ಡೆಹ್ರಾಡೂನ್ : 1954 ರಲ್ಲಿ ಟಿಬೆಟ್ ಅನ್ನು ಚೀನಾದ ಭಾಗವೆಂದು ಭಾರತ ಗುರುತಿಸಿತ್ತು. ಅಲ್ಲದೇ ಚೀನಾ ಮತ್ತು ಭಾರತ ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿದವು. ಔಪಚಾರಿಕ ಒಪ್ಪಂದದ ಮೂಲಕ ಉತ್ತರದ ಗಡಿಯ ಸಮಸ್ಯೆಯ ಇತ್ಯರ್ಥವಾಗಬಹುದು ಎಂದು ಭಾರತ ಅಂದುಕೊಂಡಿತ್ತು ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ. ಡೆಹ್ರಾಡೂನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅನಿಲ್ ಚೌಹಾಣ್, "... ಆದರೆ ವ್ಯಾಪಾರಕ್ಕಾಗಿ ಮಾತ್ರ ಈ ಒಪ್ಪಂದ ಎಂಬುದು ಚೀನಾದ ನಿಲುವು ಆಗಿತ್ತು. ಇದು ಗಡಿಯಲ್ಲಿ ಚೀನಾದ ನಿಲುವನ್ನು ಯಾವುದೇ ರೀತಿಯಲ್ಲಿ ಪ್ರತಿಬಿಂಬಿಸುವುದಿಲ್ಲ. ಇಂದಿಗೂ ದುರ್ಗಮ ಹಿಮಾಲಯದ ಭೂಪ್ರದೇಶದಲ್ಲಿ ವಾಸ್ತವ ನಿಯಂತ್ರಣ ರೇಖೆ (LAC) ಸೂಕ್ಷ್ಮವಾಗಿಯೇ ಉಳಿದಿದೆ ಎಂದರು.
ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಮತ್ತು ಆಗಿನ ಚೀನಾದ ಪ್ರಧಾನ ಮಂತ್ರಿ ಝೌ ಎನ್ಲೈ ಅವರು ಪಂಚಶೀಲ ಒಪ್ಪಂದ ಅಥವಾ ಶಾಂತಿಯುತ ಸಹಬಾಳ್ವೆ ಸೇರಿದಂತೆ ಐದು ತತ್ವಗಳಿಗೆ ಸಹಿ ಹಾಕಿದರು. ಬ್ರಿಟಿಷರು ಹೊರಟುಹೋದರು, ಅವರು ಒಂದು ದಿನ ಹೊರಡಬೇಕಾಗಿತ್ತು. ನಮ್ಮ ಮುಂಭಾಗ ಎಲ್ಲಿದೆ ಎಂಬುದನ್ನು ಭಾರತ ನಿರ್ಧರಿಸಬೇಕಾಗಿತ್ತು. ನೆಹರೂ ಬಹುಶಃ ಪೂರ್ವದಲ್ಲಿ ನಾವು ಮ್ಯಾಕ್ ಮೋಹನ್ ಗಡಿ ಹೊಂದಿದ್ದೇವೆ ಎಂದು ತಿಳಿದಿದ್ದರು. ಲಡಾಖ್ ಪ್ರದೇಶದಲ್ಲಿಯೂ ಇದೇ ರೀತಿಯಲ್ಲಿ ನಾವು ಹೇಳ್ತಾ ಇದ್ದೀವಿ. ಆದರೆ ಅದು ಅಲ್ಲಿರಲಿಲ್ಲ. ಅದಕ್ಕಾಗಿಯೇ ಅವರು ಪಂಚಶೀಲ ಒಪ್ಪಂದಕ್ಕೆ ಹೋಗಲು ಬಯಸಿದ್ದರು ಎಂದು ಸಿಡಿಎಸ್ ಹೇಳಿದರು. 890-ಕಿಮೀ ಉದ್ದದ ಮ್ಯಾಕ್ ಮೋಹನ್ ಗಡಿರೇಖೆ ಪೂರ್ವದಲ್ಲಿ ಬ್ರಿಟಿಷ್ ಇಂಡಿಯಾ ಮತ್ತು ಟಿಬೆಟ್ ನಡುವಿನ ಗಡಿಯಾಗಿತ್ತು. ಟಿಬೆಟ್ ನ ಸೋಕಾಲ್ಡ್ ವಿಮೋಚನೆ ನಂತರ ಚೀನಿಯರು ಈ ಪ್ರದೇಶದಲ್ಲಿ ಸ್ಥಿರತೆ ಬಯಸುತ್ತಿದ್ದಾರೆ ಎಂದರು. ಚೀನಿಯರಿಗೂ ಸಹ ಒಂದು ರೀತಿಯ ವಿಮೋಚನೆಯನ್ನು ಹೊಂದಿದ್ದರಿಂದ, ಸೋ ಕಾಲ್ಡ್ ವಿಮೋಚನೆಗೊಂಡ ಟಿಬೆಟ್ ನವರು ಲಾಸಾಗೆ ಸ್ಥಳಾಂತರಗೊಂಡರು. ಕ್ಸಿನ್‌ಜಿಯಾಂಗ್‌ಗೆ ತೆರಳಿದರು. ಈ ನಿರ್ದಿಷ್ಟ ಪ್ರದೇಶ ಎರಡೂ ಕಡೆಗಳಿಂದ ಉದ್ವಿಗ್ವತೆಗೆ ಸಿಲುಕಿತ್ತು. ಆದ್ದರಿಂದ ಅವರು ಸ್ಥಿರತೆಯನ್ನು ಬಯಸಿದ್ದರು. ಹೀಗಾಗಿ ಈ ಪ್ರದೇಶವು ಕೆಲವು ರೀತಿಯ ಆದ್ಯತೆಯನ್ನು ಪಡೆದುಕೊಂಡಿದೆ. ಸ್ವತಂತ್ರ ಭಾರತವು ಚೀನಾದೊಂದಿಗೆ ಉತ್ತಮ ಸಂಬಂಧವನ್ನು ನಿರ್ಮಿಸಲು ಉತ್ಸುಕವಾಗಿತ್ತು ಮತ್ತು 1949 ರಲ್ಲಿ ಚೀನಾ ಸ್ವಾತಂತ್ರ್ಯ ಗಳಿಸಿದ ನಂತರಬ್ರಿಟಿಷರಿಂದ ಪಡೆದ ವಿಶೇಷ ಸವಲತ್ತುಗಳನ್ನು ಬಿಟ್ಟುಕೊಟ್ಟಿತು ಎಂದು ಜನರಲ್ ಚೌಹಾಣ್ ಹೇಳಿದರು.