ಉತ್ತರ ಪ್ರದೇಶ : ಕಾವೇರುತ್ತಿರುವಂತೆಯೇ, ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಮುಸ್ಲಿಂ ಸಮುದಾಯದ ರಾಜಕೀಯ ಭವಿಷ್ಯದ ಕುರಿತು ಮಹತ್ವದ ಕರೆ ನೀಡಿದ್ದಾರೆ. ದಶಕಗಳಿಂದ ಗಾಂಧಿ ಮತ್ತು ನೆಹರೂ ಅವರ ಹೆಸರನ್ನು ನಂಬಿಕೊಂಡು ಕಾಂಗ್ರೆಸ್ ಪಕ್ಷದ ಹಿಂದೆ ಹೋದದ್ದು ಸಾಕು ಎಂದು ಅವರು ಹೇಳಿದ್ದಾರೆ. ಮುಸ್ಲಿಂ ಸಮುದಾಯದ ಬೆಂಬಲದಿಂದ ಇತರರು ಜನನಾಯಕರಾಗಿ ಬೆಳೆದ ಹೊರತು ಸಮುದಾಯಕ್ಕೆ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಮುಂದೆ ಮುಸ್ಲಿಂ ಸಮುದಾಯದವರು ಯಾರಿಗೂ ಜೀತದಾಳುಗಳಾಗಿರಬಾರದು ಎಂದು ಪ್ರತಿಪಾದಿಸಿರುವ ಅವರು, ಸಮುದಾಯದ ಕಷ್ಟ-ನಷ್ಟಗಳನ್ನು ಅರಿತುಕೊಂಡು ಧ್ವನಿ ಎತ್ತುವ ಸ್ವಂತ ಸಮುದಾಯದ ಸಾಮಾನ್ಯ ವ್ಯಕ್ತಿಗಳೇ ನಾಯಕರಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದ್ದಾರೆ. ಮುಸ್ಲಿಂ ಮತ ಬ್ಯಾಂಕನ್ನೇ ನೆಚ್ಚಿಕೊಂಡು ಸಾಗುತ್ತಿರುವ ಕಾಂಗ್ರೆಸ್ ಹಾಗೂ ಇತರ ಜಾತ್ಯತೀತ ಪಕ್ಷಗಳಿಗೆ ಒವೈಸಿ ಅವರ ಈ ದಿಢೀರ್ ಹೇಳಿಕೆ ಮತ್ತು ಸ್ವತಂತ್ರ ರಾಜಕೀಯ ನಿಲುವು ಬಲವಾದ ಪೆಟ್ಟು ನೀಡಿದೆ.