image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

8.45 ಕೋಟಿ ಮೌಲ್ಯದ ಬಹುಮಾನ ಘೋಷಿಸಿ 55 ನಕ್ಸಲರ ಬಂಧನಕ್ಕೆ ಶೋಧ

8.45 ಕೋಟಿ ಮೌಲ್ಯದ ಬಹುಮಾನ ಘೋಷಿಸಿ 55 ನಕ್ಸಲರ ಬಂಧನಕ್ಕೆ ಶೋಧ

ಜಾರ್ಖಂಡ್​ : ಸಿಪಿಐ (ಮಾವೋವಾದಿ) ಕಮಾಂಡರ್​ ಸೇರಿದಂತೆ ಒಟ್ಟಾರೆ 8.45 ಕೋಟಿ ಮೌಲ್ಯದ ಬಹುಮಾನ ಘೋಷಿತವಾಗಿರುವ 55 ನಕ್ಸಲರ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಜಾರ್ಖಂಡ್​ ಪೊಲೀಸರು ಪೊಲೀಸರು ತಿಳಿಸಿದ್ದಾರೆ. ರಾಜ್ಯದಲ್ಲಿ ಕಳೆದ ಆರು ತಿಂಗಳಿನಿಂದ ನಕ್ಸರ್ ಶೋಧ ಕಾರ್ಯವನ್ನು ಭದ್ರತಾ ಪಡೆಗಳು ತೀವ್ರಗೊಳಿಸಿವೆ. ಇದುವರೆಗೂ ನಕ್ಸಲ್​ ನಿಗ್ರಹ ಪಡೆಗಳ ಮುಂದೆ 10 ಮಂದಿ ಶರಣಾಗತರಾಗಿದ್ದು, 17 ಮಂದಿ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಅಲ್ಲಿನ ಪೊಲೀಸ್​ ಮೂಲಗಳು ತಿಳಿಸಿವೆ. ಈ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಭದ್ರತಾ ಪಡೆಗಳಿಂದ ಲೂಟಿ ಮಾಡಿದ 31 ಶಸ್ತ್ರಾಸ್ತ್ರಗಳೂ ಸೇರಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

2025ರ ಆರಂಭದಿಂದ ಇಲ್ಲಿವರೆಗೂ ಅಂದರೆ ಜೂನ್​ವರೆಗೆ ಒಟ್ಟಾರೆ 197 ನಕ್ಸಲರನ್ನು ಬಂಧಿಸಲಾಗಿದೆ. ಅವರಲ್ಲಿ ಇಬ್ಬರು ಪ್ರಾದೇಶಿಕ ಸಮಿತಿ ಸದಸ್ಯರು, ಒಬ್ಬ ವಲಯ ಕಮಾಂಡರ್, ಒಬ್ಬ ಉಪ-ವಲಯ ಕಮಾಂಡರ್ ಮತ್ತು ಏಳು ಪ್ರದೇಶ ಕಮಾಂಡರ್‌ಗಳು ಸೇರಿದ್ದಾರೆ. ಒಟ್ಟಾರೆ 10 ನಕ್ಸಲರು ಪೊಲೀಸರ ಮುಂದೆ ಇದುವರೆಗೂ ಶರಣಾಗಿದ್ದು, ಎನ್​ಕೌಂಟರ್​ನಲ್ಲಿ 17 ಜನರನ್ನು ಹತ್ಯೆ ಮಾಡಲಾಗಿದೆ ಎಂದು ಐಜಿಪಿ ಮೈಕಲ್​ ಎಸ್​ ರಾಜ್​ ತಿಳಿಸಿದರು. 8.45 ಕೋಟಿ ಬಹುಮಾನ ಘೋಷಿತ 55 ಮಾವೋವಾದಿಗಳ ಪತ್ತೆಗೆ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಈ 55 ನಕ್ಸಲರಲ್ಲಿ ಪ್ರಮುಖ ಮಾವೋ ಕಮಾಂಡರ್​ ಆದ ಮಿಸಿರ್​ ಬೆಸ್ರಾ, ಆಸಿಮ್​ ಮಂಡಲ್​, ಅನಲ್​ ಡಾ ಮತ್ತು ಅನೂಜ್​ ಕೂಡ ಇದ್ದು, ಇವರು ತಲಾ ಕೋಟಿ ಬಹುಮಾನ ಘೋಷಿತ ನಕ್ಸಲರಾಗಿದ್ದಾರೆ ಎಂದು ಜಾರ್ಖಂಡ್​ ಪೊಲೀಸರು ತಿಳಿಸಿದ್ದಾರೆ.ಈ ಕಾರ್ಯಾಚರಣೆ ವೇಳೆ 113 ಶಸ್ತ್ರಾಸ್ತ್ರಗಳನ್ನು ಹಾಗೂ 8,591 ಮದ್ದು ಗುಂಡು, 177 ಕೆಜಿ ಸ್ಪೋಟಕ ವಸ್ತು ಮತ್ತು 179 ಐಇಡಿ ಬಾಂಬ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಜಾರ್ಖಂಡ್​ ಮತ್ತು ಒಡಿಶಾ ಪೊಲೀಸ್​ ಜಂಟಿ ಕಾರ್ಯಾಚರಣೆಯಲ್ಲಿ ಪೊಲೀಸರು 3,811 ಕೆಜಿ ಜಿಲೆಟಿನ್​ ಗಳನ್ನು ಇದುವರೆಗೂ ವಶಕ್ಕೆ ಪಡೆಯಲಾಗಿದೆ. ಈ ನಡುವೆ ಕೇಂದ್ರ ಸರ್ಕಾರ ಸಂಪೂರ್ಣ ನಕ್ಸಲ್ ಮುಕ್ತ ಮಾಡಲು ಪಣತೊಟ್ಟಿದೆ. ಹೀಗಾಗಿ ನಕ್ಸಲರ ವಿರುದ್ಧ ಎಡಬಿಡದೇ ಕಾರ್ಯಾಚರಣೆ ಮುಂದುವರಿಸಲಾಗಿದೆ. ಒಂದೆಡೆ ನಕ್ಸಲರನ್ನು ಶರಣಾಗತಿ ಆಗುವಂತೆ ಮಾಡಲಾಗುತ್ತಿದ್ದರೆ ಮತ್ತೊಂದು ಕಡೆ ನಿರಂತರ ಕಾರ್ಯಾಚರಣೆ ಮುಂದುವರೆಸಲಾಗುತ್ತಿದೆ.

Category
ಕರಾವಳಿ ತರಂಗಿಣಿ