಸೋಶಿಯಲ್‌ನಲ್ಲಿ ಕರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಭಾರತದ ಆರ್ಥಿಕ ಪ್ರಗತಿ ಬೆಳವಣಿಗೆ ಏರಿಕೆಯಾಗುತ್ತಿದೆ. ದೇಶದ ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ತಮ್ಮ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.

Category
ಕರಾವಳಿ ತರಂಗಿಣಿ