image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪವಿತ್ರ ರಂಜಾನ್​ ತಿಂಗಳ ಅಂತ್ಯ ಸೂಚಿಸುವ ಹಬ್ಬ ಈದ್​-ಉಲ್​-ಫಿತರ್​​ಗೆ ಪ್ರಧಾನಿ ಶುಭ ಸಂದೇಶ

ಪವಿತ್ರ ರಂಜಾನ್​ ತಿಂಗಳ ಅಂತ್ಯ ಸೂಚಿಸುವ ಹಬ್ಬ ಈದ್​-ಉಲ್​-ಫಿತರ್​​ಗೆ ಪ್ರಧಾನಿ ಶುಭ ಸಂದೇಶ

ನವದೆಹಲಿ: ಈದ್-ಉಲ್-ಫಿತರ್​ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಶುಭಾಶಯ ತಿಳಿಸಿದ್ದು, ಈ ಹಬ್ಬವು ಸಮಾಜದಲ್ಲಿ ಭರವಸೆ, ಸಾಮರಸ್ಯ ಮತ್ತು ದಯೆಯ ಮನೋಭಾವ ಹೆಚ್ಚಿಸಲಿ ಎಂದು ಹಾರೈಸಿದ್ದಾರೆ. ಈದ್-ಉಲ್-ಫಿತರ್​ ಪವಿತ್ರ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುವ ಹಬ್ಬವಾಗಿದೆ. ಈ ದಿನ ಜಗತ್ತಿನೆಲ್ಲೆಡೆ ಹಬ್ಬವನ್ನು ಮುಸ್ಲಿಮರು ಸಂಭ್ರಮದಿಂದ ಆಚರಿಸುತ್ತಾರೆ. ಪರಸ್ಪರ ಶುಭಾಶಯ ವಿನಿಯಮ, ಸೇರಿದಂತೆ ಪ್ರಾರ್ಥನೆಯಲ್ಲಿ ತೊಡಗುತ್ತಾರೆ.

ಈ ಕುರಿತು ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಪ್ರಧಾನಿ, ಈದ್-ಉಲ್-ಫಿತರ್ ಹಬ್ಬದ ಶುಭಾಶಯಗಳು. ಈ ಹಬ್ಬ ಎಲ್ಲ ಸಂತೋಷ ಮತ್ತು ಯಶಸ್ಸು ತರಲಿ. ಈದ್ ಮುಬಾರಕ್ ಎಂದು ತಿಳಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ನಾಡಿನ ಜನತೆಗೆ ಈದ್ - ಉಲ್ - ಫಿತರ್ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದು, ಈ ಈದ್​-ಉಲ್​-ಫಿತರ್​​ ಸಹೋದರತ್ವ ಹೆಚ್ಚಿಸಿ, ಸಹಾನುಭೂತಿ ಮತ್ತು ದಾನವನ್ನು ಉತ್ತೇಜಿಸುತ್ತದೆ ಎಂದಿದ್ದಾರೆ.

ಹಬ್ಬದ ಶುಭಕೋರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, ದೇಶದ ಜನರಿಗೆ ಈದ್ - ಉಲ್ - ಫಿತರ್ ಹಬ್ಬದ ಶುಭಾಶಯಗಳು, ವಿಶೇಷವಾಗಿ ಮುಸ್ಲಿಂ ಸಹೋದರ ಸಹೋದರಿಯರಿಗೆ ಶುಭಾಶಯಗಳು. ಸಹೋದರತ್ವವನ್ನು ಬಲಪಡಿಸುವ ಹಬ್ಬ ಇದಾಗಿದ್ದು, ಯೊಬ್ಬರ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ ಮತ್ತು ಪ್ರತಿಯೊಬ್ಬರ ಹೃದಯಗಳಲ್ಲಿ ಒಳ್ಳೆಯತನದ ಹಾದಿಯಲ್ಲಿ ಮುನ್ನಡೆಯುವ ಮನೋಭಾವವನ್ನು ಬಲಪಡಿಸಲಿ ಎಂದು ಹಾರೈಸಿದ್ದಾರೆ.

ದ್ರೌಪದಿ ಮುರ್ಮು ಭಾನುವಾರವೇ ಈದ್-ಉಲ್-ಫಿತರ್​​ಗೆ ಸಹ ನಾಗರಿಕರಿಗೆ ಶುಭಾಶಯ ಕೋರಿದ್ದಾರೆ. ಈದ್ ಸಹಾನುಭೂತಿ ಮತ್ತು ದಾನದ ಮನೋಭಾವವನ್ನು ಉತ್ತೇಜಿಸುವ ಸಂದರ್ಭವಾಗಿದೆ. ಈ ಹಬ್ಬವು ಎಲ್ಲರ ಜೀವನದಲ್ಲಿ ಶಾಂತಿ, ಪ್ರಗತಿ ಮತ್ತು ಸಂತೋಷವನ್ನು ತರಲಿ ಮತ್ತು ಸಕಾರಾತ್ಮಕ ಮನೋಭಾವದಿಂದ ಮುನ್ನಡೆಯಲು ನಮಗೆ ಶಕ್ತಿ ನೀಡಲಿ. ಈದ್-ಉಲ್-ಫಿತರ್​ನ ಶುಭ ಸಂದರ್ಭದಲ್ಲಿ ನಾನು ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲ ಭಾರತೀಯರಿಗೆ, ವಿಶೇಷವಾಗಿ ಮುಸ್ಲಿಂ ಸಹೋದರ ಸಹೋದರಿಯರಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

Category
ಕರಾವಳಿ ತರಂಗಿಣಿ