image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮಧ್ಯಪ್ರದೇಶದಲ್ಲಿ 300 ವರ್ಷಗಳ ಹಳೆಯ ದರ್ಗಾ ನೆಲಸಮ; ತೀವ್ರ ವಿರೋಧ

ಮಧ್ಯಪ್ರದೇಶದಲ್ಲಿ 300 ವರ್ಷಗಳ ಹಳೆಯ ದರ್ಗಾ ನೆಲಸಮ; ತೀವ್ರ ವಿರೋಧ

ಮಧ್ಯಪ್ರದೇಶ : ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಸುಮಾರು 300 ವರ್ಷಗಳ ಇತಿಹಾಸವಿರುವ ಹಜರತ್ ಖಾಸಿಂ ಶಾ ವಲಿ ದರ್ಗಾವನ್ನು ಮಂಗಳವಾರ (ನವೆಂಬರ್ 17) ಮತ್ತು ಬುಧವಾರ (ನವೆಂಬರ್ 18) ಮಧ್ಯರಾತ್ರಿ ಭಾರೀ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಲಾಗಿದೆ. ಸ್ಥಳೀಯ ಮುಸ್ಲಿಂ ಸಮುದಾಯದ ತೀವ್ರ ವಿರೋಧದ ನಡುವೆಯೂ ಜಿಲ್ಲಾಡಳಿತ ಈ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ.

ನಗರದಲ್ಲಿ ಕೈಗೊಂಡಿರುವ ರಸ್ತೆ ಅಗಲೀಕರಣ ಕಾಮಗಾರಿಗೆ ದರ್ಗಾದ ಗೋಡೆಯ ಒಂದು ಭಾಗ ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ನಗರ ಅಭಿವೃದ್ಧಿಗಾಗಿ ಸಿದ್ಧಪಡಿಸಲಾದ ಮಾಸ್ಟರ್ ಪ್ಲಾನ್‌ನ ಭಾಗವಾಗಿ ಈ ಕ್ರಮ ಅನಿವಾರ್ಯ ಎಂದು ಖಾಂಡ್ವಾ ನಗರ ಮ್ಯಾಜಿಸ್ಟ್ರೇಟ್ ಬಜರನ್ ಬಹದ್ದೂರ್ ಶಾ ಸಮರ್ಥಿಸಿಕೊಂಡಿದ್ದರು.

ಆದರೆ, ತೆರವು ಕಾರ್ಯಾಚರಣೆಗೂ ಮುನ್ನ ದಿನ ಮ್ಯಾಜಿಸ್ಟ್ರೇಟ್ ಮತ್ತು ಖಾಜಿ ಸೈಯದ್ ನಿಸಾರ್ ಅಲಿ ನಡುವೆ ತೀವ್ರ ವಾಗ್ವಾದ ನಡೆದಿತ್ತು. ದರ್ಗಾದ ಗೋಡೆ ಸರ್ಕಾರಿ ಜಾಗದಲ್ಲಿದೆ ಎಂಬುದನ್ನು ಸಾಬೀತುಪಡಿಸಲು ಅಗತ್ಯ ದಾಖಲೆ ಹಾಗೂ ನಕ್ಷೆಯನ್ನು ಒದಗಿಸುವಂತೆ ಖಾಜಿ ಸೈಯದ್ ಆಡಳಿತವನ್ನು ಒತ್ತಾಯಿಸಿದ್ದರು.

ಇದೇ ವೇಳೆ ಆಡಳಿತದ ವಿರುದ್ಧ ತಾರತಮ್ಯದ ಆರೋಪ ಮಾಡಿದ್ದ ಖಾಜಿ ಸೈಯದ್, "ಇಂದೋರ್ ನಾಕಾ ಪ್ರದೇಶದಲ್ಲಿ ಅಪಘಾತ ವಲಯದಲ್ಲಿರುವ ದೇವಸ್ಥಾನವನ್ನು ಏಕೆ ತೆರವುಗೊಳಿಸುತ್ತಿಲ್ಲ? ಅಲ್ಲಿ ದೇವಸ್ಥಾನವಿರುವ ಕಾರಣ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಆದರೆ ಇದು ದರ್ಗಾ ಆಗಿರುವುದರಿಂದ ಗುರಿಯಾಗಿಸಲಾಗುತ್ತಿದೆ. ನಾವು ಸಕಾರಾತ್ಮಕವಾಗಿ ಸ್ಪಂದಿಸಿದರೂ ನಮ್ಮನ್ನೇ ಬೆದರಿಸಲಾಗುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಎಲ್ಲಾ ವಿರೋಧಗಳ ನಡುವೆಯೂ ಆಡಳಿತ ಮಂಡಳಿ ಬಿಗಿ ಪೊಲೀಸ್ ಭದ್ರತೆಯಲ್ಲಿ ದರ್ಗಾವನ್ನು ನೆಲಸಮಗೊಳಿಸಿದೆ.

Category
ಕರಾವಳಿ ತರಂಗಿಣಿ