image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸಿಜೆಪಿ ವಕ್ತಾರ ಅಶುತೋಷ್ ರಾಂಕಾ ಪ್ರೊಫೈಲ್ ಬಹಿರಂಗ: ಪಾಕಿಸ್ತಾನದ ಮಾಜಿ ಸಚಿವೆಯಿದ್ದ ಸಂಸ್ಥೆಯಲ್ಲಿ ಕಾರ್ಯನಿರ್ವಹಣೆ

ಸಿಜೆಪಿ ವಕ್ತಾರ ಅಶುತೋಷ್ ರಾಂಕಾ ಪ್ರೊಫೈಲ್ ಬಹಿರಂಗ: ಪಾಕಿಸ್ತಾನದ ಮಾಜಿ ಸಚಿವೆಯಿದ್ದ ಸಂಸ್ಥೆಯಲ್ಲಿ ಕಾರ್ಯನಿರ್ವಹಣೆ

ನವದೆಹಲಿ : ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಪ್ರಮುಖ ವಕ್ತಾರ ಮತ್ತು ನೀತಿ ಸಲೂಹೆಗಾರ ಅಶುತೋಷ್ ರಾಂಕಾ ಅವರ ವೃತ್ತಿಪರ ಹಿನ್ನೆಲೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಂತರರಾಷ್ಟ್ರೀಯ ಲಸಿಕಾ ಒಕ್ಕೂಟ ಸಂಸ್ಥೆಯಾದ 'ಗವಿ'ಯಲ್ಲಿ (Gavi) ರಾಂಕಾ ಅವರು ಅರೆಕಾಲಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದಲ್ಲಿ ಸಚಿವೆಯಾಗಿದ್ದ ಡಾ. ಸಾನಿಯಾ ನಿಶ್ತಾರ್ ಅವರು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು ಎಂಬ ಅಂಶ ಬಯಲಾಗಿದೆ.

ಸಾರ್ವಜನಿಕ ಆರೋಗ್ಯ ಕ್ಷೇತ್ರ ಸೇರಿದಂತೆ ಜಾಗತಿಕ ಸಂಸ್ಥೆಗಳಲ್ಲಿ ಅನುಭವ ಹೊಂದಿರುವ ರಾಂಕಾ, 2024 ರಿಂದ 2025 ರ ಅವಧಿಯಲ್ಲಿ 'ಗವಿ' ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಇದೇ ಸಂಸ್ಥೆಯ ಉನ್ನತ ಹುದ್ದೆಯಲ್ಲಿದ್ದ ಸಾನಿಯಾ ನಿಶ್ತಾರ್ ಅವರು ಇಮ್ರಾನ್ ಖಾನ್ ಸಂಪುಟದ ಪ್ರಮುಖ ಯೋಜನೆಗಳ ಜವಾಬ್ದಾರಿ ವಹಿಸಿಕೊಂಡಿದ್ದವರು.

ಆದಾಗ್ಯೂ, ಈ ವೃತ್ತಿಪರ ಕಾಲಾನುಕ್ರಮಕ್ಕೂ ರಾಂಕಾ ಅವರ ವೈಯಕ್ತಿಕ ಸಂಪರ್ಕಕ್ಕೂ ನೇರ ಸಾಕ್ಷ್ಯಾಧಾರಗಳಿಲ್ಲವಾದರೂ, ವಿದೇಶಿ ಫಂಡಿಂಗ್ ಆರೋಪಗಳ ನಡುವೆ ಸಿಜೆಪಿ ನಾಯಕರ ಜಾಗತಿಕ ಸಂಪರ್ಕ ಜಾಲದ ಬಗ್ಗೆ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಮತ್ತೊಂದೆಡೆ, ಸಿಜೆಪಿ ಮುಖ್ಯಸ್ಥ ಅಭಿಜೀತ್ ದೀಪ್ಕೆ ಹಾಗೂ ರಾಂಕಾ ವಿರುದ್ಧ ಸರ್ಕಾರ ಮಾಡುತ್ತಿರುವ ಈ ಆರೋಪಗಳನ್ನು ಪಕ್ಷದ ನಾಯಕರು ಸರಣಿ ವ್ಯಂಗ್ಯಗಳ ಮೂಲಕ ತಳ್ಳಿಹಾಕಿದ್ದಾರೆ.

Category
ಕರಾವಳಿ ತರಂಗಿಣಿ