image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಎಲೆಕ್ಷನ್ ಕಮಿಷನರ್ ಎಸ್.ಎಸ್. ಸಂಧುಗೇ ಎಸ್‌ಐಆರ್ ನೋಟಿಸ್!

ಎಲೆಕ್ಷನ್ ಕಮಿಷನರ್ ಎಸ್.ಎಸ್. ಸಂಧುಗೇ ಎಸ್‌ಐಆರ್ ನೋಟಿಸ್!

ನವದೆಹಲಿ : ದೇಶಾದ್ಯಂತ ಹಂತ ಹಂತವಾಗಿ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಎಲ್‌ಒ ಮತ್ತು ಚುನಾವಣಾ ಆಯೋಗದ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಡುವೆ ಸ್ವತಃ ಎಲೆಕ್ಷನ್ ಕಮಿಷನರ್ ಎಸ್.ಎಸ್. ಸಂಧು ಅವರಿಗೇ ಎಸ್‌ಐಆರ್ ನೋಟಿಸ್ ನೀಡಲಾಗಿರುವುದು ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮತದಾರರ ಪಟ್ಟಿಯಲ್ಲಿರುವ ಹೆಸರು ಹಾಗೂ ಅವರ ಅಧಿಕೃತ ದಾಖಲೆಗಳಲ್ಲಿರುವ ಹೆಸರಿನ ಸ್ಪೆಲ್ಲಿಂಗ್ ಮಿಸ್‌ಮ್ಯಾಚ್ (ಅಕ್ಷರ ದೋಷ) ಆಗಿರುವುದೇ ಈ ನೋಟಿಸ್‌ಗೆ ಮುಖ್ಯ ಕಾರಣವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯ ವೆರಿಫಿಕೇಶನ್ ಪ್ರಕ್ರಿಯೆಯ ಭಾಗವಾಗಿ ಈ ನೋಟಿಸ್ ಜಾರಿಯಾಗಿದ್ದು, ಕಮಿಷನರ್ ಎಸ್.ಎಸ್. ಸಂಧು ಅವರು ಸೂಕ್ತ ಪೂರಕ ದಾಖಲೆಗಳನ್ನು ಸಲ್ಲಿಕೆ ಮಾಡಿ ತಮ್ಮ ಹೆಸರಿನಲ್ಲಿರುವ ದೋಷವನ್ನು ಸರಿಪಡಿಸಿಕೊಳ್ಳಬೇಕಾಗಿದೆ.

ಇನ್ನೊಂದೆಡೆ ವಿಪಕ್ಷ ನಾಯಕರು ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣ ಕೈಬಿಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಪ್ರಮುಖ ನಾಯಕರು ಈ ಪ್ರಕ್ರಿಯೆಯ ಮೂಲಕ ಜನಸಾಮಾನ್ಯರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಕ್ರಮವಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿ ವೋಟರ್ ಐಡಿ ಪಡೆದವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದ್ದು, ಎರಡು ವೋಟರ್ ಐಡಿ ಅಥವಾ ವಿಳಾಸ ಮತ್ತು ಹೆಸರುಗಳಲ್ಲಿ ದೋಷವಿರುವ ಪ್ರತಿಯೊಬ್ಬರಿಗೂ ನೋಟಿಸ್ ನೀಡಲಾಗುತ್ತಿದೆ. ನೋಟಿಸ್ ಪಡೆದವರು ನಿಗದಿತ ಚುನಾವಣಾ ಆಯೋಗದ ಕೇಂದ್ರಗಳಿಗೆ ತೆರಳಿ ಸರಿಯಾದ ದಾಖಲೆಗಳನ್ನು ನೀಡಿ ದೋಷ ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದೀಗ ಉನ್ನತ ಹುದ್ದೆಯಲ್ಲಿರುವ ಎಲೆಕ್ಷನ್ ಕಮಿಷನರ್ ಅವರಿಗೇ ನೋಟಿಸ್ ಜಾರಿಯಾಗಿರುವುದು ಈ ಪ್ರಕ್ರಿಯೆಯ ತೀವ್ರತೆಗೆ ಸಾಕ್ಷಿಯಾಗಿದೆ.

Category
ಕರಾವಳಿ ತರಂಗಿಣಿ