image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ದೆಹಲಿ ದಂಗೆ ಆರೋಪಿ ಉಮರ್ ಖಾಲೀದ್ ಬಿಡುಗಡೆಗೆ ಒತ್ತಾಯಿಸಿದ ಅಮೇರಿಕಾ ಜನಪ್ರತಿನಿದಿಗಳು...!

ದೆಹಲಿ ದಂಗೆ ಆರೋಪಿ ಉಮರ್ ಖಾಲೀದ್ ಬಿಡುಗಡೆಗೆ ಒತ್ತಾಯಿಸಿದ ಅಮೇರಿಕಾ ಜನಪ್ರತಿನಿದಿಗಳು...!

ನವದೆಹಲಿ : ಐದು ವರ್ಷದ ಹಿಂದೆ ದೆಹಲಿಯಲ್ಲಿ ಸಂಭವಿಸಿದ ದಂಗೆ, ಪ್ರತಿಭಟನೆಯಲ್ಲಿ ಪಿತೂರಿ ಮಾಡಿದ ಆರೋಪದಲ್ಲಿ ಜೈಲಿನಲ್ಲಿರುವ ಉಮರ್ ಖಾಲೀದ್​ಗೆ ಅಮೆರಿಕದಲ್ಲಿ ಈಗ ಒಂದು ಗುಂಪು ಬೆಂಬಲ ಕೊಡಲು ಯತ್ನಿಸುತ್ತಿದೆ. ಅಮೆರಿಕದ ಎಂಟು ಮಂದಿ ಜನಪ್ರತಿನಿಧಿಗಳು ಉಮರ್ ಖಾಲೀದ್ ಬಿಡುಗಡೆಗೆ ಒತ್ತಾಯಿಸಿದ್ದಾರೆ. ಜಮ್ಮು ಕಾಶ್ಮೀರದ ವಿದ್ಯಾರ್ಥಿ ಮುಖಂಡರಾಗಿದ್ದ ಉಮರ್ ಖಾಲೀದ್ ಅವರು ಹಾಗೂ ಇತರ ಸಹ-ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ಈ ಎಂಟು ಜನರು ಪತ್ರ ಬರೆದಿದ್ದಾರೆ. ಡಿಸೆಂಬರ್ 30ರಂದು ಬರೆಯಲಾಗಿರುವ ಈ ಪತ್ರವನ್ನು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಮೋಹನ್ ಕ್ವಾತ್ರ ಅವರಿಗೆ ಕೊಡಲಾಗಿದೆ. ಉಮರ್ ಖಾಲೀದ್​ರನ್ನು ಅಂತಾರಾಷ್ಟ್ರೀಯ ಕಾನೂನು ಪ್ರಕಾರ ಜಾಮೀನು ನೀಡಿ, ನ್ಯಾಯಯುತವಾಗಿ ವಿಚಾರಣೆ ನಡೆಸಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಖ್ಯಾತ ಚಿತ್ರ ತಯಾರಕಿ ಮೀರಾ ನಾಯರ್ ಅವರ ಮಗ, ಹಾಗೂ ನ್ಯೂಯಾರ್ಕ್ ಸಿಟಿಯ ಹೊಸ ಮೇಯರ್ ಜೋಹ್ರನ್ ಮಮ್ದಾನಿ ಅವರು ಉಮರ್ ಖಾಲೀದ್​ಗೆ ವೈಯಕ್ತಿಕವಾಗಿ ಪತ್ರ ಬರೆದಿದ್ದಾರೆ. 'ನಿಮ್ಮ ಬಗ್ಗೆಯೇ ಚಿಂತಿಸುತ್ತಿದ್ದೇವೆ' ಎಂದು ಹೇಳಿ ತಮ್ಮ ಕೈಯಿಂದಲೇ ಬರೆದ ಪತ್ರವನ್ನು ಡಿಸೆಂಬರ್ ತಿಂಗಳಲ್ಲಿ ಉಮರ್ ಖಾಲೀದ್ ಅವರ ಪೋಷಕರಿಗೆ ಕೊಟ್ಟಿದ್ದಾರೆ. ಉಮರ್ ಅವರ ಪೋಷಕರು ಅಮೆರಿಕಕ್ಕೆ ಹೋಗಿದ್ದಾಗ ಈ ಪತ್ರ ಕೊಡಲಾಗಿದೆ. ಉಮರ್ ಖಾಲೀದ್ ಅವರ ಸಹಚರೆಯಾದ ಬನಜ್ಯೋತ್ಸ್ನಾ ಲಾಹಿರಿ ಅವರು ತಮ್ಮ ಎಕ್ಸ್​ನಲ್ಲಿ ಈ ವಿಚಾರವನ್ನು ಟ್ವೀಟ್ ಮಾಡಿದ್ದಾರೆ. 'ಪ್ರಿಯ ಉಮರ್, ಜೀವನದ ಕಹಿ ಹಾಗೂ ಅದು ಸ್ವನಾಶಕ್ಕೆ ಆಸ್ಪದ ಕೊಡದೇ ತಡೆಯುವುದು ಎಷ್ಟು ಮುಖ್ಯ ಎಂದು ನೀವು ಹೇಳಿದ ಮಾತುಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿರುತ್ತೇನೆ. ನಿಮ್ಮ ಪೋಷಕರನ್ನು ಭೇಟಿ ಮಾಡಿದ್ದು ಸಂತಸ ತಂದಿತು. ನಾವೆಲ್ಲರೂ ನಿಮ್ಮದೇ ಯೋಚನೆಯಲ್ಲಿದ್ದೇವೆ' ಎಂದು ಜೋಹ್ರಾನ್ ಮಮ್ದಾನಿ ಆ ಪತ್ರದಲ್ಲಿ ಬರೆದಿದ್ದಾರೆ.

Category
ಕರಾವಳಿ ತರಂಗಿಣಿ