image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಸಚಿವ ಎಸ್. ಜೈಶಂಕರ್ ತೀಕ್ಷ್ಣ ತಿರುಗೇಟು

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಸಚಿವ ಎಸ್. ಜೈಶಂಕರ್ ತೀಕ್ಷ್ಣ ತಿರುಗೇಟು

ನವದೆಹಲಿ : ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಭಾರತದ ರಾಜತಾಂತ್ರಿಕ ಗತ್ತು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಪ್ರದರ್ಶನಗೊಂಡಿದೆ. ನೌಕಾಯಾನ ಮತ್ತು ನಾವಿಕರ ಭದ್ರತೆಗೆ ಸಂಬಂಧಿಸಿದಂತೆ ನಡೆದ ಜಂಟಿ ಮಾಧ್ಯಮ ಸಂವಾದದಲ್ಲಿ ಮಾತನಾಡುತ್ತಿದ್ದ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು, ತಮ್ಮ ತೀಕ್ಷ್ಣ ಮಾತುಗಳ ಮೂಲಕ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರಿ ಮುಖಭಂಗ ಮಾಡಿದ್ದಾರೆ.

ಮಾಧ್ಯಮ ಸಂವಾದದ ವೇಳೆ ಪಾಕಿಸ್ತಾನದ ಮಾಧ್ಯಮ ಪ್ರತಿನಿಧಿಯೊಬ್ಬ ಎದ್ದು ನಿಂತು, ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು ಯಾವಾಗ ನಿಲ್ಲಿಸುತ್ತದೆ ಎಂದು ಪ್ರಚೋದನಾಕಾರಿಯಾಗಿ ಪ್ರಶ್ನಿಸಿದ್ದನು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಜೈಶಂಕರ್, "ಭಯೋತ್ಪಾದಕ ದೇಶವೊಂದು ನನಗೆ ಈ ಪ್ರಶ್ನೆ ಕೇಳುತ್ತಿದೆಯಾ? ಸಾಕು ಬಿಡಿ!" ಎಂದು ಕಟುವಾಗಿ ತಿರುಗೇಟು ನೀಡಿದರು. ಸಚಿವರ ಈ ಸಮಯಪ್ರಜ್ಞೆ ಮತ್ತು ದಿಟ್ಟ ಉತ್ತರವು ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ನೈಜ ಮುಖವಾಡವನ್ನು ಬಿಚ್ಚಿಟ್ಟಿದೆ.

ಈ ಪ್ರಸಂಗದಲ್ಲಿ ಮಧ್ಯಪ್ರವೇಶಿಸಿದ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಹರೀಶ್ ಪರ್ವತನೇನಿ, ಪಾಕ್ ಪತ್ರಕರ್ತನಿಗೆ "ನಿಮಗೆ ಸಿಗಬೇಕಾದ ಉತ್ತರ ಅತ್ಯಂತ ಸ್ಪಷ್ಟವಾಗಿ ಮತ್ತು ಜೋರಾಗಿ ಸಿಕ್ಕಿದೆ" ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು. ಸದ್ಯ ಜೈಶಂಕರ್ ಅವರ ಈ ಪ್ರತ್ಯುತ್ತರದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಚಿವರ ರಾಜತಾಂತ್ರಿಕ ನಡೆಯನ್ನು ದೇಶಾದ್ಯಂತ ಮೆಚ್ಚಿ ಕೊಂಡಾಡಲಾಗುತ್ತಿದೆ.

Category
ಕರಾವಳಿ ತರಂಗಿಣಿ