image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ತಮಿಳುನಾಡಿನಲ್ಲಿ 234 ಸ್ಥಾನಗಳ ಪೈಕಿ ಬಿಜಿಪಿ ಸ್ಪರ್ಧೆ 27 ರಲ್ಲಿ ಮಾತ್ರ

ತಮಿಳುನಾಡಿನಲ್ಲಿ 234 ಸ್ಥಾನಗಳ ಪೈಕಿ ಬಿಜಿಪಿ ಸ್ಪರ್ಧೆ 27 ರಲ್ಲಿ ಮಾತ್ರ

ಚೆನ್ನೈ : ಪಂಚ ರಾಜ್ಯ ಚುನಾವಣೆಗಳ ರಾಜ್ಯಗಳಲ್ಲಿ ಎನ್‌ಡಿಎಂ ಮೈತ್ರಿ ಪಕ್ಷಗಳ ಸೀಟು ಹಂಚಿಕೆ ಮಾತುಕತೆ ತೀವ್ರಗೊಂಡಿದೆ. ಇದೀಗ ತಮಿಳುನಾಡಿನಲ್ಲಿ ಎನ್‌ಡಿಎ ಮೈತ್ರಿ ಪಕ್ಷಗಳ ಸಭೆ ನಡೆಸಿ ಸೀಟು ಹಂಚಿಕೆ ಅಂತಿಮಗೊಳಿಸಿದೆ. 234 ಸ್ಥಾನಗಳ ಪೈಕಿ ಬಿಜಿಪಿ ಸ್ಪರ್ಧೆ ಮಾಡಲು ಸಿಕ್ಕಿದ ಸೀಟು ಕೇವಲ 27 ಮಾತ್ರ. ಅಣ್ಣಾಮಲೈ ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸಿದ್ದರು. ತಮಿಳುನಾಡಿನಲ್ಲಿ 2026ರ ಚುನಾವಣೆಯಲ್ಲೇ ಬಿಜೆಪಿ ಅಧಿಕಾರಕ್ಕೆ ಬರಲಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಅಷ್ಟರಲ್ಲೇ ತಮಿಳುನಾಡು ಅಧ್ಯಕ್ಷ ಸ್ಥಾನದಿಂದ ಅಣ್ಣಾಮಲೈ ಕೆಳಗಿಳಿಯಬೇಕಾಯಿತು. ಎಐಎಡಿಎಂಕೆ ಜೊತೆಗಿನ ಮೈತ್ರಿ ಮುನ್ನಲೆಗೆ ಬಂದಿತ್ತು. ಇದೀಗ ಎಐಎಡಿಎಂಕೆ ಬಹುಪಾಲು ಪಡೆದುಕೊಂಡಿದೆ. ಎನ್‌ಡಿಎ ಮೈತ್ರಿ ಪಕ್ಷಗಳ ಪೈಕಿ ಎಐಎಡಿಎಂಕೆ 178 ಸೀಟು ಪಡೆಯುವಲ್ಲಿ ಯಶಸ್ವಿಯಾಗಿದೆ.

ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸೀಟು ಹಂಚಿಕೆಯಲ್ಲಿ ಮೇಲುಗೈ ಸಾಧಿಸಿದೆ. ಡಿಎಂಕೆ ವಿರುದ್ದ ಎದ್ದಿರುವ ಆಡಳಿತ ವಿರೋಧಿ ಅಲೆಯನ್ನು ಎಐಡಿಎಂಕೆ ಬಳಸಿಕೊಳ್ಳಲಿದೆ ಎಂದಿದೆ. ತಮಿಳುನಾಡಿಲ್ಲಿ ಗರಿಷ್ಠ ಸೀಟಿನೊಂದಿಗೆ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದಿದೆ. ತಮಿಳುನಾಡಿನಲ್ಲಿ ಬಿಜೆಪಿ ಪಕ್ಷಕ್ಕೆ ಕೇವಲ 27 ಸೀಟು ಹಂಚಿಕೆಯಾಗಿದ್ದರೆ, ಎಐಎಡಿಎಂಕೆಗೆ 178 ಸೀಟುಗಳು ಹಂಚಿಕೆಯಾಗಿದೆ. ಇನ್ನು ಪಿಎಂಕೆ ಪಾರ್ಟಿಗೆ 18 ಸೀಟುಗಳನ್ನು ನೀಡಲಾಗಿದ್ದರೆ, ಎಎಂಎಂಕೆ ಪಕ್ಷಕ್ಕೆ 11 ಸೀಟು ಹಂಚಿಕೆ ಮಾಡಲಾಗಿದೆ. ಕಳೆದೆ ಚುನಾವಣೆಯಲ್ಲಿ ಎಐಎಡಿಎಂಕೆ 179 ಸೀಟು ಪಡೆದುಕೊಂಡು ಸ್ಪರ್ಧಿಸಿತ್ತು. ಈ ಪೈಕಿ 66 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 2021ರಲ್ಲಿ ಬಿಜೆಪಿ 20 ಸ್ಥಾನದಲ್ಲಿ ಸ್ಪರ್ಧಿಸಿತ್ತು. ಈ ಪೈಕಿ ಕೇವಲ 4 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ಬಿಜೆಪಿ 30 ಸ್ಥಾನದಲ್ಲಿ ಸ್ಪರ್ಧಿಸಲು ನಿರ್ಧರಿಸಿತ್ತು. ಆದರೆ ಸೀಟು ಹಂಚಿಕೆಯಲ್ಲಿ 27 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

Category
ಕರಾವಳಿ ತರಂಗಿಣಿ