ಮಂಗಳೂರು : ಅಯೋಧ್ಯೆಯಲ್ಲಿ ನಡೆದ ‘ಆಜ್ ತಕ್ ಪಂಚಾಯತ್’ ಕಾರ್ಯಕ್ರಮದಲ್ಲಿ ಹಿರಿಯ ಸಂಪಾದಕಿ ಶ್ವೇತಾ ಸಿಂಗ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಮ್ಮ ತಂಗಿಯ ಸರಳ ಜೀವನ ಹಾಗೂ ಸ್ವಾಲಂಬನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಚಹಾ ಅಂಗಡಿ ನಡೆಸಿ ತಮ್ಮ ತಂಗಿ ಜೀವಿಸುತ್ತಿರುವ ವೈರಲ್ ವಿಡಿಯೋ ಹಾಗೂ ಅದರಿಂದ ಎದ್ದಿರುವ ಆರ್ಥಿಕ ಸ್ಥಿತಿಯ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, "ನಾನೊಬ್ಬ ಸನ್ಯಾಸಿ, ನನಗೆ ಸಾಂಪ್ರದಾಯಿಕ ಕುಟುಂಬದ ಪರಿಕಲ್ಪನೆ ಇಲ್ಲ. ಉತ್ತರ ಪ್ರದೇಶದ 25 ಕೋಟಿ ಜನರೇ ನನ್ನ ಕುಟುಂಬ" ಎಂದು ಸ್ಪಷ್ಟಪಡಿಸಿದರು.
ತಮ್ಮ ತಂಗಿ ಯಾವುದೇ ಪರಿಸ್ಥಿತಿಯಲ್ಲಿದ್ದರೂ ಯಾರ ಮುಂದೆಯೂ ಕೈಚಾಚದೆ, ಸ್ವಂತ ಕಾಲ ಮೇಲೆ ನಿಂತು ಸ್ವಾವಲಂಬಿ ಜೀವನ ನಡೆಸುತ್ತಿದ್ದಾಳೆ. ಸ್ವಂತ ದುಡಿಮೆಯಿಂದ ಗೌರವಯುತವಾಗಿ ಬಾಳುವುದು ತಪ್ಪಲ್ಲ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.