ಹೊಸದಿಲ್ಲಿ: ತ್ರಿವಳಿ ತಲಾಖ್‌ನ ಬಗೆಯಾದ "ತಲಾಖ್-ಎ-ಹಸನ್' ಆಚರಣೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಈ ಪದ್ಧತಿಯನ್ನು ರದ್ದುಗೊಳಿಸುವ ಸುಳಿವು ನೀಡಿದೆ. ಪತ್ರಕರ್ತೆ ಬೆನಜೀರ್ ಹೀನಾ ಅವರ ಪ್ರಕರಣದ ವಿಚಾರಣೆ ವೇಳೆ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ತಲಾಖ್-ಎ-ಹಸನ್ ಆಚರಣೆಯಲ್ಲಿ ಪತಿಯು ಸತತ 3 ತಿಂಗಳ ಕಾಲ ತಿಂಗಳಿಗೊಮೆ¬¾ ತಲಾಖ್ ಎಂದು ಹೇಳುವ ಮೂಲಕ ವಿಚ್ಛೇದನ ನೀಡುತ್ತಾನೆ. ಇದು ಮಹಿಳೆಯ ಘನತೆಯ ಪ್ರಶ್ನೆ. ಆಧುನಿಕ ಯುಗದಲ್ಲೂ ಇಂಥ ಆಚರಣೆ ಹೇಗೆ ಮುಂದುವರಿಸುತ್ತೀರಿ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಪ್ರಶ್ನಿಸಿದೆ. ಹೀನಾ ಅವರ ಪತಿ ವಿಚ್ಛೇದನ ಪತ್ರಕ್ಕೆ ಸಹಿ ಹಾಕದೇ, ಅವರ ವಕೀಲರ ಮೂಲಕ ತಲಾಖ್ ಘೋಷಿಸಿದ್ದು, ಇದರಿಂದ ದಾಖಲೆಗಳಲ್ಲಿ ವಿಚ್ಛೇದಿತೆ ಎಂದು ನಮೂದಿಸಲು ಹೀನಾ ಪರದಾಡಿ, ಕೋರ್ಟ್ ಮೊರೆ ಹೋಗಿದ್ದಾರೆ. ಮುಂದಿನ ವಿಚಾ ರಣೆ ವೇಳೆ ಇಸ್ಲಾಂನ ವಿಚ್ಛೇದನ ಪದ್ಧತಿಗಳ ಮಾಹಿತಿ ಸಲ್ಲಿಸುವಂತೆ ಸೂಚಿಸಿದೆ. ಪ್ರಕರಣವನ್ನು 5 ಸದಸ್ಯ ರಿರುವ ಪೀಠಕ್ಕೆ ವರ್ಗಾಯಿಸುವ ಸುಳಿವನ್ನೂ ನೀಡಿದೆ.