ನವದೆಹಲಿ: 2020ರ ದೆಹಲಿ ಗಲಭೆ ಪಿತೂರಿ ಪ್ರಕರಣದಲ್ಲಿ ಕಳೆದ 5 ವರ್ಷಗಳಿಂದ ಜೈಲಿನಲ್ಲಿರುವ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಹಾಗೂ ಇತರರ ಜಾಮೀನು ಅರ್ಜಿಗಳ ತೀರ್ಪನ್ನು ಸುಪ್ರೀಂ ಕೋರ್ಟ್ ಜ.5ಕ್ಕೆ ನಿಗದಿಪಡಿಸಿದೆ.ನ್ಯಾ. ಅರವಿಂದ್ ಕುಮಾರ್ ಹಾಗೂ ನ್ಯಾ. ಎನ್.ವಿ. ಅಂಜಾರಿಯಾ ಅವರ ದ್ವಿಸದಸ್ಯ ಪೀಠ ತೀರ್ಪು ಪ್ರಕಟಿಸಲಿದೆ.53 ಜನರ ಸಾವಿಗೆ ಕಾರಣವಾದ ದೆಹಲಿ ಗಲಭೆಯ ಪಿತೂರಿ ಆರೋಪದಲ್ಲಿ ಖಾಲಿದ್ ಹಾಗೂ ಇತರರನ್ನು ಬಂಧಿಸಿ ದೇಶದ್ರೋಹ ಕೇಸು ಹಾಕಲಾಗಿದೆ. ಇತ್ತೀಚೆಗಷ್ಟೇ ಇವರ ಬಿಡುಗಡೆ ಕೋರಿ ಅಮೆರಿಕದ 8 ಸಂಸದರು ಪತ್ರ ಬರೆದಿದ್ದರು. ನ್ಯೂಯಾರ್ಕ್ನ ಮೇಯರ್ ಝೊಹ್ರಾನ್ ಮಮ್ದಾನಿ ಖಾಲಿದ್ಗೆ ಪತ್ರ ಬರೆದಿದ್ದರು.