image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಆಪರೇಷನ್ ಸಿಂದೂರದ ವೇಳೆ ಭಾರತದ ಕಡೆ ಒಂದೇ ಒಂದು ಗಾಜು ಒಡೆದಿದ್ದರೆ ತೋರಿಸಿ : ಅಜಿತ್‌ ದೋವಲ್ ಸವಾಲು

ಆಪರೇಷನ್ ಸಿಂದೂರದ ವೇಳೆ ಭಾರತದ ಕಡೆ ಒಂದೇ ಒಂದು ಗಾಜು ಒಡೆದಿದ್ದರೆ ತೋರಿಸಿ : ಅಜಿತ್‌ ದೋವಲ್ ಸವಾಲು

ತಮಿಳುನಾಡು : ಪಾಕ್​ ವಿರುದ್ಧದ ಆಪರೇಷನ್ ಸಿಂಧೂರ್ ಬಗ್ಗೆ ನಮಗೆ ಹೆಮ್ಮೆ ಇದೆ. ಈ ಕಾರ್ಯಾಚರಣೆ ವೇಳೆ ನಾವು ಸ್ಥಳೀಯ (ದೇಶೀಯ) ತಂತ್ರಜ್ಞಾನವನ್ನು ಬಳಸಿರುವುದು ನಮಗೆ ಹೆಮ್ಮೆ ಇದೆ. ಗಡಿಯಾಚೆಗಿನ ಒಂಭತ್ತು ಪಾಕಿಸ್ತಾನಿ ನೆಲೆಗಳ ಮೇಲೆ ನಿಖರವಾದ ದಾಳಿ ಮಾಡಲು ನಾವು ನಿರ್ಧರಿಸಿದ್ದೆವು. ಇವುಗಳಲ್ಲಿ, ಗಡಿ ಪ್ರದೇಶದಲ್ಲಿ ಒಂದೇ ಒಂದು ನೆಲೆ ಇರಲಿಲ್ಲ. ನಮ್ಮ ಎಲ್ಲಾ ಗುರಿಗಳು ನಿಖರವಾಗಿದ್ದವು. ಅಂದುಕೊಂಡಂತೆ ನಾವು ಭಯೋತ್ಪಾದಕ ನೆಲೆಗಳನ್ನು ಮಾತ್ರ ನಾಶಪಡಿಸಿದ್ದೇವೆ.

ಅದನ್ನು ಬಿಟ್ಟು ಬೇರೆಲ್ಲಿಯೂ ದಾಳಿ ಮಾಡಿಲ್ಲ. ಯಾರು ಎಲ್ಲಿದ್ದಾರೆಂಬ ಮಾಹಿತಿ ನಿಖರವಾಗಿತ್ತು. ಇಡೀ ಕಾರ್ಯಾಚರಣೆಯನ್ನು ಕೇವಲ 23 ನಿಮಿಷಗಳಲ್ಲಿ ಮಾತ್ರ ಪೂರ್ಣಗೊಳಿಸಲಾಗಿದೆ. ಯಾವುದೇ ತಪ್ಪಿಗೆ ಅವಕಾಶವಿಲ್ಲ, ಯಾವುದೇ ಅನಿರೀಕ್ಷಿತ ಹಾನಿಯನ್ನುಂಟು ಮಾಡಿಲ್ಲ. 23 ನಿಮಿಷದ ಈ ಕಾರ್ಯಾಚರಣೆಯಲ್ಲಿ ಭಾರತದ ಒಂದು ಗಾಜಾದರೂ ಹಾನಿಯುಂಟಾಗಿದೆ ಎಂದು ತೋರಿಸುವ ಒಂದು ಚಿತ್ರವಿದ್ದರೆ ನನಗೆ ತೋರಿಸಿ ಎಂದು ಸವಾಲು ಹಾಕಿದ ಅವರು, ವಿದೇಶಿ ಮಾಧ್ಯಮಗಳು ಮಾತ್ರ ಪಾಕಿಸ್ತಾನ ಹೇಳಿದ್ದನ್ನೇ ಮಾಡಿ ಬರೀ ಸುಳ್ಳು ಸುದ್ದಿಗಳನ್ನೇ ಬಿತ್ತರಿಸಿದವು. ಮೇ 10ರ ಮೊದಲು ಮತ್ತು ನಂತರ ಪಾಕಿಸ್ತಾನದ ಸರ್ಗೋಧಾ, ರಹೀಮ್ ಯಾರ್ ಖಾನ್, ಚಕ್ಲಾಲಾ ಸೇರಿದಂತೆ 13 ವಾಯುನೆಲೆಗಳ ಉಪಗ್ರಹ ಚಿತ್ರಗಳನ್ನು ನೋಡಿದ್ರೆ ಎಲ್ಲವೂ ಸ್ಪಷ್ಟವಾಗುತ್ತದೆ. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ವಾಯುನೆಲೆಗಳಿಗೆ ಹಾನಿಯಾಗಿರೋದು ಸ್ಪಷ್ಟವಾಗಿದೆ ಎಂದು ಅವರು ವಿವರಣೆ ನೀಡಿದರು. ವಿಶ್ವ ವೇದಿಕೆಯಲ್ಲಿ ವೃದ್ಧಿಸುತ್ತಿರುವ ಭಾರತದ ಆರ್ಥಿಕ ಸ್ಥಿತಿಗತಿ ಮತ್ತು ಮಿಲಿಟರಿ ಶಕ್ತಿಯ ಬಗ್ಗೆಯೂ ಪ್ರಸ್ತಾಪಿಸಿದ ದೋವಲ್, 2047ರ ವೇಳೆಗೆ ಭಾರತದ ಜಿಡಿಪಿ ಎಂಟು ಪಟ್ಟು ಬೆಳೆಯಬಹುದು ಭವಿಷ್ಯ ನುಡಿದರು.

ದೇಶ ಉತ್ತಮ ಪ್ರಗತಿಯಲ್ಲಿದ್ದು, 2047ರ ವೇಳೆಗೆ ಭಾರತದ ಜಿಡಿಪಿ ಎಂಟು ಪಟ್ಟು ಬೆಳೆಯಬಹುದು ಎಂದು ರಾಷ್ಟ್ರೀಯ ಭದ್ರತಾ (ಎನ್​ಎಸ್​ಎ) ಸಲಹೆಗಾರ ಅಜಿತ್ ದೋವಲ್ ಭವಿಷ್ಯ ನುಡಿದಿದ್ದಾರೆ. ಶುಕ್ರವಾರ ನಡೆದ ಐಐಟಿ-ಮದ್ರಾಸ್‌ನ 62ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ದೋವಲ್, ವಿದ್ಯಾರ್ಥಿಗಳು ಭವಿಷ್ಯದ ಭಾರತವನ್ನು ಕಟ್ಟಲು ತಮ್ಮನ್ನು ತಾವು ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ದೇಶದ ಈ ಹಿಂದಿನ ಆರ್ಥಿಕ ಸ್ಥಿತಿ ಮತ್ತು ಸದ್ಯ ಏರುಗತಿಯಲ್ಲಿರುವ ಜಿಡಿಪಿ, ಭಾರತದ ರಕ್ಷಣಾ ವ್ಯವಸ್ಥೆ, ತಂತ್ರಜ್ಞಾನ ಮತ್ತು ಪಾಕ್​ ವಿರುದ್ಧದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಇದೇ ವೇದಿಕೆಯಲ್ಲಿ ಪ್ರಸ್ತಾಪ ಮಾಡಿದರು.

Category
ಕರಾವಳಿ ತರಂಗಿಣಿ