image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಅಭಿಜೀತ್ ದೀಪ್ಕೆ ಅಜ್ಜಿ ಅಂತ್ಯಕ್ರಿಯೆ ವಿವಾದ: ದೆಹಲಿ ಪೊಲೀಸ್ ಮತ್ತು ಕುಟುಂಬದ ಆರೋಪ-ಪ್ರತ್ಯಾರೋಪ

ಅಭಿಜೀತ್ ದೀಪ್ಕೆ ಅಜ್ಜಿ ಅಂತ್ಯಕ್ರಿಯೆ ವಿವಾದ: ದೆಹಲಿ ಪೊಲೀಸ್ ಮತ್ತು ಕುಟುಂಬದ ಆರೋಪ-ಪ್ರತ್ಯಾರೋಪ

ಮುಂಬೈ : ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಅಜ್ಜಿ ಸಾವಿತ್ರಿಬಾಯಿ ಶಂಕರರಾವ್ ದೀಪ್ಕೆ ನಿಧನದ ಸಂದರ್ಭದಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಹಾಗೂ ಅಭಿಜೀತ್ ಕುಟುಂಬದವರ ನಡುವೆ ತೀವ್ರ ವಾಗ್ವಾದ ಹಾಗೂ ಆರೋಪ-ಪ್ರತ್ಯಾರೋಪಗಳು ನಡೆದಿವೆ. ಅಭಿಜೀತ್ ದೀಪ್ಕೆ ಅವರ ಅಜ್ಜಿ ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಶನಿವಾರ ನಿಧನರಾಗಿದ್ದು, ಭಾನುವಾರ ಬೆಳಿಗ್ಗೆ ಅಂತ್ಯಕ್ರಿಯೆ ನೆರವೇರಿತ್ತು. ಆದರೆ ದೆಹಲಿ ಪೊಲೀಸರ ವಿಳಂಬ ಧೋರಣೆ ಹಾಗೂ ಬಿಡುಗಡೆ ಮಾಡದ ಕಾರಣದಿಂದ ಅಭಿಜೀತ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಅವರ ಕುಟುಂಬದವರು ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು, ಅಜ್ಜಿಯ ಸಾವಿನ ಸುದ್ದಿ ಹಾಗೂ ಅಂತ್ಯಕ್ರಿಯೆಯ ಸಮಯವನ್ನು ಅಭಿಜೀತ್ ಅವರಿಗೆ ತಲುಪಿಸಿ, ಪ್ರಯಾಣಕ್ಕೆ ಬಸ್ ಅಥವಾ ವಿಮಾನದ ವ್ಯವಸ್ಥೆ ಮಾಡಿಕೊಡುವುದಾಗಿ ಮಾನವೀಯ ನೆಲೆಯಲ್ಲಿ ಸಹಾಯ ಹಸ್ತ ಚಾಚಿದ್ದಾಗಿ ತಿಳಿಸಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಆದರೆ ದೆಹಲಿ ಪೊಲೀಸರ ಈ ವಾದವನ್ನು ಅಭಿಜೀತ್ ದೀಪ್ಕೆ ತಳ್ಳಿಹಾಕಿದ್ದು, ತಮ್ಮ ಫೋನ್ ನೀಡಲು ಮತ್ತು ವಕೀಲರೊಂದಿಗೆ ಮಾತನಾಡಲು ಪೊಲೀಸರು ಅವಕಾಶ ನೀಡಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಬೆಳಿಗ್ಗೆ 3:30ರ ಸುಮಾರಿಗೆ ಬಂಧನ ದಾಖಲೆಗಳಿಗೆ ಬಲವಂತವಾಗಿ ಸಹಿ ಹಾಕಿಸಿಕೊಳ್ಳಲು ಬಂದ ಪೊಲೀಸರಿಗೆ ಆ ಸಮಯದಲ್ಲಿ ಮಾನವೀಯತೆ ಎಲ್ಲಿ ಹೋಗಿತ್ತು ಎಂದು ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕ ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ