image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮಹಾರಾಷ್ಟ್ರ ಕೊರ್ಲೈ ಕಿನಾರೆಯಲ್ಲಿ ಅನುಮಾನಸ್ಪದ ಬೋಟ್​ ಪತ್ತೆ

ಮಹಾರಾಷ್ಟ್ರ ಕೊರ್ಲೈ ಕಿನಾರೆಯಲ್ಲಿ ಅನುಮಾನಸ್ಪದ ಬೋಟ್​ ಪತ್ತೆ

ಮಹಾರಾಷ್ಟ್ರ​​: ರಾಯಗಢ ಜಿಲ್ಲೆಯ ಮುರುದ್ ತಾಲೂಕಿನ ಕೊರ್ಲೈ ಸಮುದ್ರದಲ್ಲಿ ಅನುಮಾನಾಸ್ಪದ ದೋಣಿಗಳು ಕಾಣಿಸಿಕೊಂಡಿದ್ದು, ಈ ಬಗ್ಗೆ ಎಚ್ಚರವಹಿಸುವಂತೆ ಭದ್ರತಾ ಪಡೆಗೆ ಸೂಚನೆ ನೀಡಲಾಗಿದೆ. ಈ ಅನುಮಾನಾಸ್ಪದ ದೋಣಿ ಪಾಕಿಸ್ತಾನದ್ದಾಗಿರಬಹುದು ಎಂದು ಶಂಕಿಸಲಾಗಿದೆ. 26/11 ರಂದು ಮುಂಬೈ ಮೇಲೆ ದಾಳಿ ಮಾಡಿದ ಪಾಕಿಸ್ತಾನಿ ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ದೋಣಿ ಮೂಲಕ ಬಂದಿದ್ದರು. ಕೊರ್ಲೈ ಸಮುದ್ರದಲ್ಲಿ ಶಂಕಾಸ್ಪದ ದೋಣಿಗಳಲ್ಲಿ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಕಟ್ಟೆಚ್ಚರದಲ್ಲಿವೆ. ಶಂಕಿತರನ್ನು ಬಂಧಿಸಲು ಪೊಲೀಸರು ರಾತ್ರಿಯಿಡೀ ವಿವಿಧ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

ಅನುಮಾನಾಸ್ಪದ ದೋಣಿಯಿಂದ ಕೆಲವರು ಇಳಿದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದು, ಅವರ ಹುಡುಕಾಟಕ್ಕೆ ಕಾರ್ಯಾಚರಣೆ ಕೈಗೊಳ್ಳಲು ಅಣಿಯಾಗಿದ್ದಾರೆ. ರಾಯಗಢ ಪೊಲೀಸರು, ಕರಾವಳಿ ಕಾವಲು ಪಡೆ, ಕಸ್ಟಮ್ಸ್ ಇಲಾಖೆ, ಕ್ಷಿಪ್ರ ಪ್ರತಿಕ್ರಿಯೆ ತಂಡ, ಸ್ಥಳೀಯ ಅಪರಾಧ ಶಾಖೆ, ನೌಕಾಪಡೆ, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ ಸೇರಿದಂತೆ ಎಲ್ಲರೂ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಶಂಕಾಸ್ಪದ ದೋಣಿ ಕೊರ್ಲೈ ಲೈಟ್‌ಹೌಸ್‌ನಿಂದ ಸುಮಾರು ಎರಡು ನಾಟಿಕಲ್ ಮೈಲಿಗಳಷ್ಟು ದೂರದಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಘಟನೆ ಕುರಿತು ಜಿಲ್ಲಾಡಳಿತ ಯಾವುದೇ ಮಾಹಿತಿ ಮತ್ತು ಪ್ರತಿಕ್ರಿಯೆ ನೀಡಿಲ್ಲ.

ಕೊರ್ಲೈ ಗ್ರಾಮದ ಮಾಜಿ ಸರಪಂಚ ಪ್ರಶಾಂತ್ ಮಿಸಾಲ್ ಮಾತನಾಡಿ, ಪೊಲೀಸ್ ಅಧಿಕಾರಿಗಳಿಂದ ಕರೆ ಬಂದಿದ್ದು, ಪಾಕಿಸ್ತಾನಿ ದೋಣಿ ಸಮುದ್ರದಲ್ಲಿ ಕಂಡು ಬಂದಿರುವುದಾಗಿ ತಿಳಿಸಿದರು. ಕಡಲ ಕಿನಾರೆ ಬಳಿ ಗ್ರಾಮಸ್ಥರು ಹೋಗುವ ಮೊದಲೇ ಪೊಲೀಸರು ಅಲ್ಲಿಗೆ ತಲುಪಿದ್ದರು. ನಾವು ಅಲ್ಲೇ ಇದ್ದೆವು. ನಂತರ ದೋಣಿ ಕಣ್ಮರೆಯಾಯಿತು. ಆದ್ದರಿಂದ, ಇದು ಅನುಮಾನಾಸ್ಪದವಾಗಿ ಕಾಣುತ್ತಿದೆ. ಆದ್ದರಿಂದ, ಕೊರ್ಲೈ ಜನರು ಜಾಗರೂಕರಾಗಿರಲು ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ