image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪೂಂಚ್​ನಲ್ಲಿ 'ಆಪರೇಷನ್ ಶಿವಶಕ್ತಿ' : ಒಳನುಸುಳಲು ಯತ್ನಿಸಿದ ಇಬ್ಬರು ಭಯೋತ್ಪಾದಕರ ಹತ್ಯೆ

ಪೂಂಚ್​ನಲ್ಲಿ 'ಆಪರೇಷನ್ ಶಿವಶಕ್ತಿ' : ಒಳನುಸುಳಲು ಯತ್ನಿಸಿದ ಇಬ್ಬರು ಭಯೋತ್ಪಾದಕರ ಹತ್ಯೆ

ಜಮ್ಮು ಕಾಶ್ಮೀರ: ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಭಯೋತ್ಪಾದಕರನ್ನು ಕಾಶ್ಮೀರದ ದಚಿಗಾಮ್ ಅರಣ್ಯದಲ್ಲಿ ನಡೆದ ಎನ್ಕೌಂಟರ್​​ನಲ್ಲಿ ಹೊಡೆದುರುಳಿಸಿದ್ದ ಭಾರತೀಯ ಸೇನಾ ಪಡೆಗಳು, ಬುಧವಾರ ಪೂಂಚ್ ಜಿಲ್ಲೆಯಲ್ಲಿ 'ಆಪರೇಷನ್ ಶಿವಶಕ್ತಿ' ಕೈಗೊಂಡು ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿವೆ. ಹತರಾದ ಉಗ್ರರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಮಾಹಿತಿ ಪ್ರಕಾರ, ಇದು ಪಾಕಿಸ್ತಾನದ ದುಷ್ಟೃತ್ಯದ ಯೋಜನೆ ವಿರುದ್ಧ ಕೈಗೊಂಡ ಪ್ರಮುಖ ಕಾರ್ಯಾಚರಣೆಯಾಗಿದೆ. ''ಆಪರೇಷನ್​ ಶಿವಶಕ್ತಿ.. ಯಶಸ್ವಿ ಒಳನುಸುಳುವಿಕೆ ವಿರೋಧಿ ಕಾರ್ಯಾಚರಣೆಯಲ್ಲಿ, ಭಾರತೀಯ ಸೇನಾ ಪಡೆಗಳು ನಿಯಂತ್ರಣ ರೇಖೆಯನ್ನು ದಾಟಿ ನುಸುಳಲು ಯತ್ನಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿವೆ. ತ್ವರಿತ ಕ್ರಮ ಮತ್ತು ನಿಖರವಾದ ಗುಂಡಿನ ದಾಳಿಯ ಮೂಲಕ ದುಷ್ಕೃತ್ಯದ ಯೋಜನೆಗಳನ್ನು ವಿಫಲಗೊಳಸಲಾಗಿದೆ. ಮೂರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುಪ್ತಚರ ಇಲಾಖೆಗಳು ಮತ್ತು ಜಮ್ಮು ಕಾಶ್ಮೀರ ಪೊಲೀಸರ ಮಾಹಿತಿ ಹಿನ್ನೆಲೆಯಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಯಿತು. ಸದ್ಯ ಕಾರ್ಯಾಚರಣೆ ಪ್ರಗತಿಯಲ್ಲಿದೆ'' ಎಂದು ವೈಟ್ ನೈಟ್ ಕಾರ್ಪ್ಸ್ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದೆ.

ಇದಕ್ಕೂ ಮುನ್ನ ಎನ್​​ಕೌಂಟರ್​ ಬಗ್ಗೆೆ ವಿವರಿಸಿದ್ದ ರಕ್ಷಣಾ ವಕ್ತಾರರು, ಎಲ್ಒಸಿ ಬಳಿ ಶಂಕಿತರ ಚಲನೆ ಕಂಡುಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದರು. ಮಂಗಳವಾರ ತಡರಾತ್ರಿ ದೇಗ್ವಾರ್ ಸೆಕ್ಟರ್‌ನ ಮಾಲ್ಡಿವಾಲನ್ ಪ್ರದೇಶದಲ್ಲಿ ಭಯೋತ್ಪಾದಕರು ನುಸುಳುತ್ತಿರುವ ಬಗ್ಗೆ ಸೇನಾ ಪಡೆಗಳು ಗಮನಿಸಿದವು. ಬಳಿ ಪರಸ್ಪರ ಗುಂಡಿನ ದಾಳಿಯೊಂದಿಗೆ ಎನ್​​​ಕೌಂಟರ್​​ ಆರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ