image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

17 ವಲಸೆ ನ್ಯಾಯಾಲಯಗಳ ನ್ಯಾಯಾಧೀಶರನ್ನು ವಜಾಗೊಳಿಸಿದ : ಟ್ರಂಪ್ ಸರಕಾರ

17 ವಲಸೆ ನ್ಯಾಯಾಲಯಗಳ ನ್ಯಾಯಾಧೀಶರನ್ನು ವಜಾಗೊಳಿಸಿದ : ಟ್ರಂಪ್ ಸರಕಾರ

ವಾಷಿಂಗ್ಟನ್ : ಡೊನಾಲ್ಡ್​ ಟ್ರಂಪ್​ ಅಮೆರಿಕದ ಅಧ್ಯಕ್ಷರಾದ ಬಳಿಕ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ಪ್ರಕ್ರಿಯೆ ಜೋರಾಗಿದೆ. ಗಡಿಪಾರಾಗಬೇಕಾದ ಜನರು ವಲಸೆ ನ್ಯಾಯಾಲಯಗಳ ಮೊರೆ ಹೋಗುತ್ತಿದ್ದರು. ಇದನ್ನು ತಡೆಯಲು ಟ್ರಂಪ್​ ಸರ್ಕಾರ ಇತ್ತೀಚೆಗೆ 17 ವಲಸೆ ನ್ಯಾಯಾಲಯಗಳ ನ್ಯಾಯಾಧೀಶರನ್ನು ವಜಾಗೊಳಿಸಿದೆ. ವಲಸೆ ನ್ಯಾಯಾಲಯಗಳ ಮೂಲಕ ರಕ್ಷಣೆ ಪಡೆಯಲು ಯತ್ನಿಸುತ್ತಿದ್ದ ವಲಸಿಗರಿಗೆ ಇದು ತೀವ್ರ ಆತಂಕ ಉಂಟು ಮಾಡಿದೆ. ವಲಸೆ ಕೋರ್ಟ್‌ಗಳ ನ್ಯಾಯಾಧೀಶರನ್ನು ವಜಾಗೊಳಿಸುವ ಮುನ್ನ ಅವರಿಗೆ ಯಾವುದೇ ಕಾರಣ ನೀಡಲಾಗಿಲ್ಲ ಎಂಬುದು ವಿಶೇಷ. ಈ ಬಗ್ಗೆ ಮಾಹಿತಿ ನೀಡಿರುವ ವಲಸೆ ಕೋರ್ಟ್​ಗಳ ನ್ಯಾಯಾಧೀಶರು ಮತ್ತು ಇತರ ವೃತ್ತಿಪರರನ್ನು ಪ್ರತಿನಿಧಿಸುವ ಅಂತಾರಾಷ್ಟ್ರೀಯ ವೃತ್ತಿಪರ ಮತ್ತು ತಾಂತ್ರಿಕ ಎಂಜಿನಿಯರ್‌ಗಳ ಒಕ್ಕೂಟವು ಇತ್ತೀಚೆಗೆ ಹದಿನೇಳು ವಲಸೆ ನ್ಯಾಯಾಲಯದ ನ್ಯಾಯಾಧೀಶರನ್ನು ವಜಾಗೊಳಿಸಲಾಗಿದೆ. ಜುಲೈ 11 ರಂದು 15, ಜುಲೈ 15 ರಂದು ಇಬ್ಬರು ಜಡ್ಜ್​ಗಳನ್ನು ಕಾರಣವಿಲ್ಲದೆ ವಜಾಗೊಳಿಸಲಾಗಿದೆ ಎಂದು ತಿಳಿಸಿದೆ.

ದೇಶದ 10 ರಾಜ್ಯಗಳಾದ ಕ್ಯಾಲಿಫೋರ್ನಿಯಾ, ಇಲಿನಾಯ್ಸ್, ಲೂಸಿಯಾನ, ಮೇರಿಲ್ಯಾಂಡ್, ಮ್ಯಾಸಚೂಸೆಟ್ಸ್, ನ್ಯೂಯಾರ್ಕ್, ಓಹಿಯೋ, ಟೆಕ್ಸಾಸ್, ಉತಾಹ್ ಮತ್ತು ವರ್ಜೀನಿಯಾ ನ್ಯಾಯಾಲಯಗಳಲ್ಲಿನ ನ್ಯಾಯಾಧೀಶರಿಗೆ ಗೇಟ್​ಪಾಸ್​ ನೀಡಲಾಗಿದೆ ಎಂದು ಒಕ್ಕೂಟ ಹೇಳಿದೆ. ಸಾಮಾನ್ಯವಾಗಿ ದೇಶದಲ್ಲಿ 800 ವಲಸೆ ನ್ಯಾಯಾಧೀಶರನ್ನು ಹೊಂದಲು ಸಂವಿಧಾನ ಅಧಿಕಾರ ನೀಡಿದೆ. ಆದರೆ, ಟ್ರಂಪ್​ ಸರ್ಕಾರ ಕಾರಣವಿಲ್ಲದೆ ಹೆಚ್ಚಿನ ಸಂಖ್ಯೆಯ ವಲಸೆ ನ್ಯಾಯಾಧೀಶರನ್ನು ವಜಾಗೊಳಿಸುತ್ತಿರುವುದು ಅತಿರೇಕದ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಮ್ಯಾಟ್ ಬಿಗ್ಸ್ ಹೇಳಿದ್ದಾರೆ. ಪ್ರಕರಣಗಳ ಇತ್ಯರ್ಥ ಮತ್ತಷ್ಟು ವಿಳಂಬ: ವಲಸೆ ನ್ಯಾಯಾಲಯದ ನ್ಯಾಯಾಧೀಶರು ಇತ್ತೀಚಿನ ವರ್ಷಗಳಲ್ಲಿ ಸುಮಾರು 3.5 ಮಿಲಿಯನ್ ಪ್ರಕರಣಗಳ ಬೃಹತ್ ಬಾಕಿಯನ್ನು ನಿರ್ವಹಿಸುತ್ತಿದ್ದಾರೆ. ಪ್ರಕರಣಗಳು ಇತ್ಯರ್ಥವಾಗಲು ವರ್ಷಗಳೇ ತೆಗೆದುಕೊಳ್ಳಬಹುದು. ಹೀಗಿರುವಾಗ, ವಜಾ ಮಾಡುವ ಮೂಲಕ ಪ್ರಕರಣಗಳನ್ನು ಮುಗಿಸಲು ಸಾಧ್ಯವಾಗುವುದಿಲ್ಲ ಎಂದು ಒಕ್ಕೂಟ ಹೇಳಿದೆ.

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ 103ಕ್ಕೂ ಹೆಚ್ಚು ನ್ಯಾಯಾಧೀಶರನ್ನು ವಜಾಗೊಳಿಸಿದ್ದಾರೆ ಅಥವಾ ಸ್ವಯಂಪ್ರೇರಿತರಾಗಿ ಜಡ್ಜ್​ಗಳೇ ಹುದ್ದೆ ತೊರೆದಿದ್ದಾರೆ ಎಂದು ಒಕ್ಕೂಟ ಮಾಹಿತಿ ನೀಡಿದೆ. ವಲಸೆ ನ್ಯಾಯಾಲಯದ ಪ್ರಕ್ರಿಯೆಯನ್ನು ವೇಗಗೊಳಿಸುವ ಬದಲು, ವಜಾಗೊಳಿಸುವಿಕೆಯು ಬಾಕಿ ಇರುವ ಪ್ರಕರಣಗಳನ್ನು ಇನ್ನಷ್ಟು ವಿಳಂಬ ಮಾಡುತ್ತದೆ. ಹೊಸ ವಲಸೆ ನ್ಯಾಯಾಲಯದ ನ್ಯಾಯಾಧೀಶರನ್ನು ನೇಮಕ ಮಾಡಲು, ನೇಮಿಸಿಕೊಳ್ಳಲು ಮತ್ತು ತರಬೇತಿ ನೀಡಲು ಒಂದು ವರ್ಷ ಬೇಕಾಗುತ್ತದೆ ಎಂದು ಒಕ್ಕೂಟವು ತಿಳಿಸಿದೆ.

Category
ಕರಾವಳಿ ತರಂಗಿಣಿ