image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಕಾಂಕ್ಷಿ ಜನ್ಮದತ್ತ ಪೌರತ್ವ ರದ್ದು ಆದೇಶಕ್ಕೆ ನ್ಯಾಯಾಲಯ ತಡೆ

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಕಾಂಕ್ಷಿ ಜನ್ಮದತ್ತ ಪೌರತ್ವ ರದ್ದು ಆದೇಶಕ್ಕೆ ನ್ಯಾಯಾಲಯ ತಡೆ

ಅಮೆರಿಕ​: ಯುಎಸ್​​ಗೆ ವಲಸೆ ಹೋಗಿ ವಾಸ ಮಾಡುತ್ತಿರುವ ಪೋಷಕರ ಅಮೆರಿಕದಲ್ಲಿ ಹುಟ್ಟಿದ ಮಕ್ಕಳಿಗೆ ಪೌರತ್ವ ನಿರಾಕರಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಕಾಂಕ್ಷಿ ಜನ್ಮದತ್ತ ಪೌರತ್ವ ರದ್ದು ಆದೇಶಕ್ಕೆ ನ್ಯಾಯಾಲಯವು ತಡೆ ನೀಡಿದೆ. ಅಮೆರಿಕದ ಯಾವುದೇ ಸ್ಥಳದಲ್ಲೂ ಜನ್ಮದತ್ತ ಪೌರತ್ವವನ್ನು ನಿರಾಕರಿಸುವ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಕಾರ್ಯನಿರ್ವಾಹಕ ಆದೇಶ ಜಾರಿಗೊಳಿಸುವುದನ್ನು ನಿಷೇಧಿಸಿ ನ್ಯೂ ಹ್ಯಾಂಪ್​ಶೈರ್​ನ ಫೆಡರಲ್​ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ನ್ಯಾಯಾಧೀಶರು, ಟ್ರಂಪ್ ಆದೇಶಕ್ಕೆ ತಡೆ ನೀಡಿ ಪ್ರಾಥಮಿಕ ತಡೆಯಾಜ್ಞೆ ಹೊರಡಿಸಿದ್ದಾರೆ. ಇದರೊಂದಿಗೆ ಅಮೆರಿಕ ಅಧ್ಯಕ್ಷರ ​ವಿವಾದಾತ್ಮಕ ಆದೇಶಕ್ಕೆ ತಡೆ ಬಿದ್ದಿದೆ.

ನ್ಯಾಯಾಧೀಶರು ಹೊರಡಿಸಿರುವ ಈ ರಾಷ್ಟ್ರವ್ಯಾಪಿ ತಡೆಯಾಜ್ಞೆಯನ್ನು ಅಲ್ಲಿನ ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಬಹುದಾಗಿದೆ. ಕಾರಣ ಜಿಲ್ಲಾ ನ್ಯಾಯಾಧೀಶರು ಸಾಮಾನ್ಯವಾಗಿ ರಾಷ್ಟ್ರವ್ಯಾಪಿ ಅಥವಾ ಸಾರ್ವತ್ರಿಕ ತಡೆಯಾಜ್ಞೆಗಳನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ಈ ಹಿಂದೆಯೇ ಸುಪ್ರೀಂ ಕೋರ್ಟ್ ತಿಳಿಸಿದೆ. ಆದರೆ ನ್ಯಾಯಾಧೀಶರು ಬೇರೆ ಕಾನೂನು ವಿಧಾನದ ಮೂಲಕ ಈ ರೀತಿ ತೀರ್ಪು ನೀಡಬಹುದು ಎಂಬುದನ್ನೂ ಕೂಡ ಸುಪ್ರೀಂ ಕೋರ್ಟ್​ ತಳ್ಳಿ ಹಾಕಿಲ್ಲ.

Category
ಕರಾವಳಿ ತರಂಗಿಣಿ