image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪಾಕ್ ಸೇನಾ ಮುಖ್ಯಸ್ಥ ಮುನೀರ್ ವಿರುದ್ಧ ಕಿಡಿಕಾರಿದ ಇರಾನ್ ಪತ್ರಕರ್ತ: ಮೋದಿ ರಾಜತಾಂತ್ರಿಕತೆಗೆ ಜಾಗತಿಕ ಬೆಂಬಲ

ಪಾಕ್ ಸೇನಾ ಮುಖ್ಯಸ್ಥ ಮುನೀರ್ ವಿರುದ್ಧ ಕಿಡಿಕಾರಿದ ಇರಾನ್ ಪತ್ರಕರ್ತ: ಮೋದಿ ರಾಜತಾಂತ್ರಿಕತೆಗೆ ಜಾಗತಿಕ ಬೆಂಬಲ

ನವದೆಹಲಿ : ನವದೆಹಲಿಯ ಬ್ರಿಕ್ಸ್ ಶೃಂಗಸಭೆಯ ವೇಳೆ ಸುದ್ದಿ ಸಂಸ್ಥೆ ANI ಜೊತೆ ಮಾತನಾಡಿದ ಇರಾನ್ ಪತ್ರಕರ್ತ ಬಾಸಿಮ್ ಲಾಲೆಹ್, ಪಾಕಿಸ್ತಾನಿ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಮಿಸ್ಟರ್ ಮುನೀರ್, ನೀವು ಯಾವುದಕ್ಕೂ ಲಾಯಕ್ಕಿಲ್ಲ, ನಿಮ್ಮನ್ನು ಕೆಲಸದಿಂದ ತೆಗೆದುಹಾಕಲಾಗಿದೆ" ಎಂದು ನೇರವಾಗಿ ವಾಗ್ದಾಳಿ ನಡೆಸಿದ ಅವರು, ಸ್ವಂತ ಆರ್ಥಿಕತೆಯನ್ನೇ ನಿಭಾಯಿಸಲಾಗದ ಪಾಕಿಸ್ತಾನದ ಮಿಲಿಟರಿ ಆಡಳಿತವೇ ಕೊಲ್ಲಿ ಪ್ರದೇಶದ ಅಸ್ಥಿರತೆಗೆ ಮೂಲ ಕಾರಣ ಎಂದು ದೂರಿದ್ದಾರೆ.

ಜಾಗತಿಕ ತೈಲ ವ್ಯಾಪಾರದ ಪ್ರಮುಖ ಮಾರ್ಗವಾದ 'ಹಾರ್ಮುಜ್ ಜಲಸಂಧಿ'ಯ ರಕ್ಷಣೆಯ ನೆಪದಲ್ಲಿ ಗಲ್ಫ್ ದೇಶಗಳಿಗೆ ಪಾಕಿಸ್ತಾನ ನೀಡುತ್ತಿದ್ದ ಖಾಲಿ ಭರವಸೆಗಳನ್ನು ಗಲ್ಫ್ ರಾಷ್ಟ್ರಗಳು ಸಂಪೂರ್ಣವಾಗಿ ತಿರಸ್ಕರಿಸಿವೆ. ಇರಾನ್ ಅಧ್ಯಕ್ಷ ಮಸೌದ್ ಪಜೇಶ್ಕಿಯಾನ್ ಮತ್ತು ಅಬುಧಾಬಿ ಕ್ರೌನ್ ಪ್ರಿನ್ಸ್ ನಡುವಿನ ಮಾತುಕತೆಗಳ ಫಲವಾಗಿ 'ಇರಾನ್-ಅಬುಧಾಬಿ-ಭಾರತ' ನೂತನ ರಾಜತಾಂತ್ರಿಕ ಮೈತ್ರಿ ಗಟ್ಟಿಯಾಗುತ್ತಿದ್ದು, ಈ ಹೊಸ ರಾಜತಾಂತ್ರಿಕ ಸಮೀಕರಣದಲ್ಲಿ ಪಾಕಿಸ್ತಾನವನ್ನು ಸಂಪೂರ್ಣವಾಗಿ ಹೊರಗಿಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ 'ಶಾಂತಿ ಮತ್ತು ವ್ಯಾಪಾರ' ಮಾದರಿ ಹಾಗೂ ಬ್ರಿಕ್ಸ್ ವೇದಿಕೆಯಲ್ಲಿ ಭಾರತ ತೋರುತ್ತಿರುವ ಬಲವಾದ ನಾಯಕತ್ವದಿಂದಾಗಿ ಮುಂದಿನ ಎರಡು ತಿಂಗಳಲ್ಲಿ ಮಧ್ಯಪ್ರಾಚ್ಯದಲ್ಲಿನ ಯುದ್ಧದ ಮೋಡಗಳು ಕರಗಲಿವೆ ಎಂದು ಬಾಸಿಮ್ ಲಾಲೆಹ್ ಭವಿಷ್ಯ ನುಡಿದಿದ್ದಾರೆ. ಈ ಬೆಳವಣಿಗೆಗಳು ಜಾಗತಿಕ ರಂಗದಲ್ಲಿ ಪಾಕಿಸ್ತಾನದ ವೈಫಲ್ಯವನ್ನು ಬಯಲುಗೊಳಿಸಿದ್ದು, ಭಾರತವು ಪ್ರಾದೇಶಿಕ ಭದ್ರತೆ ಮತ್ತು ಶಾಂತಿಯ ಮುಖ್ಯ ನಿಯಂತ್ರಕ ಶಕ್ತಿಯಾಗಿ ಹೊರಹೊಮ್ಮಿರುವುದನ್ನು ಎತ್ತಿಹಿಡಿದಿವೆ.

Category
ಕರಾವಳಿ ತರಂಗಿಣಿ