image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆ: ಜಾಗತಿಕ ರಾಜತಾಂತ್ರಿಕತೆಗೆ ಭಾರತ ಸಜ್ಜು

ದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆ: ಜಾಗತಿಕ ರಾಜತಾಂತ್ರಿಕತೆಗೆ ಭಾರತ ಸಜ್ಜು

ನವದೆಹಲಿ : ಭಾರತದ ರಾಜತಾಂತ್ರಿಕ ಪರಾಕ್ರಮಕ್ಕೆ ಜಗತ್ತು ಮತ್ತೊಮ್ಮೆ ಸಾಕ್ಷಿಯಾಗಲು ವೇದಿಕೆ ಸಿದ್ಧವಾಗುತ್ತಿದ್ದು, ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತಿಥ್ಯದಲ್ಲಿ ನಡೆಯಲಿರುವ ಈ ಮಹತ್ವದ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಭಾಗವಹಿಸಲಿದ್ದಾರೆ. ಅಮೆರಿಕ ತನ್ನ ಪ್ರಮುಖ ವಿರೋಧಿಗಳೆಂದು ಪರಿಗಣಿಸುವ ಈ ಮೂವರು ಪ್ರಭಾವಿ ನಾಯಕರು ಭಾರತದಲ್ಲಿ ಒಂದೇ ವೇದಿಕೆಯಲ್ಲಿ ಸಭೆ ಸೇರುತ್ತಿರುವುದು ಜಾಗತಿಕ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಈ ಶೃಂಗಸಭೆಯ ವೇಳೆಯಲ್ಲಿ ಪ್ರಧಾನಿ ಮೋದಿ ಅವರು ಈ ಮೂವರೂ ನಾಯಕರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ಸಾಧ್ಯತೆಯಿದೆ. ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಮುಂದುವರಿಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ನಡುವೆ ಈ ಸಭೆ ನಡೆಯುತ್ತಿರುವುದರಿಂದ, ಇಲ್ಲಿಂದ ಹೊರಹೊಮ್ಮುವ ನಿರ್ಧಾರಗಳತ್ತ ಅಮೆರಿಕ ಸೇರಿದಂತೆ ಇಡೀ ವಿಶ್ವವೇ ಕಣ್ಣಿಟ್ಟಿದೆ. ಅಮೆರಿಕದ ಪ್ರಾಬಲ್ಯಕ್ಕೆ ಸವಾಲೊಡ್ಡುವ ಹೊಸ ಜಾಗತಿಕ ಮೈತ್ರಿಕೂಟ ಇಲ್ಲಿ ರೂಪುಗೊಳ್ಳಬಹುದು ಎಂಬ ಆತಂಕ ಪಾಶ್ಚಿಮಾತ್ಯ ದೇಶಗಳಲ್ಲಿದೆ.

ಬ್ರಿಕ್ಸ್ ಗುಂಪಿನ ಪ್ರಮುಖ ಸದಸ್ಯ ದೇಶವಾಗಿರುವ ಭಾರತ, ಈ ಸಭೆಯ ಮೂಲಕ ತನ್ನ ಜಾಗತಿಕ ರಾಜತಾಂತ್ರಿಕ ಕೌಶಲ್ಯವನ್ನು ಪ್ರದರ್ಶಿಸಲಿದೆ. ವ್ಯಾಪಾರ, ಇಂಧನ ಭದ್ರತೆ, ರಕ್ಷಣಾ ಸಹಕಾರ ಹಾಗೂ ಅಂತಾರಾಷ್ಟ್ರೀಯ ಸವಾಲುಗಳ ಕುರಿತು ಪ್ರಮುಖ ಚರ್ಚೆಗಳು ನಡೆಯಲಿವೆ. ವಿಶೇಷವಾಗಿ 2019ರ ಮಹಾಬಲಿಪುರಂ ಸಭೆಯ ನಂತರ ಸುಮಾರು 7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸುತ್ತಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಭೇಟಿಯು, ಭಾರತ-ಚೀನಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. ಇದರೊಂದಿಗೆ, ರಷ್ಯಾದೊಂದಿಗಿನ ಸಾಂಪ್ರದಾಯಿಕ ಸ್ನೇಹ ಮತ್ತು ಚಬಹಾರ್ ಬಂದರು ಸೇರಿದಂತೆ ಇರಾನ್ ಜೊತೆಗಿನ ಆಯಕಟ್ಟಿನ ವ್ಯಾಪಾರ ಒಪ್ಪಂದಗಳ ಕುರಿತೂ ಮಹತ್ವದ ಮಾತುಕತೆಗಳು ನಡೆಯಲಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

Category
ಕರಾವಳಿ ತರಂಗಿಣಿ