image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ತೇಜಸ್‌ ಎಂಕೆ 1ಎ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ಮೊದಲ ಬಾರಿ ಯಶಸ್ವಿ ಹಾರಾಟ

ತೇಜಸ್‌ ಎಂಕೆ 1ಎ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ಮೊದಲ ಬಾರಿ ಯಶಸ್ವಿ ಹಾರಾಟ

ನವದೆಹಲಿ: ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿ. ನಿರ್ಮಿಸಿರುವ ದೇಸಿ ಲಘು ಯುದ್ಧ ವಿಮಾನ ತೇಜಸ್‌ ಎಂಕೆ 1ಎ ನಾಸಿಕ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಆಗಸದಲ್ಲಿ ಹಾರಾಟ ನಡೆಸಿತು. ನಾಸಿಕ್ ನಲ್ಲಿ ಎಲ್‌ಸಿಎ ತೇಜಸ್ ಎಂಕೆ1ಎಯ 3ನೇ ಮತ್ತು ಎಚ್‌ಟಿಟಿ-40 ರ 2ನೇ ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್, "ಕೆಲವು ದಿನಗಳ ಹಿಂದೆ ನಾವು ಮಿಗ್‌ 21 (MiG-21) ಅನ್ನು ನಿಷ್ಕ್ರಿಯಗೊಳಿಸಿದ್ದೇವೆ. ದೀರ್ಘಕಾಲದವರೆಗೆ, ಮಿಗ್‌ 21 ರಾಷ್ಟ್ರಕ್ಕೆ ಸೇವೆ ಸಲ್ಲಿಸಿತು. ಎಚ್‌ಎಎಲ್‌ ತನ್ನ ಕಾರ್ಯಾಚರಣೆಯ ಅಗತ್ಯಗಳನ್ನು ಪೂರೈಸುವಲ್ಲಿ ಮಹತ್ವದ ಕೊಡುಗೆ ನೀಡಿದೆ. ಮಿಗ್-21 ಕೇವಲ ಯುದ್ಧ ವಿಮಾನವಲ್ಲ, ಭಾರತ-ರಷ್ಯಾದ ಆಳವಾದ ಸಂಬಂಧಕ್ಕೆ ಸಾಕ್ಷಿಯಾಗಿತ್ತು.ಇದನ್ನು ನೀಡುವಲ್ಲಿ ನಿಮ್ಮ ಕೊಡುಗೆಯನ್ನು ನಾನು ಪ್ರಶಂಸಿಸುತ್ತೇನೆ" ಎಂದು ಹೇಳಿದರು. ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ ಗಾಗಿ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನ‌ (ಎಚ್‌ಎಎಲ್‌) ವಿಮಾನ ಸಂಶೋಧನೆ ಮತ್ತು ವಿನ್ಯಾಸ ಕೇಂದ್ರ (ಎಆರ್‌ಡಿಸಿ)ದ ಸಹಯೋಗದೊಂದಿಗೆ ಏರೋನಾಟಿಕಲ್‌ ಅಭಿವೃದ್ಧಿ ಏಜೆನ್ಸಿ (ಎಡಿಎ) ವಿನ್ಯಾಸಗೊಳಿಸಿದ ಭಾರತೀಯ ಬಹುವಿಧದ ಕಾರ್ಯಕ್ಷಮತೆಯ ಲಘು ಯುದ್ಧ ವಿಮಾನ ಇದಾಗಿದೆ.

ಇತ್ತೀಚೆಗೆ ನಿವೃತ್ತಿ ಪಡೆದ ಮಿಗ್‌ 21 ಯುದ್ಧವಿಮಾನಗಳ ಸ್ಥಾನವನ್ನು ಈ ತೇಜಸ್‌ ಎಂಕೆ 1ಎ ತುಂಬಲಿದೆ. ಆದ್ದರಿಂದ ಭಾರತೀಯ ವಾಯುಪಡೆಗೆ ಇದೊಂದು ಮೈಲಿಗಲ್ಲಾಗಲಿದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಎಚ್‌ಎಎಲ್‌ ಕೇಂದ್ರದಲ್ಲಿ ಈ ಲಘು ಯುದ್ಧ ವಿಮಾನಗಳು ತಯಾರಾಗುತ್ತಿವೆ. ಈ ವಿಮಾನ ಶತ್ರುಗಳ ರಾಡಾರ್‌ಗಳಿಂದ ತಪ್ಪಿಸಿಕೊಳ್ಳಲು ಮತ್ತು ಅವರ ಕ್ಷಿಪಣಿಗಳನ್ನು ದಾರಿತಪ್ಪಿಸಲು ಸ್ವಯಂ ರಕ್ಷಾ ಕವಚ ಹೊಂದಿರುವ ಏಕ ಎಂಜಿನ್‌ ಸಾಮರ್ಥ್ಯದ ಬಹುವಿಧದ ಕಾರ್ಯಕ್ಷಮತೆ ಹೊಂದಿರುವ ಯುದ್ಧ ವಿಮಾನವಾಗಿದೆ.

Category
ಕರಾವಳಿ ತರಂಗಿಣಿ