image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

‘ಮಹಿಳೆಯರು ಮನೆಯಲ್ಲೇ ಇರಬೇಕು’: ಕಾಂತಪುರಂ ಮುಸ್ಲಿಯಾರ್ ಹೇಳಿಕೆಗೆ ತೀವ್ರ ಆಕ್ಷೇಪ

‘ಮಹಿಳೆಯರು ಮನೆಯಲ್ಲೇ ಇರಬೇಕು’: ಕಾಂತಪುರಂ ಮುಸ್ಲಿಯಾರ್ ಹೇಳಿಕೆಗೆ ತೀವ್ರ ಆಕ್ಷೇಪ

ಕೇರಳಮ್ : ಮಹಿಳೆಯರು ಸಾರ್ವಜನಿಕ ಜೀವನದಿಂದ ದೂರವಿದ್ದು ಮನೆಯಲ್ಲೇ ಇರಬೇಕು ಎಂದು ಸುನ್ನಿ ಧಾರ್ಮಿಕ ಮುಖಂಡ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ನೀಡಿರುವ ಹೇಳಿಕೆಗೆ ಕೇರಳದಲ್ಲಿ ತೀವ್ರ ಆಕ್ಷೇಪ ಮತ್ತು ವಿರೋಧ ವ್ಯಕ್ತವಾಗಿದೆ. ಕೊಚ್ಚಿಯಲ್ಲಿ ನಡೆದ ಹುಬ್ಬುಲ್ ರಸೂಲ್ ಸಮ್ಮೇಳನದಲ್ಲಿ ಮಾತನಾಡಿದ್ದ ಕಾಂತಪುರಂ, ಮಹಿಳೆಯರು ಸಾರ್ವಜನಿಕ ವೇದಿಕೆಗಳಿಗೆ ಬರುವುದರಿಂದ ಸಾಮಾಜಿಕವಾಗಿ ದುಷ್ಪರಿಣಾಮಗಳು ಉಂಟಾಗುತ್ತವೆ ಹಾಗೂ ಪರ್ದಾ ಪದ್ಧತಿಯು ಅವರ ಗೌರವವನ್ನು ಕಾಪಾಡುತ್ತದೆ ಎಂದು ಸಮರ್ಥಿಸಿಕೊಂಡಿದ್ದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮತ್ತು ಸಾರ್ವಜನಿಕ ಮೆರವಣಿಗೆಗಳಲ್ಲಿ ಯುವತಿಯರು ಭಾಗವಹಿಸುವುದನ್ನು ತಡೆಯಲು ಸಮಸ್ತ ಕೇರಳ ಜಮೀಯ್ಯತುಲ್ ಉಲಮಾದ ಕಾಂತಪುರಂ ಬಣವು ಸ್ಥಳೀಯ ಮದರಸಾ ಹಾಗೂ ಮಹಲ್‌ಗಳಿಗೆ ನಿರ್ದೇಶನ ನೀಡಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿ ಎಂ ಸತೀಶನ್, ಮಹಿಳೆಯರನ್ನು ಸಾರ್ವಜನಿಕ ಜೀವನದಿಂದ ದೂರವಿಡುವ ಯಾವುದೇ ನಿಲುವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಮತ್ತು ಎಲ್ಲ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬುದೇ ಪ್ರಗತಿಪರ ನಿಲುವಾಗಿದೆ. ಮಹಿಳೆಯರನ್ನು ಮನೆಯೊಳಗೆ ಸೀಮಿತಗೊಳಿಸುವ ಇಂತಹ ಅಭಿಪ್ರಾಯಗಳು ಸಮಾಜವನ್ನು ಹಿಂದಿನ ಶತಮಾನಗಳಿಗೆ ಕೊಂಡೊಯ್ಯುತ್ತವೆ ಎಂದು ತೀವ್ರವಾಗಿ ಖಂಡಿಸಿದ್ದಾರೆ.

ಭಾರತೀಯ ಸಂವಿಧಾನವು ಪುರುಷ ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಾತರಿಪಡಿಸಿದೆ ಎಂದು ಬಿಂದು ಕೃಷ್ಣ ಪ್ರತಿಪಾದಿಸಿದ್ದಾರೆ. ಪ್ರತಿಯೊಬ್ಬರಿಗೂ ಸ್ವತಂತ್ರವಾಗಿ ಸಂಚರಿಸುವ ಮತ್ತು ಬದುಕುವ ಹಕ್ಕಿದ್ದು, ಮಹಿಳೆಯರು ಸಮಾಜದಲ್ಲಿ ತಮ್ಮದೇ ಆದ ಪ್ರಮುಖ ಪಾತ್ರ ವಹಿಸಲು ಅರ್ಹರಾಗಿದ್ದಾರೆ. ಆದ್ದರಿಂದ ಮಹಿಳೆಯರ ಸ್ವತಂತ್ರ ಹಕ್ಕುಗಳನ್ನು ಕಸಿಯುವ ಇಂತಹ ಅಭಿಪ್ರಾಯಗಳನ್ನು ಯಾವುದೇ ಕಾರಣಕ್ಕೂ ಬೆಂಬಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ