image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಗೆ ಕೆಂಪು ಹಾಸು ಹಾಸಿಕೊಡುತ್ತಿದೆ : ರಾಹುಲ್ ಗಾಂಧಿ

ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಗೆ ಕೆಂಪು ಹಾಸು ಹಾಸಿಕೊಡುತ್ತಿದೆ : ರಾಹುಲ್ ಗಾಂಧಿ

ಕೋಲ್ಕತ್ತಾ : ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ಈಗ ಹಳೆ ಮಿತ್ರರ ನಡುವೆಯೇ ಯುದ್ಧ ಘೋಷಣೆಯಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ಹಿಂದೆಂದೂ ಕಾಣದ ರೀತಿಯಲ್ಲಿ ಕಿಡಿಕಾರಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಗೆ ಕೆಂಪು ಹಾಸು ಹಾಸಿಕೊಡುತ್ತಿದೆ ಎಂದು ರಾಹುಲ್ ನೇರ ವಾಗ್ದಾಳಿ ನಡೆಸಿದ್ದಾರೆ. ರಾಯ್‌ಗಂಜ್‌ನಲ್ಲಿ ನಡೆದ ಬೃಹತ್ ಱಲಿಯಲ್ಲಿ ಮಾತನಾಡಿದ ರಾಹುಲ್​​​​​, ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಬ್ಬರನ್ನೂ ಭ್ರಷ್ಟಾಚಾರದ ವಿಷಯದಲ್ಲಿ ಸಮಾನವಾಗಿ ಗುರಿ ಮಾಡಿದರು. ನರೇಂದ್ರ ಮೋದಿ ಭ್ರಷ್ಟ ಎಂಬುದು ಜಗತ್ತಿಗೇ ಗೊತ್ತು, ಆದರೆ ಭ್ರಷ್ಟಾಚಾರದ ಈ ರೇಸ್‌ನಲ್ಲಿ ತೃಣಮೂಲ ಕಾಂಗ್ರೆಸ್ ಕೂಡ ಹಿಂದೆ ಬಿದ್ದಿಲ್ಲ ಎಂದು ಲೇವಡಿ ಮಾಡಿದ್ದಾರೆ. ಬಂಗಾಳವನ್ನು ಕಾಡುತ್ತಿರುವ ಪ್ರಮುಖ ಹಗರಣಗಳ ಅಂಕಿಅಂಶಗಳನ್ನು ನೀಡಿದ ಅವರು, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸುಮಾರು 17 ಲಕ್ಷ ಹೂಡಿಕೆದಾರರ ₹1,900 ಕೋಟಿ ಹಣ ಇನ್ನೂ ಪಾವತಿಯಾಗಿಲ್ಲ.ರೋಸ್ ವ್ಯಾಲಿ ಹಗರಣ: ₹6,600 ಕೋಟಿ ಮೊತ್ತದ ಬೃಹತ್ ಹಗರಣದಲ್ಲಿ 31 ಲಕ್ಷಕ್ಕೂ ಹೆಚ್ಚು ಹೂಡಿಕೆದಾರರು ಬೀದಿಗೆ ಬಿದ್ದಿದ್ದಾರೆ. ಕಲ್ಲಿದ್ದಲು ಕಳ್ಳಸಾಗಣೆ ಮತ್ತು ಅಕ್ರಮ ಗಣಿಗಾರಿಕೆಯಲ್ಲಿ ಟಿಎಂಸಿ ನಾಯಕರು ನೇರವಾಗಿ ಭಾಗಿಯಾಗಿದ್ದಾರೆ ಎಂದು ರಾಹುಲ್ ಆರೋಪಿಸಿದರು. 2021ರ ಚುನಾವಣಾ ಭರವಸೆಗಳನ್ನು ಪ್ರಸ್ತಾಪಿಸಿದ ರಾಹುಲ್, ಟಿಎಂಸಿಯ ಆಡಳಿತ ವೈಫಲ್ಯವನ್ನು ಅಂಕಿಅಂಶಗಳ ಸಮೇತ ತೆರೆದಿಟ್ಟರು. ಒಂದೆಡೆ ಐದು ಲಕ್ಷ ಉದ್ಯೋಗ ನೀಡುವುದಾಗಿ ಟಿಎಂಸಿ ಸರ್ಕಾರ ಹೇಳುತ್ತಿದೆ. ಆದರೆ ವಾಸ್ತವದಲ್ಲಿ 84 ಲಕ್ಷ ಯುವಕರು ನಿರುದ್ಯೋಗ ಭತ್ಯೆಗಾಗಿ ಕಾದು ಕುಳಿತಿದ್ದಾರೆ. ಪಶ್ಚಿಮ ಬಂಗಾಳದ ಜನತೆಗೆ ದ್ರೋಹ ಬಗೆಯಲಾಗುತ್ತಿದೆ ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿಯವರ ಈ ಭಾಷಣವು ಬಂಗಾಳದಲ್ಲಿ ಕಾಂಗ್ರೆಸ್ ತನ್ನ ಕಳೆದುಹೋದ ನೆಲೆಯನ್ನು ಮರಳಿ ಪಡೆಯುವ ತಂತ್ರದ ಭಾಗವಾಗಿದೆ. ಮಮತಾ ಬ್ಯಾನರ್ಜಿಯವರನ್ನು ಬಿಜೆಪಿ ವಿರೋಧಿ ಗುಂಪಿನ ಪ್ರಬಲ ನಾಯಕಿ ಎಂದು ಬಿಂಬಿಸಲಾಗುತ್ತಿದ್ದರೂ, ಬಂಗಾಳದಲ್ಲಿ ಕಾಂಗ್ರೆಸ್ ಈಗ ಅವರನ್ನು ನೇರ ವೈರಿ ಎಂದು ಪರಿಗಣಿಸಿದೆ. ಬಿಜೆಪಿ ಮತಗಳನ್ನು ಕದಿಯಲು ಯತ್ನಿಸುತ್ತಿದ್ದರೆ, ಟಿಎಂಸಿ ಅದಕ್ಕೆ ದಾರಿ ಮಾಡಿಕೊಡುತ್ತಿದೆ ಎನ್ನುವ ಮೂಲಕ, ಬಿಜೆಪಿ ಮತ್ತು ಟಿಎಂಸಿ ನಡುವೆ ಒಳಒಪ್ಪಂದವಿದೆ ಎಂಬ ಅನುಮಾನವನ್ನು ರಾಹುಲ್ ಮತದಾರರಲ್ಲಿ ಬಿತ್ತಲು ಯತ್ನಿಸಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಟಿಎಂಸಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸೂಚನೆ ನೀಡಿದೆ. ಭ್ರಷ್ಟಾಚಾರ ಮತ್ತು ಉದ್ಯೋಗದ ವಿಷಯಗಳನ್ನು ಮುಂದಿಟ್ಟುಕೊಂಡು ಬಂಗಾಳದ ಜನಮನ ಗೆಲ್ಲಲು ಕಾಂಗ್ರೆಸ್ ಮುಂದಾಗಿದೆ ಎಂದು ಹೇಳಲಾಗಿದೆ.

Category
ಕರಾವಳಿ ತರಂಗಿಣಿ