image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ದೆಹಲಿ ಗಲಭೆಗೆ ಸಹ ನಾಯಕರ ಮೇಲೆ ಆರೋಪ ಹೊರಿಸಿ ನಂತರ ಯೂಟರ್ನ್ ಹೊಡೆದ ಅಭಿಜೀತ್ ದೀಪ್ಕೆ

ದೆಹಲಿ ಗಲಭೆಗೆ ಸಹ ನಾಯಕರ ಮೇಲೆ ಆರೋಪ ಹೊರಿಸಿ ನಂತರ ಯೂಟರ್ನ್ ಹೊಡೆದ ಅಭಿಜೀತ್ ದೀಪ್ಕೆ

ನವದೆಹಲಿ : ದೆಹಲಿಯಲ್ಲಿ ಪ್ರತಿಭಟನೆ ಹಾಗೂ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ತನಿಖೆ ಬಿಗಿಯಾಗುತ್ತಿದ್ದಂತೆ, ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ತಮ್ಮ ಹೇಳಿಕೆಯಿಂದ ಹಿಂದೆ ಸರಿದು ಯೂಟರ್ನ್ ಹೊಡೆದಿದ್ದಾರೆ.

ದೆಹಲಿ ಗಲಭೆ ವಿಚಾರಣೆಯನ್ನು ಕ್ರೈಂ ಬ್ರಾಂಚ್ ಕೈಗೆತ್ತಿಕೊಂಡಿರುವುದು ಮತ್ತು ಅಗತ್ಯ ಬಿದ್ದರೆ ಎನ್ಐಎ (NIA) ತನಿಖೆಗೆ ವಹಿಸುವ ಸಾಧ್ಯತೆಯಿರುವುದು ದೀಪ್ಕೆTrailing ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ತನಿಖೆಯಿಂದ ಪ್ರತಿಭಟನೆಯ ಫಂಡಿಂಗ್ ಹಾಗೂ ಅಸಲಿ ಉದ್ದೇಶ ಹೊರಬರಲಿದೆ ಎಂಬ ಒತ್ತಡದಿಂದಾಗಿ, ದೀಪ್ಕೆ ಆರಂಭದಲ್ಲಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿ ಪ್ರತಿಭಟನೆಯ ಎಲ್ಲ ಹೊಣೆಯನ್ನು ಜೈಲಿನಲ್ಲಿರುವ ಸಹ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ ಮೇಲೆ ಹಾಕುವ ಪ್ರಯತ್ನ ಮಾಡಿದ್ದರು. ತಾನು ಕೇವಲ ಅವರ ಆದೇಶವನ್ನು ಪಾಲಿಸಿದ್ದೆ ಎಂದು ಹೇಳಿಕೆ ನೀಡಿ ಭಾರೀ ಟ್ರೋಲ್‌ಗೆ ಗುರಿಯಾಗಿದ್ದರು.

ಆದರೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಅಭಿಜೀತ್ ದೀಪ್ಕೆ, ತಾನು ಯಾರ ಮೇೆಯೂ ಗೂಬೆ ಕೂರಿಸುತ್ತಿಲ್ಲ ಎಂದಿದ್ದಾರೆ. ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ತಮ್ಮಗಿಂತ ಉತ್ತಮ ನಾಯಕರು ಹಾಗೂ ಉತ್ತಮ ವ್ಯಕ್ತಿಗಳಾಗಿದ್ದು, ತಾವು ಮೂವರು ಒಟ್ಟಾಗಿಯೇ ಎಲ್ಲಾ ಯೋಜನೆಗಳನ್ನು ರೂಪಿಸಿದ್ದೇವೆ ಎಂದು ಸಮಜಾಯಿಷಿ ನೀಡುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ.

Category
ಕರಾವಳಿ ತರಂಗಿಣಿ