image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ದೆಹಲಿ ವಿಮಾನ ನಿಲ್ದಾಣದಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ ಗೆ ತಡೆ

ದೆಹಲಿ ವಿಮಾನ ನಿಲ್ದಾಣದಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ ಗೆ ತಡೆ

ನವದೆಹಲಿ : ಪ್ಯಾರಿಸ್ ಪ್ರವಾಸ ಮುಗಿಸಿ ಸೋಮವಾರ ತಡರಾತ್ರಿ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಸುಮಾರು ಮೂರು ಗಂಟೆಗಳ ಕಾಲ ಅಥಾರಿಟಿ ವಶದಲ್ಲಿಟ್ಟು, 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪ್) ಗಂಭೀರ ಆರೋಪ ಮಾಡಿದೆ.

ಅಂತರರಾಷ್ಟ್ರೀಯ ಆಹಾರ ವ್ಯಾಪಾರ ಪ್ರದರ್ಶನವಾದ 'ಸಿಯಾಲ್ ಪ್ಯಾರಿಸ್ 2026' ರಲ್ಲಿ ಭಾಗವಹಿಸಿ ಪಂಜಾಬಿ ಉತ್ಪನ್ನಗಳನ್ನು ಉತ್ತೇಜಿಸಿ ಮರಳುತ್ತಿದ್ದ ಸಿಎಂ ಮಾನ್ ಅವರನ್ನು ಕೇಂದ್ರ ಸರ್ಕಾರದ ಮೇಲಿನ ಒತ್ತಡದಿಂದಾಗಿ ಉದ್ದೇಶಪೂರ್ವಕವಾಗಿ ತಡೆದು ಅವಮಾನಿಸಲಾಗಿದೆ ಎಂದು ಆಪ್ ಮಾಧ್ಯಮ ಉಸ್ತುವಾರಿ ಬಲ್ತೇಜ್ ಪನ್ನು ದೂರಿದ್ದಾರೆ. ಕೇಂದ್ರವು ವಿದೇಶಿ ಪ್ರವಾಸಕ್ಕೆ ರಾಜಕೀಯ ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೊರೆ ಹೋದ ನಂತರವೇ ಮಾನ್ ಈ ಪ್ರವಾಸ ಕೈಗೊಂಡಿದ್ದರು ಎಂದು ಅವರು ತಿಳಿಸಿದ್ದಾರೆ. ದಂಡ ವಿಧಿಸಿರುವ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಹಾಗೂ ಕೇಂದ್ರ ಸರ್ಕಾರದಿಂದ ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

Category
ಕರಾವಳಿ ತರಂಗಿಣಿ