image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

'ಜಲ್ಮುರಿ ತಿಂದಿದ್ದು ನಾನಾದರೆ, ಅದರ ಮೆಣಸಿಕಾಯಿ ಖಾರ ತಟ್ಟಿದ್ದು ಟಿಎಂಸಿ ನಾಯಕರಿಗೆ' : ಮೋದಿ

'ಜಲ್ಮುರಿ ತಿಂದಿದ್ದು ನಾನಾದರೆ, ಅದರ ಮೆಣಸಿಕಾಯಿ ಖಾರ ತಟ್ಟಿದ್ದು ಟಿಎಂಸಿ ನಾಯಕರಿಗೆ' : ಮೋದಿ

ಕೋಲ್ಕತ್ತ : 'ಜಲ್ಮುರಿ ತಿಂದಿದ್ದು ನಾನಾದರೆ, ಅದರ ಮೆಣಸಿಕಾಯಿ ಖಾರ ತಟ್ಟಿದ್ದು ಟಿಎಂಸಿ ನಾಯಕರಿಗೆ' ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ. ಕೃಷ್ಣನಗರದಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಲ್ಮುರಿ ವಿಷಯವನ್ನು ತೆಗೆದುಕೊಂಡು ಟಿಎಂಸಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. 'ಮೇ 4 ರಂದು ಬಂಗಾಳದಲ್ಲಿಯೂ ಬಿಜೆಪಿಯ ವಿಜಯದ ಸಂಭ್ರಮಾಚರಣೆ ನಡೆಯಲಿದೆ. ಆ ವೇಳೆ ಸಿಹಿ ಜೊತೆ ಜಲ್ಮುರಿಯನ್ನೂ ಹಂಚಲಾಗುವುದು. ಜಲ್ಮುರಿ ಕೆಲವು ಜನರಿಗೆ ದೊಡ್ಡ ಆಘಾತ ನೀಡಿದೆ. ನಾನು ಜಲ್ಮುರಿ ತಿಂದೆ, ಆದರೆ ಅದರ ಖಾರ ತಗುಲಿದ್ದು ಮಾತ್ರ ಟಿಎಂಸಿಗೆ' ಎಂದು ಹೇಳಿದ್ದಾರೆ. ಮುಂದುವರಿದು, '15 ವರ್ಷಗಳ ಹಿಂದೆ ಜನರು ಕಮ್ಯುನಿಸ್ಟರ ವಿರುದ್ಧವಾಗಿದ್ದರು. ಇಂದು ಅವರು ಟಿಎಂಸಿಯ ಜಂಗಲ್ ರಾಜ್ ವಿರುದ್ಧ ನಿಂತಿದ್ದಾರೆ. ದಮನಕಾರಿಗಳು ಮತ್ತು ಭ್ರಷ್ಟರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ನಮ್ಮ ಮಂತ್ರ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಎಂಬುದು ನಿಮಗೆ ತಿಳಿದಿದೆ. ಆದರೆ ಟಿಎಂಸಿ 'ಘುಸ್ಪೈಠಿಯೋಂ ಕಾ ಸಾಥ್, ಘುಸ್ಪೈಠಿಯೋಂ ಕಾ ವಿಕಾಸ್' (ನುಸುಳುಕೋರರ ಸಾಥ್, ನುಸುಳುಕೋರರ ವಿಕಾಸ) ಎಂಬುದರಲ್ಲಿ ನಂಬಿಕೆ ಇಟ್ಟಿದೆ. ಅವರು ನುಸುಳುಕೋರರಿಗೆ ಆಶ್ರಯ ನೀಡುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.

ಕಳೆದ 50 ವರ್ಷಗಳಲ್ಲೇ ಈ ಚುನಾವಣೆಯಲ್ಲಿ ಹಿಂಸಾಚಾರವು ಅತ್ಯಂತ ಕನಿಷ್ಠ ಮಟ್ಟದಲ್ಲಿದೆ ಎಂದು ಹೇಳಿದ ಅವರು, ಶಾಂತಿಯುತ ಮತದಾನವನ್ನು ಖಚಿತಪಡಿಸಿದ್ದಕ್ಕಾಗಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ್ದಾರೆ. 'ಇದುವರೆಗಿನ ಮಾಹಿತಿಯ ಪ್ರಕಾರ, ಮತದಾನವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುತ್ತಿದೆ. ಎಲ್ಲಿ ಮತದಾನದ ಪ್ರಮಾಣ ಹೆಚ್ಚಿದೆಯೋ ಅಲ್ಲೆಲ್ಲಾ ಬಿಜೆಪಿ ಬಲವಾದ ಜನಾದೇಶವನ್ನು ಪಡೆದಿದೆ ಎಂಬುದನ್ನು ನಾವು ನೋಡಿದ್ದೇವೆ' ಎಂದಿದ್ದಾರೆ.

Category
ಕರಾವಳಿ ತರಂಗಿಣಿ