ಮುಂಬೈ : ಮೂರು ದಿನಗಳ ಭಾರತ ಭೇಟಿಯನ್ನು ಪೂರ್ಣಗೊಳಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಆರ್ಥಿಕ ಪಾಲುದಾರಿಕೆ ಮತ್ತು ಇಂಧನ ಭದ್ರತಾ ಸಹಕಾರವನ್ನು ಮತ್ತಷ್ಟು ಬಲಪಡಿಸುವುದಾಗಿ ತಿಳಿಸಿದ್ದಾರೆ. ಮುಂಬೈನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅವರು ಗುಜರಾತ್‌ನ ಜಾಮ್‌ನಗರದಲ್ಲಿರುವ ತೈಲ ಸಂಸ್ಕರಣಾಗಾರಕ್ಕೆ ಭೇಟಿ ನೀಡಿದ್ದರು.
ಅಕ್ಟೋಬರ್ 20ರಂದು ಭಾರತಕ್ಕೆ ಆಗಮಿಸಿದ್ದ ರೂಬಿಯೊ, ವ್ಯಾಪಾರ, ಹೂಡಿಕೆ, ರಕ್ಷಣೆ, ನಿರ್ಣಾಯಕ ತಂತ್ರಜ್ಞಾನ ಹಾಗೂ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಸಿದ್ದರು. ಮುಂಬೈನ ಗೇಟ್ಸ್ ಆಫ್ ಇಂಡಿಯಾದಲ್ಲಿ ಅಮೆರಿಕದ ರಾಯಭಾರಿ ಸರ್ಗಿಯೋ ಗೋರ್ ಅವರೊಂದಿಗೆ ತೆಗೆಸಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಸಮೃದ್ಧ ಹಾಗೂ ಸುರಕ್ಷಿತ ಇಂಡೋ-ಪೆಸಿಫಿಕ್ ಪ್ರದೇಶಕ್ಕಾಗಿ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.