image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ಭರ್ಜರಿ ಮುನ್ನಡೆ

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ಭರ್ಜರಿ ಮುನ್ನಡೆ

ರಾಜಸ್ಥಾನ : ರಾಜಸ್ಥಾನದ 309 ನಗರ ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಭರದಿಂದ ಸಾಗುತ್ತಿದ್ದು, ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಪಷ್ಟ ಮುನ್ನಡೆ ಸಾಧಿಸಿದೆ. ರಾಜ್ಯದಾದ್ಯಂತ ಪುರಸಭೆ, ನಗರಸಭೆ ಹಾಗೂ ನಗರ ನಿಗಮಗಳ ಫಲಿತಾಂಶಗಳು ಹೊರಬೀಳುತ್ತಿದ್ದು, ಪ್ರಮುಖ ನಗರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗಮನಾರ್ಹ ಸಾಧನೆ ತೋರುತ್ತಿದ್ದಾರೆ.

ರಾಜ್ಯದ 10 ನಗರ ನಿಗಮಗಳ ಪೈಕಿ ಜೈಪುರ, ಉದಯಪುರ, ಕೋಟಾ, ಭಿಲ್ವಾರ ಮತ್ತು ಅಜ್ಮೇರ್ ಸೇರಿದಂತೆ ಬಹುತೇಕ ನಿಗಮಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದರೆ, ಜೋದಪುರ ಮತ್ತು ಪಾಲಿಯಲ್ಲಿ ಕಾಂಗ್ರೆಸ್ ಪೈಪೋಟಿ ನೀಡುತ್ತಿದೆ. ರಾಜಧಾನಿ ಜೈಪುರ ನಗರ ನಿಗಮದ 150 ವಾರ್ಡ್‌ಗಳ ಮತ ಎಣಿಕೆಯಲ್ಲಿ ಬಿಜೆಪಿ ಪ್ರಮುಖ ಸ್ಥಾನಗಳನ್ನು ಗೆದ್ದು ಮುನ್ನಡೆ ಕಾಯ್ದುಕೊಂಡಿದೆ.

ಈ ಬಾರಿಯ ಚುನಾವಣೆಗೆ ಸೆಪ್ಟೆಂಬರ್ 9 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಒಟ್ಟು ಶೇ. 70.68 ರಷ್ಟು ಮತದಾನ ದಾಖಲಾಗಿದ್ದು, 38,000ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗುತ್ತಿದೆ. 47 ನಗರ ಸಭೆಗಳು ಹಾಗೂ 252 ಪುರಸಭೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಹಲವು ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಕೂಡ ಗಮನಾರ್ಹ ಮತ ಗಳಿಸಿದ್ದಾರೆ.

Category
ಕರಾವಳಿ ತರಂಗಿಣಿ