ನವದೆಹಲಿ : ಬಾಂಗ್ಲಾದೇಶದಿಂದ ನಕಲಿ ಚಿನ್ನವು ವಿವಿಧ ದೇಶಗಳಿಗೆ ಮಾರಾಟ ಆಗುತ್ತಿದೆ ಎಂದು ಅಂತರಾಷ್ಟ್ರೀಯ ಮಾದ್ಯಮವೊಂದು ವರದಿ ಮಾಡಿದೆ. ಅಸಲಿ ಚಿನ್ನದ ತಲೆಯ ಮೇಲೆ ಹೊಡೆದಂತೆ ಈ ಚಿನ್ನವಿದ್ದು, ಇದನ್ನು ಬಾಂಗ್ಲಾ ಗೋಲ್ಡ್ ಎನ್ನಲಾಗುತ್ತದೆ. ಖುದ್ದು ಚಿನ್ನಾಭರಣ ಮಳಿಗೆಯವರಿಗೂ, ಚಿನ್ನದ ಎಕ್ಸ್ಪರ್ಟ್ಗಳಿಗೂ ಇದನ್ನು ಗುರುತಿಸುವುದು ಕಷ್ಟ ಎನ್ನಲಾಗಿದೆ. ಇದು ಹಲವರಿಗೆ ತಲೆನೋವಾಗಿದ್ದರೂ, ಕೆಲವು ಚಿನ್ನಾಭರಣ ಮಾರಾಟ ಮಾಡುವವರಿಗೆ ಇದು ಸಹಜವಾಗಿ ಪ್ಲಸ್ ಪಾಯಿಂಟ್ ಆಗುತ್ತಿದೆ. ಇದಕ್ಕೆ ಕಾರಣ, ಚಿನ್ನದ ಎಕ್ಸ್ಪರ್ಟ್ಗಳೇ ಇದನ್ನು ಗುರುತಿಸುವುದು ಕಷ್ಟಸಾಧ್ಯ. ಅಷ್ಟಕ್ಕೂ ಅಸಲಿ ಚಿನ್ನ ಎಂದು ನಕಲಿ ಚಿನ್ನವನ್ನು ಕೊಂಡು ತಂದು, ಅದಕ್ಕೆ ಅಸಲಿ ಚಿನ್ನದ ಬೆಲೆ ಕೊಟ್ಟು ಖುಷಿ ಪಡುವ ಗ್ರಾಹಕರು ಇದಕ್ಕೆ ಬಲಿಪಶು ಆಗುತ್ತಿದ್ದಾರೆ ಎನ್ನುತ್ತಾರೆ ತಜ್ಞರು. ಏಕೆಂದರೆ ಈ ಬಾಂಗ್ಲಾದ ರೆಡ್ ಗೋಲ್ಡ್,ನ್ನು ಅಸಲಿನೋ, ನಕಲಿನೋ ಗುರುತಿಸುವುದು ಕಷ್ಟ. ಇದನ್ನು ಕರಗಿಸಿದರು ಕೂಡ ಅಸಲಿ ಚಿನ್ನದ ರೀತಿಯಲ್ಲಿಯೇ ಕಾಣಿಸುತ್ತದೆ. ಇದನ್ನು ದ್ರಾವಣದಲ್ಲಿ ಅದ್ದಿದರೂ ಅಸಲಿಗೂ, ನಕಲಿಗೂ ವ್ಯತ್ಯಾಸ ಅಷ್ಟೊಂದು ಗೊತ್ತಾಗುವುದಿಲ್ಲವಂತೆ! ಆದರೆ, ಗ್ರಾಹಕರು ಕೊಳ್ಳುವ ಚಿನ್ನವನ್ನು ಮುಂದೊಂದು ದಿನ ಅವರ ಯಾವುದಾದರೂ ಕಷ್ಟದ ಕಾಲದಲ್ಲಿ ಇಡಲು ಹೋದಾಗ ಮಾತ್ರ ಸಮಸ್ಯೆ ಬಂದರೂ ಬರಬಹುದಾದ ದೊಡ್ಡ ಅನಾಹುತಗಳ ಬಗ್ಗೆಯೂ ಅಲ್ಲಗಳೆಯುವಂತಿಲ್ಲ ಎಂದು ತಜ್ಞರೊಬ್ಬರು ಅಂತಾರಾಷ್ಟ್ರೀಯ ಮಧ್ಯಾವೊಂದಕ್ಕೆ ತಿಳಿಸಿದ್ದಾರೆ.