image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಅರುಣಾಚಲ ಗಡಿಯಲ್ಲಿ ಚೀನಾ ಕುಟಿಲ ಯತ್ನ: ಐಟಿಬಿಪಿ ಎಚ್ಚರಿಕೆ, ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಅರುಣಾಚಲ ಗಡಿಯಲ್ಲಿ ಚೀನಾ ಕುಟಿಲ ಯತ್ನ: ಐಟಿಬಿಪಿ ಎಚ್ಚರಿಕೆ, ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಅರುಣಾಚಲ ಪ್ರದೇಶ : ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಸೇನೆಯು ಭಾರತದ ವಿರುದ್ಧ ನಿರಂತರವಾಗಿ ಘರ್ಷಣೆಗೆ ಮತ್ತು ಅತಿಕ್ರಮಣಕ್ಕೆ ಯತ್ನಿಸುತ್ತಿದೆ ಎಂದು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಮಹಾನಿರ್ದೇಶಕ ಶತ್ರುಜಿತ್ ಸಿಂಗ್ ಕಪೂರ್ ಬಹಿರಂಗಪಡಿಸಿದ್ದಾರೆ. ಗಲ್ವಾನ್ ಕಣಿವೆಯ ಮಾದರಿಯಲ್ಲೇ ಅರುಣಾಚಲ ಗಡಿಯುದ್ದಕ್ಕೂ ಚೀನಾ ಸೈನಿಕರು ಕ್ಯಾತೆ ತೆಗೆಯುತ್ತಿದ್ದು, ಭಾರತೀಯ ಪಡೆಗಳು ಇದನ್ನು ಸಮರ್ಥವಾಗಿ ಎದುರಿಸಲು ಸರ್ವ ಸನ್ನದ್ಧವಾಗಿವೆ ಎಂದು ಅವರು ತಿಳಿಸಿದ್ದಾರೆ.

ITBP ಮುಖ್ಯಸ್ಥರ ಈ ಅಧಿಕೃತ ಹೇಳಿಕೆಯ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ತೀವ್ರ ವಾಗ್ದಾಳಿ ನಡೆಸಿದೆ. ಚೀನಾ ಸೈನಿಕರು ಗಡಿಯಲ್ಲಿ ಅತಿಕ್ರಮಣ ಮಾಡುತ್ತಿದ್ದರೂ ಮತ್ತು ಭಾರತದ ಗಸ್ತು ಪಾಯಿಂಟ್ ಹಾಗೂ ಗ್ರಾಮಗಳನ್ನು ವಶಪಡಿಸಿಕೊಳ್ಳುತ್ತಿದ್ದರೂ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಭದ್ರತೆ ಮತ್ತು ಗಡಿ ರಕ್ಷಣೆಯ ವಿಚಾರದಲ್ಲಿ ಮೋದಿ ಸರ್ಕಾರವು ಕೈಕಟ್ಟಿ ಕುಳಿತಿದೆ ಎಂದು ಅವರು ಆರೋಪಿಸಿದ್ದಾರೆ.

Category
ಕರಾವಳಿ ತರಂಗಿಣಿ