ಜಮ್ಮು: ಅಮರನಾಥಯಾತ್ರೆಯ ಯಾತ್ರಿಕರಿಗೆ ಹೆಚ್ಚಿನ ಭದ್ರತೆ ವ್ಯವಸ್ಥೆ ಒದಗಿಸುವ ಭಾರತೀಯ ಸೇನೆಯು ಆಪರೇಷನ್ ಶಿವವನ್ನು ಪ್ರಾರಂಭಿಸಿದೆ. ಇದರಡಿ 8,500 ಸೈನಿಕರನ್ನು ನೇಮಕ ಮಾಡಿದ್ದು ಹಾಗೇ ಗುಹಾಂತರ ದೇಗುಲಕ್ಕೆ ಹೋಗುವ ಅವಳಿ ಮಾರ್ಗಗಳಲ್ಲಿ ಪ್ರತಿ - ಮಾನವರಹಿತ ವೈಮಾನಿಕ ವ್ಯವಸ್ಥೆ (ಸಿ-ಯುಎಎಸ್) ಗ್ರಿಡ್ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 3ರಿಂದ ಪ್ರಾರಂಭವಾಗಿರುವ ಅಮರನಾಥ ಯಾತ್ರೆ 38 ದಿನಗಳ ಬಳಿಕ ಆಗಸ್ಟ್ 9ರಂದು ಕೊನೆಗೊಳ್ಳಲಿದೆ. ಈ ಯಾತ್ರೆಗೆ ಎರಡು ಮಾರ್ಗದ ಮೂಲಕ ಯಾತ್ರಿಗಳು ಪ್ರಯಾಣಿಸಲಿದ್ದಾರೆ. ಒಂದು ಅನಂತ್‌ನಾಗ್ ಜಿಲ್ಲೆಯ ಸಾಂಪ್ರದಾಯಿಕ 48 ಕಿಮೀ ಉದ್ದದ ನುನ್ವಾನ್ - ಪಹಲ್ಗಾಮ್ ಮಾರ್ಗ. ಮತ್ತೊಂದು ಕಡಿದಾದ ಗಂಡೇರ್‌ಬಾಲ್ ಜಿಲ್ಲೆಯ 14 ಕಿ.ಮೀ ಉದ್ದದ ಬಾಲ್ಟಾಲ್ ಮಾರ್ಗ ಆಗಿದೆ. ಅಮರನಾಥ ಯಾತ್ರೆ ಸುಗಮ ಮತ್ತು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಭಾರತೀಯ ಸೇನೆಯು ನಾಗರಿಕ ಆಡಳಿತ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಮನ್ವಯದೊಂದಿಗೆ ಈ ಆಪರೇಷನ್ ಶಿವವನ್ನು ಪ್ರಾರಂಭಿಸಲಾಗಿದೆ.
ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನ ಬೆಂಬಲಿತ ಪ್ರಾಕ್ಸಿಗಳಿಂದ ಬೆದರಿಕೆ ಹೆಚ್ಚಿದ ಹಿನ್ನೆಲೆಯಲ್ಲಿ, ಉತ್ತರ ಮತ್ತು ದಕ್ಷಿಣ ಯಾತ್ರಾ ಮಾರ್ಗಗಳಲ್ಲಿ ದೃಢವಾದ ಭದ್ರತೆ ಒದಗಿಸುವ ಗುರಿಯನ್ನು ವಾರ್ಷಿಕ ಹೈ-ಟೆಂಪೋ ಕಾರ್ಯಾಚರಣೆ ಹೊಂದಿದೆ. ಈ ಹಿನ್ನೆಲೆ ಭದ್ರತೆ ದೃಷ್ಟಿಯಿಂದಾಗಿ ಈ ಬಾರಿ 8,500ಕ್ಕೂ ಹೆಚ್ಚು ಯೋಧರನ್ನುನಿಯೋಜಿಸಲಾಗಿದೆ. ಹಾಗೇ ವ್ಯಾಪಕ ಶ್ರೇಣಿಯ ತಾಂತ್ರಿಕ ಮತ್ತು ಕಾರ್ಯಾಚರಣೆಯ ಸಂಪನ್ಮೂಲದ ವ್ಯವಸ್ಥೆ ನಡೆಸಲಾಗಿದೆ. ಆಪರೇಷನ್ ಶಿವ ಬಹು ಹಂತದ ಭದ್ರತಾ ವ್ಯವಸ್ಥೆಯ ಭಾಗವಾಗಿದೆ. ಕ್ರಿಯಾತ್ಮಕ ಭಯೋತ್ಪಾದನಾ ನಿಗ್ರಹ ಗ್ರಿಡ್, ರೋಗನಿರೋಧಕ ಭದ್ರತಾ ನಿಯೋಜನೆ ಮತ್ತು ಕಾರಿಡಾರ್ ರಕ್ಷಣಾ ಕ್ರಮಗಳನ್ನು ಹೊಂದಿದೆ. ಅಧಿಕಾರಿಗಳಿಗೆ ಸಮಗ್ರ ಸಹಾಯ ಸೇರಿದಂತೆ ವಿಪತ್ತು ನಿರ್ವಹಣೆ ಮತ್ತು ತುರ್ತು ಪ್ರತಿಕ್ರಿಯೆ ನೀಡಲಿದೆ.