image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಕಚೇರಿಯಲ್ಲಿನ ಗುಜರಿ ವಸ್ತುಗಳ ಮಾರಾಟದಿಂದ 800 ರೂ. ಕೋಟಿ ಆದಾಯಗಳಿಸಿದ ಕೇಂದ್ರ ಸರ್ಕಾರ

ಕಚೇರಿಯಲ್ಲಿನ ಗುಜರಿ ವಸ್ತುಗಳ ಮಾರಾಟದಿಂದ 800 ರೂ. ಕೋಟಿ ಆದಾಯಗಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ತಿಂಗಳು ಹಮ್ಮಿಕೊಂಡಿದ್ದ ಬೃಹತ್ ಸ್ವಚ್ಛತಾ ಅಭಿಯಾನದ ವೇಳೆ ಗುಜರಿ (ನಿರುಪಯೋಗಿ ವಸ್ತುಗಳ) ಮಾರಾಟದಿಂದ 800 ರೂ. ಕೋಟಿಗಳಷ್ಟು ಗಣನೀಯ ಆದಾಯ ಗಳಿಸಿದೆ. ಗಮನಾರ್ಹ ಸಂಗತಿಯೆಂದರೆ, ಈ ಮೊತ್ತವು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ಚಂದ್ರಯಾನ-3 ಮಿಷನ್‌ನ ಬಜೆಟ್ 615 ಕೋಟಿ ರೂ.ಗಿಂತಲೂ ಹೆಚ್ಚಾಗಿದೆ. ಮಾಧ್ಯಮದ ವರದಿಯೊಂದರ 2021 ರಲ್ಲಿ ವಾರ್ಷಿಕ ಅಭಿಯಾನ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗಿನ ಒಟ್ಟು ಸರ್ಕಾರಿ ಆದಾಯವು ಇದೀಗ ಬರೋಬ್ಬರಿ 4,100 ಕೋಟಿ ರೂ.ಗಳಿಗೆ ತಲುಪಿದೆ. ಈ ವರ್ಷ ಅಕ್ಟೋಬರ್ 2 ರಿಂದ 31ರ ನಡುವೆ ನಡೆದ ಈ ಅಭಿಯಾನದಲ್ಲಿ ದಾಖಲೆಯ ಮಟ್ಟದ ಸಾಧನೆಯಾಗಿದೆ. ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ ಆಶ್ರಯದಲ್ಲಿ, ಸಾಗರೋತ್ತರ ಮಿಷನ್‌ಗಳನ್ನು ಒಳಗೊಂಡಂತೆ ಒಟ್ಟು 84 ಸಚಿವಾಲಯಗಳು ಮತ್ತು ಇಲಾಖೆಗಳ ನಡುವೆ ಪರಿಣಾಮಕಾರಿ ಅಂತರ-ಸಚಿವಾಲಯ ಸಮನ್ವಯವನ್ನು ಸಾಧಿಸಲಾಯಿತು. ಮೂವರು ಹಿರಿಯ ಸಚಿವರಾದ ಮನ್‌ಸುಖ್ ಮಾಂಡವಿಯಾ, ಕೆ ರಾಮ್ ಮೋಹನ್ ನಾಯ್ಡು ಮತ್ತು ಡಾ. ಜಿತೇಂದ್ರ ಸಿಂಗ್ ಅವರು ಈ ಸಂಪೂರ್ಣ ಅಭಿಯಾನವನ್ನು ಮೇಲ್ವಿಚಾರಣೆ ಮಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಚಿವಾಲಯಗಳಿಗೆ ಈ ವಿಶೇಷ ಅಭಿಯಾನದ ಅಡಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸತತವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ.

2021 ಮತ್ತು 2025 ರ ನಡುವೆ, ಕೇಂದ್ರವು ಐದು ಯಶಸ್ವಿ ವಿಶೇಷ ಅಭಿಯಾನಗಳನ್ನು ನಡೆಸಿದೆ. ಇದು ಸರ್ಕಾರದ ಕಚೇರಿಗಳಲ್ಲಿ 'ಸ್ವಚ್ಛತೆ'ಯನ್ನು ಸಾಂಸ್ಥೀಕರಿಸಲು ಮತ್ತು ಬಾಕಿ ಉಳಿದಿರುವ ಕೆಲಸಗಳನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ಕೇಂದ್ರ ಸರ್ಕಾರದ 'ಸ್ವಚ್ಛತಾ' ಅಭಿಯಾನದ ಐದು ಹಂತಗಳಲ್ಲಿ ಒಟ್ಟು 23.62 ಲಕ್ಷ ಕಚೇರಿಗಳು ಭಾಗವಹಿಸಿದ್ದು, ಈ ಮೂಲಕ ಒಟ್ಟಾರೆಯಾಗಿ 928.84 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು ಮುಕ್ತಗೊಳಿಸಲಾಗಿದೆ. ಈ ಬೃಹತ್ ಪ್ರಯತ್ನದಲ್ಲಿ 166.95 ಲಕ್ಷ ಕಡತಗಳನ್ನು ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದೆ ಅಥವಾ ಮುಚ್ಚಲಾಗಿದೆ ಮತ್ತು ಈ ಅವಧಿಯಲ್ಲಿ ನಿರುಪಯುಕ್ತ ವಸ್ತುಗಳ (ಸ್ಕ್ರ್ಯಾಪ್) ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಒಟ್ಟು 4,097.24 ಕೋಟಿ ರೂ.ಗಣನೀಯ ಆದಾಯ ಬಂದಿದೆ ಎಂದು ವರದಿಯಾಗಿದೆ. ಈ ವರ್ಷ, ವಿವಿಧ ಸಚಿವಾಲಯಗಳ ಕ್ಯಾಬಿನೆಟ್ ಸಚಿವರು ಮತ್ತು ರಾಜ್ಯ ಸಚಿವರು ಅಭಿಯಾನವನ್ನು ಪರಿಶೀಲಿಸಿದ್ದಾರೆ, ಸಿಬ್ಬಂದಿಯೊಂದಿಗೆ ನಿಯಮಿತವಾಗಿ ಸಂವಾದ ನಡೆಸಿದ್ದಾರೆ. ಇದು ಅಭಿಯಾನದ ಯಶಸ್ಸಿಗೆ ಕಾರಣವಾಗಿದೆ.

Category
ಕರಾವಳಿ ತರಂಗಿಣಿ