image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಭಾರತ ದೇಶದಲ್ಲಿ ಸ್ವತಂತ್ರವಾಗಿದ್ದೇನೆ: ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್‌ ಹಸೀನಾ

ಭಾರತ ದೇಶದಲ್ಲಿ ಸ್ವತಂತ್ರವಾಗಿದ್ದೇನೆ: ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್‌ ಹಸೀನಾ

ನವದೆಹಲಿ: 'ಈ ದೇಶದಲ್ಲಿ ಸ್ವತಂತ್ರವಾಗಿದ್ದೇನೆ, ಭಾರತ ಬಿಟ್ಟು ಹೋಗಲ್ಲ' ಎಂದು ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್‌ ಹಸೀನಾ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಶೇಖ್ ಹಸೀನಾ, ತಾವು ದೆಹಲಿಯಲ್ಲಿ ಮುಕ್ತವಾಗಿ ಆದರೆ ಎಚ್ಚರಿಕೆಯಿಂದ ವಾಸಿಸುತ್ತಿದ್ದು, ಭಾರತವನ್ನು ತೊರೆಯುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. 'ನಾನು ಭಾರತದ ರಾಜಧಾನಿ ಹೊಸದಿಲ್ಲಿಯಲ್ಲಿ ಸ್ವತಂತ್ರವಾಗಿ ಬದುಕುತ್ತಿದ್ದೇನೆ. ಇಲ್ಲಿ ನನಗೆ ಯಾವ ತೊಂದರೆಗಳೂ ಇಲ್ಲ. ಆದರೆ ನನ್ನ ಮಾತೃಭೂಮಿ ಬಾಂಗ್ಲಾದೇಶಕ್ಕೆ ಮರಳಬೇಕು, ಅಲ್ಲಿನ ಜನರ ನೋವಿಗೆ ಧ್ವನಿಯಾಗಬೇಕು, ಬಾಂಗ್ಲಾದೇಶವನ್ನು ದುಷ್ಟ ಶಕ್ತಿಗಳ ಕಪಿಮುಷ್ಠಿಯಿಂದ ರಕ್ಷಿಸಬೇಕು ಎಂಬುದು ನನ್ನ ಮನದಾಸೆಯಾಗಿದೆ' ಎಂದು ಶೇಖ್‌ ಹಸೀನಾ ಭಾವನಾತ್ಮಕವಾಗಿ ಹೇಳಿದ್ದಾರೆ. ಈವರೆಗಿನ ಬೆಳವಣಿಗೆಗಳ ಕುರಿತು ಇದೇ ಮೊದಲ ಬಾರಿಗೆ ಸುದ್ದಿಸಂಸ್ಥೆ ರಾಯಿಟರ್ಸ್‌ ಜೊತೆ ಮಾತನಾಡಿರುವ ಹಸೀನಾ, '2026ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಪಕ್ಷ ಅವಾಮಿ ಲೀಗ್ ಸ್ಪರ್ಧಿಸುವ ವಿಶ್ವಾಸವಿದೆ' ಎಂದಿದ್ದಾರೆ.

'ಅವಾಮಿ ಲೀಗ್ ಮೇಲಿನ ನಿಷೇಧವು ಅನ್ಯಾಯ ಮಾತ್ರವಲ್ಲ. ಅದು ಸ್ವಯಂ ಸೋಲಾಗಿದೆ. ಲಕ್ಷಾಂತರ ಜನರು ನಮ್ಮ ಪಕ್ಷವನ್ನು ಬೆಂಬಲಿಸುತ್ತಾರೆ. ಅವರ್‍ಯಾರು ಮತ ಚಲಾಯಿಸುವುದಿಲ್ಲ. ಮತದಾರರನ್ನು ವಂಚಿಸಲು ಸಾಧ್ಯವಿಲ್ಲ. ನಮ್ಮ ಪಕ್ಷದ ಬೆಂಬಲಿಗರು ಚುನಾವಣೆಯನ್ನು ಬಹಿಷ್ಕರಿಸಲಿದ್ದಾರೆ' ಎಂದು ಹೇಳಿದ್ದಾರೆ. 'ಮುಂದಿನ ವರ್ಷ ನಡೆಯಲಿರುವ ಬಾಂಗ್ಲಾದೇಶದ ರಾಷ್ಟ್ರೀಯ ಚುನಾವಣೆ, ಅವಾಮಿ ಲೀಗ್ ಪಕ್ಷ, ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪಗಳು ಮತ್ತು ತಮ್ಮ ದೇಶಕ್ಕೆ ಮರಳುವ ಅವರ ಯೋಜನೆಗಳ ಬಗ್ಗೆ ಮಾತನಾಡಿದ ಶೇಖ್ ಹಸೀನಾ, 'ಅಲ್ಲಿನ ಸರ್ಕಾರ ಕಾನೂನುಬದ್ಧವಾಗಿದ್ದರೆ, ಸಂವಿಧಾನವನ್ನು ಎತ್ತಿಹಿಡಿಯುತ್ತಿದ್ದರೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ನಿಜವಾಗಿಯೂ ಮೇಲುಗೈ ಸಾಧಿಸಿದ್ದರೆ, ನಾನು ಬಾಂಗ್ಲಾದೇಶಕ್ಕೆ ಹೋಗಲು ಇಷ್ಟಪಡುತ್ತೇನೆ' ಎಂದರು. 'ಲಕ್ಷಾಂತರ ಆವಾಮಿ ಲೀಗ್‌ ಕಾರ್ಯಕರ್ತರು ಮುಂದಿನ ವರ್ಷ ನಡೆಯಲಿರುವ ಬಾಂಗ್ಲಾದೇಶದ ರಾಷ್ಟ್ರೀಯ ಚುನಾವಣೆಯನ್ನು ಬಹಿಷ್ಕರಿಸಲಿದ್ದಾರೆ. ಬಾಂಗ್ಲಾದೇಶಿಯರ ಬದುಕನ್ನು ದುಸ್ತರ ಮಾಡಿರುವ ಮಧ್ಯಂತರ ಸರ್ಕಾರ, ಜನರ ಧ್ವನಿಯಾಗಿರುವ ಆವಾಮಿ ಲೀಗ್‌ ಪಕ್ಷಕ್ಕೆ ಅದೆಷ್ಟು ಹೆದರುತ್ತದೆ ಎಂಬುದಕ್ಕೆ ಪಕ್ಷದ ಮೇಲೆ ಹೇರಿರುವ ಚುನಾವಣಾ ನಿಷೇಧವೇ ಸಾಕ್ಷಿ' ಎಂದು ಶೇಖ್‌ ಹಸೀನಾ ಗುಡುಗಿದ್ದಾರೆ.

ವಿದ್ಯಾರ್ಥಿಗಳ ವಿರುದ್ಧ ದಂಗೆಯನ್ನು ಹತ್ತಿಕ್ಕಲು ಮಾರಣಾಂತಿಕ ದಾಳಿ ನಡೆಸಿದ ಆರೋಪ ಹಸೀನಾ ಅವರ ಮೇಲಿದ್ದು, ಈ ಕುರಿತ ಪ್ರಕರಣದ ವಿಚಾರಣೆಯನ್ನು ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಾಲಯ ಮುಕ್ತಾಯಗೊಳಿಸಿದೆ. ನವೆಂಬರ್ 13ಕ್ಕೆ ತೀರ್ಪು ಪ್ರಕಟಗೊಳ್ಳುವ ಸಾಧ್ಯತೆಯಿದೆ. ಬಾಂಗ್ಲಾದೇಶದಲ್ಲಿ ನಾಗರಿಕ ಸೇವಾ ಕೋಟಾ ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳ ನಂತರ 78 ವರ್ಷದ ನಾಯಕಿ ಶೇಖ್ ಹಸೀನಾ ಕಳೆದ ವರ್ಷ ಆಗಸ್ಟ್‌ನಲ್ಲಿ ಢಾಕಾದಿಂದ ದೆಹಲಿಗೆ ಪಲಾಯನ ಮಾಡಿದ್ದರು. ಪಲಾಯನ ಬಳಿಕ ಭಾರತಕ್ಕೆ ಓಡಿ ಬಂದಿದ್ದ ಅವರು ದೆಹಲಿಯಲ್ಲಿ ಆಶ್ರಯ ಪಡೆದಿದ್ದಾರೆ. ಶೇಖ್ ಹಸೀನಾ ಪದಚ್ಯುತಿಯ ನಂತರ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಬಾಂಗ್ಲಾದೇಶವನ್ನು ಆಳುತ್ತಿದೆ. ಫೆಬ್ರವರಿ 2027ರಲ್ಲಿ ರಾಷ್ಟ್ರೀಯ ಚುನಾವಣೆಗಳನ್ನು ನಡೆಸುವುದಾಗಿ ಘೋಷಣೆ ಮಾಡಿದೆ.

Category
ಕರಾವಳಿ ತರಂಗಿಣಿ