image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ತಾಮ್ರ ಆಮದಿನ ಮೇಲೆ ಶೇ 50, ಔಷಧದ ಮೇಲೆ ಶೇ 200ರಷ್ಟು ಸುಂಕ ಹೆಚ್ಚಳ : ಟ್ರಂಪ್

ತಾಮ್ರ ಆಮದಿನ ಮೇಲೆ ಶೇ 50, ಔಷಧದ ಮೇಲೆ ಶೇ 200ರಷ್ಟು ಸುಂಕ ಹೆಚ್ಚಳ : ಟ್ರಂಪ್

ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಡಜನ್​​​​ ಗಟ್ಟಲೇ ಆರ್ಥಿಕತೆಗಳ ಮೇಲೆ ಜಾರಿಗೆ ಬರಲು ಹೆಚ್ಚಿನ ಅಮೆರಿಕ ಸುಂಕಗಳಿಗೆ ಆಗಸ್ಟ್ 1ರ ಗಡುವು ವಿಸ್ತರಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ತಾಮ್ರದ ಆಮದಿನ ಮೇಲೆ ಪ್ರತ್ಯೇಕ ಶೇ 50 ಪ್ರತಿಶತ ಸುಂಕದ ಯೋಜನೆಯನ್ನು ಅಮೆರಿಕ ಅಧ್ಯಕ್ಷರು ಘೋಷಿಸಿದ್ದಾರೆ. ತಾಮ್ರದ ಸುಂಕವು ಟ್ರಂಪ್ ಶ್ವೇತಭವನಕ್ಕೆ ಹಿಂದಿರುಗಿದ ಬಳಿಕ ತೆಗೆದುಕೊಂಡ ನಿರ್ಧಾರವಾಗಿದೆ. ಅವರ ಈ ತೀರ್ಮಾನವು ಲೋಹದ ಬೆಲೆಗಳನ್ನು ಗಗನಕ್ಕೇರಿಸಿದೆ. ಇಂದು ನಾವು ತಾಮ್ರದ ಮೇಲಿನ ಆಮದು ಸುಂಕವನ್ನು ಹೆಚ್ಚು ಮಾಡುತ್ತಿದ್ದೇವೆ ಎಂದು ಟ್ರಂಪ್​ ಮಂಗಳವಾರ ಕ್ಯಾಬಿನೆಟ್ ಸಭೆಯಲ್ಲಿ ಘೋಷಿಸಿದ್ದಾರೆ. ತಾಮ್ರದ ಮೇಲಿನ ಸುಂಕವನ್ನು ಶೇ 50ಕ್ಕೆ ಹೆಚ್ಚಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಟ್ರಂಪ್​ ಸುಂಕ ಘೋಷಿಸಿದ ಸ್ಪಲ್ಪ ಸಮಯದ ನಂತರ ಮಾತನಾಡಿದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಈ ದರ ಜುಲೈ ಅಂತ್ಯದಲ್ಲಿ ಅಥವಾ ಆಗಸ್ಟ್ 1 ರಂದು ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಟ್ರಂಪ್ ಕೂಡ ವಾಷಿಂಗ್ಟನ್ ಶೀಘ್ರದಲ್ಲೇ ಔಷಧಗಳ ಮೇಲೆ ಶೇ 200ರಷ್ಟು ಆಮದು ಸುಂಕ ಘೋಷಣೆ ಮಾಡುವುದಾಗಿ ಹೇಳಿದರು. ನಾವು ಜನರಿಗೆ ಸುಮಾರು ಒಂದು ವರ್ಷ, ಒಂದೂವರೆ ವರ್ಷ ಕಾಲಾವಕಾಶ ನೀಡಲಿದ್ದೇವೆ. ಆ ಬಳಿಕ ಅವರಿಗೆ ಸುಂಕ ವಿಧಿಸಲಾಗುವುದು ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.

ಔಷಧಗಳು ಮತ್ತು ಅರೆವಾಹಕಗಳ ಮೇಲಿನ ಅಧ್ಯಯನಗಳು ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿವೆ ಮತ್ತು ನಂತರ ಟ್ರಂಪ್ ಹೊಸ ನೀತಿಗಳನ್ನು ಘೋಷಿಸಲಿದ್ದಾರೆ ಎಂದು ಲುಟ್ನಿಕ್ CNBC ಗೆ ತಿಳಿಸಿದ್ದಾರೆ. ವಲಯಗಳ ಮೇಲೆ ಪರಿಣಾಮ ಬೀರುವ ಸುಂಕಗಳನ್ನು ಮೀರಿ, ಏಪ್ರಿಲ್‌ನಲ್ಲಿ ಬಹುತೇಕ ಎಲ್ಲಾ ವ್ಯಾಪಾರ ಪಾಲುದಾರರಿಂದ ಸರಕುಗಳ ಮೇಲೆ ಶೇಕಡಾ 10 ರಷ್ಟು ಸುಂಕವನ್ನು ಟ್ರಂಪ್ ವಿಧಿಸಿ ಈಗಾಗಲೇ ಆದೇಶಿಸಿದ್ದಾರೆ.

ಶೀಘ್ರ ವ್ಯಾಪಾರ ಒಪ್ಪಂದಕ್ಕೆ ಬರುವಂತೆ ಸೋಮವಾರ ಒಂದು ಡಜನ್‌ಗಿಂತಲೂ ಹೆಚ್ಚು ರಾಷ್ಟ್ರಗಳಿಗೆ ಮೊದಲ ಬ್ಯಾಚ್​​​​​​ ಅಂಗವಾಗಿ ಟ್ರಂಪ್​ ಪತ್ರಗಳನ್ನು ರವಾನಿಸಿದ್ದಾರೆ. ಇದರಲ್ಲಿ ಅಮೆರಿಕದ ಪ್ರಮುಖ ಮಿತ್ರರಾಷ್ಟ್ರಗಳಾದ ಜಪಾನ್ ಮತ್ತು ದಕ್ಷಿಣ ಕೊರಿಯಾಗಳೂ ಸೇರಿವೆ. ಎರಡೂ ದೇಶಗಳ ಉತ್ಪನ್ನಗಳಿಗೆ 25 ಪ್ರತಿಶತ ಸುಂಕ ವಿಧಿಸಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ. ಇಂಡೋನೇಷ್ಯಾ, ಬಾಂಗ್ಲಾದೇಶ, ಥಾಯ್ಲೆಂಡ್​, ದಕ್ಷಿಣ ಆಫ್ರಿಕಾ ಮತ್ತು ಮಲೇಷ್ಯಾ ಸೇರಿ 25 ಪ್ರತಿಶತದಿಂದ ಶೇ 40ರಷ್ಟು ಸುಂಕ ವಿಧಿಸುವ ಪ್ರಸ್ತಾಪ ಮಾಡಲಾಗಿದೆ.

Category
ಕರಾವಳಿ ತರಂಗಿಣಿ