image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಅಣ್ಣಾ ಹಜಾರೆ ವಿರುದ್ಧ ದೀಪ್ಕೆ ವಿವಾದಾತ್ಮಕ ಹೇಳಿಕೆ: ಅಮಿತ್ ಮಾಳವೀಯ ಆಕ್ರೋಶ

ಅಣ್ಣಾ ಹಜಾರೆ ವಿರುದ್ಧ ದೀಪ್ಕೆ ವಿವಾದಾತ್ಮಕ ಹೇಳಿಕೆ: ಅಮಿತ್ ಮಾಳವೀಯ ಆಕ್ರೋಶ

ನವದೆಹಲಿ : ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಬಗ್ಗೆ ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜಿತ್ ದೀಪ್ಕೆ ನೀಡಿರುವ ವಿವಾದಾತ್ಮಕ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ್ದ ದೀಪ್ಕೆ, ಅಣ್ಣಾ ಹಜಾರೆಯಂತಹ ಹಿರಿಯರನ್ನು 'ಮುದುಕ' ಎಂದು ಹೀಯಾಳಿಸಿದ್ದು, 60 ಅಥವಾ 70 ವರ್ಷ ದಾಟಿದವರು ರಾಜಕೀಯ ಹಾಗೂ ಸಮಾಜಮುಖಿ ಚಟುವಟಿಕೆಗಳಿಂದ ಸಂಪೂರ್ಣವಾಗಿ ನಿವೃತ್ತಿ ಪಡೆದು ವೃದ್ಧಾಶ್ರಮ ಅಥವಾ ಆಶ್ರಮ ಸೇರುವುದು ಸೂಕ್ತ ಎಂದು ಹೇಳಿದ್ದರು. ಅಲ್ಲದೆ, ದೇಶದ ಯುವಕರು ಜವಾಬ್ದಾರಿ ವಹಿಸಿಕೊಳ್ಳಬೇಕು, ಜೀವನದಲ್ಲಿ ಎಲ್ಲವನ್ನೂ ಕಂಡಿರುವ ಈ ವೃದ್ಧರು ಇನ್ನು ಎಷ್ಟು ಕಾಲ ದೇಶದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಏಕವಚನದಲ್ಲೇ ಪ್ರಶ್ನಿಸಿದ್ದರು.

ದೀಪ್ಕೆ ಅವರ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಹಾಗೂ ರಾಜಕೀಯ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಹಿರಿಯರಿಂದ ಸ್ಫೂರ್ತಿ ಪಡೆಯುವುದಿರಲಿ, ಅವರ ಬಗ್ಗೆ ಇಂತಹ ಕೀಳುಮಟ್ಟದ ಭಾಷೆ ಬಳಸುವುದು ಅಸಭ್ಯತೆ ಮಾತ್ರವಲ್ಲ, ಅವರಲ್ಲಿರುವ ಸಂಸ್ಕೃತಿಯ ಕೊರತೆಯನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ. ತಂದೆ ಸಮಾನರಾದ ವ್ಯಕ್ತಿಗಳ ಬಗ್ಗೆ ಇಂತಹ ಮಾತುಗಳನ್ನಾಡುವವರು ಮೊದಲು ತಮ್ಮ ಸ್ವಂತ ತಂದೆಯ ವಯಸ್ಸನ್ನು ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

Category
ಕರಾವಳಿ ತರಂಗಿಣಿ