ನವದೆಹಲಿ : ಆರ್ಟಿಫೀಶಿಯಲ್ ಇಂಟಲಿಜೆನ್ಸ್ (ಎಐ) ಸವಾಲು ಹೆಚ್ಚಿಸಲಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ. ಈಗಾಗಲೆ ಎಐ ಗಾಡ್ಫಾದರ್ ಜೆಫ್ರಿ ಹಿಂಟನ್ ಹಾಗೂ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಎಐ ನಿಂದ ಹಲವರ ಕೆಲಸಕ್ಕೆ ಕುತ್ತು ಬರಲಿದೆ ಎಂದಿದ್ದರು. ಇದೀಗ ಮೈಕ್ರೋಸಾಫ್ಟ್ ಈ ಕುರಿತು ಅಧ್ಯಯನ ಪಟ್ಟಿ ರಿಲೀಸ್ ಮಾಡಿದೆ. 40 ಕೆಲಸಗಳು 2026ರಲ್ಲಿ ಎಐ ನಿಂದ ಇಲ್ಲವಾಗಲಿದೆ. ಇವೆಲ್ಲವನ್ನು ಎಐ ಸೆಕೆಂಡ್ಗಳಲ್ಲಿ ಮಾಡಿ ಮುಗಿಸಲಿದೆ ಎಂದಿದೆ. 2026ರಲ್ಲಿ ಗರಿಷ್ಠ ಅಪಾಯದಲ್ಲಿರುವ 40 ಕೆಲಸದ ಕುರಿತು ಮೈಕ್ರೋಸಾಫ್ಟ್ ಪಟ್ಟಿ ನೀಡಿದೆ. ಇದಕ್ಕಾಗಿ ಮೈಕ್ರೋಸಾಫ್ಟ್ ಕೋಪೈಲೆಟ್ ಚಾಟ್ಬಾಟ್ ಮೂಲಕ 2 ಲಕ್ಷ ರಿಯಲ್ವರ್ಲ್ಡ್ ಪ್ರತಿಕ್ರಿಯೆ ಸೇರಿದಂತೆ ಹಲವು ಮೂಲಗಳ ಡೇಟಾ, ಉದ್ಯಮಗಳಲ್ಲಿನ ತಂತ್ರಜ್ಞಾನ, ಅಗತ್ಯತೆ, ನಿರ್ವಹಣೆಗಳನ್ನು ವಿಶ್ಲೇಷಣೆ ಮಾಡಿ ಈ ಪಟ್ಟಿ ತಯಾರಿಸಲಾಗಿದೆ. ಯಾವೆಲ್ಲಾ ಕ್ಷೇತ್ರದಲ್ಲಿ ಎಐ ಕ್ಷಿಪ್ರ ಕ್ರಾಂತಿ ಮಾಡಲಿದೆ ಎಂಬುದರ ಅಧ್ಯಯನ ವರದಿಯಲ್ಲಿ ಹಲವು ಕ್ಷೇತ್ರಗಳು ಉಲ್ಲೇಖಗೊಂಡಿದೆ.
ದ್ವಿಭಾಷಿಗಳು ಮತ್ತು ಅನುವಾದಕರು, (ಟ್ರಾನ್ಸಲೇಟರ್)
ಇತಿಹಾಸಕಾರರು,
ಪ್ರಯಾಣಿಕರ ಸಹಾಯಕರು (ಪ್ಯಾಸೆಂಜರ್ ಅಟೆಂಡೆನ್ಸ್),
ಸೇವಾ ಮಾರಾಟ ಪ್ರತಿನಿಧಿಗಳು,
ಬರಹಗಾರರು ಮತ್ತು ಲೇಖಕರು,
ಗ್ರಾಹಕ ಸೇವಾ ಪ್ರತಿನಿಧಿಗಳು (ಕಸ್ಟಮರ್ ಕೇರ್),
ಸಿಎನ್ಸಿ ಟೂಲ್ ಪ್ರೋಗ್ರಾಮರ್,
ಟೆಲಿಫೋನ್ ಆಪರೇಟರ್ಗಳು,
ಟಿಕೆಟ್ ಏಜೆಂಟ್ಗಳು ಮತ್ತು ಟ್ರಾವೆಲ್ ಕ್ಲರ್ಕ್ಗಳು,
ಬ್ರಾಡ್ಕಾಸ್ಟ್ ಅನೌನ್ಸರ್ಸ್ ಮತ್ತು ರೇಡಿಯೋ ಡಿಜೆಗಳು,
ಬ್ರೋಕರೇಜ್ ಕ್ಲರ್ಕ್ಗಳು,
ಕೃಷಿ ಮತ್ತು ಗೃಹ ನಿರ್ವಹಣಾ ಶಿಕ್ಷಕರು,
ಟೆಲಿಮಾರ್ಕೆಟರ್ಗಳು,
ಸ್ವಾಗತ ಸಹಾಯಕರು,
ರಾಜಕೀಯ ವಿಜ್ಞಾನಿಗಳು,
ಸುದ್ದಿ ವಿಶ್ಲೇಷಕರು, ವರದಿಗಾರರು ಮತ್ತು ಪತ್ರಕರ್ತರು,
ಗಣಿತಜ್ಞರು,
ತಾಂತ್ರಿಕ ಬರಹಗಾರರು,
ಕರಡು ತಿದ್ದುವವರು ಮತ್ತು ಕಾಪಿ ಮಾರ್ಕರ್ಸ್,
ಅತಿಥಿ ಸತ್ಕಾರ ಮಾಡುವವರು,
ಸಂಪಾದಕರು,
ಉನ್ನತ ಶಿಕ್ಷಣದ ವ್ಯವಹಾರ ಶಿಕ್ಷಕರು,
ಸಾರ್ವಜನಿಕ ಸಂಪರ್ಕ ತಜ್ಞರು,
ಪ್ರದರ್ಶಕರು ಮತ್ತು ಉತ್ಪನ್ನ ಪ್ರವರ್ತಕರು,
ಜಾಹೀರಾತು ಮಾರಾಟ ಏಜೆಂಟ್ಗಳು,
ಹೊಸ ಖಾತೆಗಳ ಕ್ಲರ್ಕ್ಗಳು,
ಸಂಖ್ಯಾಶಾಸ್ತ್ರದ ಸಹಾಯಕರು,
ಕೌಂಟರ್ ಮತ್ತು ಬಾಡಿಗೆ ಕ್ಲರ್ಕ್ಗಳು,
ದತ್ತಾಂಶ ವಿಜ್ಞಾನಿಗಳು,
ವೈಯಕ್ತಿಕ ಆರ್ಥಿಕ ಸಲಹೆಗಾರರು,
ದಾಖಲೆ ಸಂರಕ್ಷಕರು,
ಉನ್ನತ ಶಿಕ್ಷಣದ ಅರ್ಥಶಾಸ್ತ್ರ ಶಿಕ್ಷಕರು, l
ವೆಬ್ ಡೆವಲಪರ್ಗಳು,
ನಿರ್ವಹಣಾ ವಿಶ್ಲೇಷಕರು,
ಭೂಗೋಳಶಾಸ್ತ್ರಜ್ಞರು,
ಮಾಡೆಲ್ಗಳು,
ಮಾರುಕಟ್ಟೆ ಸಂಶೋಧನಾ ವಿಶ್ಲೇಷಕರು,
ಸಾರ್ವಜನಿಕ ಸುರಕ್ಷತಾ ಟೆಲಿಕಮ್ಯುನಿಕೇಟರ್ಗಳು,
ಸ್ವಿಚ್ಬೋರ್ಡ್ ಆಪರೇಟರ್ಗಳು,
ಗ್ರಂಥಾಲಯ ವಿಜ್ಞಾನ ಶಿಕ್ಷಕರು ಹೀಗೆ 40 ಕೆಲಸಗಳು ಅಪಾಯದಲ್ಲಿವೆ.