image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಭಾರತ, ಚೀನಾ, ಬ್ರೆಜಿಲ್​ ದೇಶಗಳಿಗೆ NATO ಮುಖ್ಯಸ್ಥರ ಎಚ್ಚರಿಕೆ

ಭಾರತ, ಚೀನಾ, ಬ್ರೆಜಿಲ್​ ದೇಶಗಳಿಗೆ NATO ಮುಖ್ಯಸ್ಥರ ಎಚ್ಚರಿಕೆ

ಅಮೇರಿಕಾ : ರಷ್ಯಾದೊಂದಿಗೆ ಭಾರತ, ಚೀನಾ ಮತ್ತು ಬ್ರೆಜಿಲ್​ಗಳು ವ್ಯಾಪಾರ ಮುಂದುವರೆಸಿದರೆ ಆರ್ಥಿಕ ನಿರ್ಬಂಧಗಳಿಂದ ತೀವ್ರ ತೊಂದರೆ ಎದುರಿಸಬೇಕಾದೀತು ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಎಚ್ಚರಿಕೆ ನೀಡಿದ್ದಾರೆ. 50 ದಿನದೊಳಗೆ ರಷ್ಯಾ ಶಾಂತಿ ಮಾತುಕತೆಯ ವಿಚಾರವಾಗಿ ಗಂಭೀರವಾಗಿ ವರ್ತಿಸದೆ ಹೋದಲ್ಲಿ ಭಾರತ, ಚೀನಾ ಮತ್ತು ಬ್ರೆಜಿಲ್‌ನಂತಹ ದೇಶಗಳ ಮೇಲೆ ನಿರ್ಬಂಧಗಳನ್ನು ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತಿಳಿಸಿದ್ದಾರೆ. ಈ ಮೂರು ದೇಶಗಳ ಮುಖ್ಯಸ್ಥರುಗಳು ರಷ್ಯಾಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಅವರಿಗೆ ಕರೆ ಮಾಡಿ ಶಾಂತಿ ಮಾತುಕತೆಗೆ ಒತ್ತಾಯಿಸಬೇಕು ಎಂದು ರುಟ್ಟೆ ಒತ್ತಡ ಹೇರಿದ್ದಾರೆ.

ರಷ್ಯಾ ಉಕ್ರೇನ್ ಮೇಲಿನ ಯುದ್ಧ ಕೊನೆಗೊಳಿಸದಿದ್ದರೆ, ರಷ್ಯಾದ ವ್ಯಾಪಾರ ಪಾಲುದಾರರ ಮೇಲೆ ಶೇಕಡಾ 100ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದು, ರಷ್ಯಾದ ಇಂಧನ ವ್ಯಾಪಾರದ ಬಹುಪಾಲು ಪಾಲು ಹೊಂದಿರುವ ಭಾರತ, ಚೀನಾ ಮತ್ತು ಬ್ರೆಜಿಲ್ ಆರ್ಥಿಕತೆಗಳ ಮೇಲೆ ಅಗಾಧ ಪರಿಣಾಮ ಬೀರಲಿದೆ ಎಂದು ಅವರು ತಿಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಹಾಕಿರುವ ಬೆದರಿಕೆ ಕುರಿತು ಮಾತನಾಡಿರುವ ನ್ಯಾಟೋ ಪ್ರಧಾನ ಕಾರ್ಯದರ್ಶಿ, ಭಾರತ, ಚೀನಾ ಮತ್ತು ಬ್ರೆಜಿಲ್​ಗಳು ತೈಲ ಮತ್ತು ಅನಿಲ ಖರೀದಿ ವ್ಯವಹಾರ ಮುಂದುವರೆಸಿದರೆ, ರಷ್ಯಾ ಶಾಂತಿ ಮಾತುಕತೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ನಾನು ಶೇ100ರಷ್ಟು ದ್ವಿತೀಯ ಹಂತದ ನಿರ್ಬಂಧಗಳನ್ನು ಹಾಕುವುದಾಗಿ ಹೇಳಿದ್ದಾರೆ.

ಈ ಮೂಲಕ ಉಕ್ರೇನ್​-ರಷ್ಯಾ ಸಂಘರ್ಷ ನಿಲ್ಲಿಸಲು ಟ್ರಂಪ್ ಹೊಸ ತಂತ್ರಕ್ಕೆ ಮುಂದಾಗಿದ್ದು, ಹಲವು ಬಾರಿ ಕದನ ವಿರಾಮದ ಮಾತುಕತೆ ನಡೆಸುವಂತೆ ಒತ್ತಾಯಿಸಿದಾಗ್ಯೂ ರಷ್ಯಾ ಯುದ್ಧ ಮುಂದುವರೆಸಿದ್ದು, ಇದೀಗ ರಷ್ಯಾದ ತೈಲ ಪಾಲುದಾರಿಕೆ ರಾಷ್ಟ್ರಗಳ ಮೂಲಕ ಅಮೆರಿಕ ಒತ್ತಡ ತಂತ್ರ ನಡೆಸುತ್ತಿದೆ. ರಷ್ಯಾ ಮತ್ತು ಉಕ್ರೇನ್​ ಯುದ್ಧ ನಿಲ್ಲಿಸಿ, ಕದನ ವಿರಾಮ ಮಾತುಕತೆಗೆ ಆರಂಭಿಸಬೇಕು ಎಂಬ ಟ್ರಂಪ್​ ಹಲವು ಆಗ್ರಹಗಳು ಪ್ರಯೋಜನ ಕಂಡಿಲ್ಲ. ಈ ನಡುವೆ ಉಕ್ರೇನ್​ನ ಮತ್ತಷ್ಟು ಭೂ ಪ್ರದೇಶವನ್ನು ರಷ್ಯಾ ವಶಕ್ಕೆ ಪಡೆಯಲು ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟ್ರಂಪ್​ 50 ದಿನದ ಗಡುವಿನಿಂದಿಗೆ ರಷ್ಯಾದ ಪಾಲುದಾರ ರಾಷ್ಟ್ರಗಳೊಂದಿಗೆ ಸಂಘರ್ಷ ನಿಲ್ಲಿಸುವ ಒತ್ತಡಕ್ಕೆ ಮುಂದಾಗಿದ್ದಾರೆ.

Category
ಕರಾವಳಿ ತರಂಗಿಣಿ